ಅಪ್ಪನ ಅಲ್ಸರ್ ಖಾಯಿಲೆ ಮತ್ತು ಅಂಕಗಳ ವ್ಯಾಮೋಹ
ಈಗಿನಂತೆ ಮೊಬೈಲ್ ಕಾಲವೂ ಅಲ್ಲ. ಊರಿಗೆ ಲ್ಯಾಂಡ್ ಫೋನ್ ಸಹ ಇರಲಿಲ್ಲ. ಅಪ್ಪನ ಜೊತೆಯಲ್ಲಿ ಹೋಗಿದ್ದ ಕೆಲವರು ಬೆಳಿಗ್ಗೆ ಬಂದು ಹೇಳಿದಾಗಲೆ ನಮಗೆ ತಿಳಿದಿದ್ದು. ಅಪ್ಪನಿಗೆ ‘ಅಲ್ಸರ್’ ಆಗಿದೆ ವಿಪರೀತ ಹಾಲ್ಕೋಹಾಲ್ ಸೇವನೆಯಿಂದ ಹೀಗಾಗಿದೆ ಎಂದು. ಬೆಳಗ್ಗೆಯಷ್ಟರಲ್ಲಿ ಶಸ್ತ್ರಚಿಕಿತ್ಸೆ ಮುಗಿದು, ಯಶಸ್ವಿಯಾಗಿತ್ತು. ಜೀವಕ್ಕೆ ಅಪಾಯವಿರಲಿಲ್ಲ. ಆದರೆ ಮೂರು ತಿಂಗಳು ಆಸ್ಪತ್ರೆಯಲ್ಲಿಯೇ ಇರಬೇಕು ಎಂಬ ವಿಷಯವನ್ನು ತಿಳಿಸಿದ್ದರು. ರಾತ್ರಿ ಇಡೀ ನಿದ್ದೆಯಿಲ್ಲದೆ ಆತಂಕದಿಂದಲೇ ಕಳೆದಿದ್ದ ನಾವೆಲ್ಲ ನಿಟ್ಟುಸಿರು ಬಿಟ್ಟಿದ್ದೆವು.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಆರನೆಯ ಕಂತು ನಿಮ್ಮ ಓದಿಗೆ