ಒಡಲ ಕುಡಿಯ ಕಿತ್ತುಕೊಂಡವರಿಗೆ ಎಷ್ಟು ಸುಖವೋ
ನಾನಾಗ ಎಷ್ಟು ಪರಿಚಿತ ಆಗಿದ್ದೆ ಎಂದರೆ… ಯಾವತ್ತೂ ಅತ್ತು ಅತ್ತೂ; ಕಣ್ಣೀರ ಬರೆ ಇಳಿದು ಉಳಿದು ಉಳಿದು ಮಚ್ಚೆಯಂತೆ ಕೆನ್ನೆ ಮೇಲೆ ಬರೆಯ ಗುರುತು ಇರುತ್ತಿತ್ತು. ನಾವಾಗ ಮುಖ ತೊಳೆವುದೆಲ್ಲಿತ್ತು. ಕಣ್ಣೀರೇ ಅಂಟಿರುತ್ತಿದ್ದವು. ನನ್ನ ತಾಯ ಸಂಗಡವೇ ನನಗೆ ಸಿಗುತ್ತಿರಲಿಲ್ಲ. ಸದಾ ಯಾವತ್ತೂ ಕಸಮುಸುರೆಯ ಕೆಲಸದ ಜೀತದವಳಂತಿದ್ದಳು. ನನ್ನ್ ತಮ್ಮನ ಅವರು ದತ್ತು ತೆಗೆದುಕೊಂಡು ಹೋದ ನಂತರ ಮತ್ತೂ ಮೆತ್ತಗಾಗಿ ಬಿಟ್ಟಿದ್ದಳು.
ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶʼ ಸರಣಿಯ ಹತ್ತನೇಯ ಕಂತು.