ಹಾಡಬೇಕು ನಾವೀಗ ಗೆಳತಿಯರೇ ಸ್ತ್ರೀಸಖ್ಯಗೀತೆಯ..: ಎಲ್.ಜಿ.ಮೀರಾ ಅಂಕಣ
ಹೆಂಗಸರು ಇದೇ ರೀತಿ ತಮ್ಮ ಸಂಜೆಗಳನ್ನು ಕಳೆಯಲು ಸಾಧ್ಯವೇ? ಅಡಿಗೆಮನೆಯ ಜವಾಬ್ದಾರಿ, ಮಕ್ಕಳ ದೇಖರೇಖಿ, ನೆಂಟರಿಷ್ಟರ ಉಪಚಾರ ಮುಂತಾದವುಗಳು ಹೆಣ್ಣಿನ ಸಂಜೆ, ಇಳಿಸಂಜೆಗಳನ್ನು ಕಬಳಿಸುವುದು ವಾಸ್ತವ ಸಂಗತಿ. ಸಂಜೆ ಗಂಡು ಮಾಡುವ `ಚಿಲ್ಲಿಂಗ್’ ಚಟುವಟಿಕೆಗಳನ್ನು ಹೆಣ್ಣು ಮಾಡಿದರೆ ಅವಳನ್ನು ಬೀದಿ ಬಸವಿ, ಬೇಜವಾಬ್ದಾರಿ ಹೆಣ್ಣು, ಚೆಂಗ್ಲು ಹೊಡೆಯುವವಳು ಎಂದೆಲ್ಲ ಅಂದು ಆಡಿ ಕೆಟ್ಟ ಹಣೆಪಟ್ಟಿಗಳನ್ನು ಹಚ್ಚಲಾಗುತ್ತದೆ. ಸನ್ನಿವೇಶ ಹೀಗಿರುವಾಗ, ಹೆಣ್ಣುಗಳು ಸಾಯಂಕಾಲಗಳಲ್ಲಿ ಮನೆಯಿಂದ ಹೊರಗೇ ಬರದಿರುವಾಗ ಅವರ ನಡುವೆ ಸ್ನೇಹ ಸಂಬಂಧಗಳು ಮೂಡುವುದು ಹೇಗೆ?
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ