ಗಡಗಡ ನಡುಗಿಸಿದ ಪಾವಗಡದ ತೋಳ: ಸುಮಾ ಸತೀಶ್ ಸರಣಿ
ಒಂದೇ ಉಸಿರ್ನಾಗೆ ಅಂಗೇ ವಾಪಸ್ ತಿರುಗ್ದೆ. ಒಂದು ಕಿತ, ಅಲ್ಲಾ ಕಾಲು ನೋಡ್ಬೇಕಿತ್ತು. ತಿರುಗ್ಸಿದ್ರೆ ಮಾತ್ರ ದೆವ್ವ ಅಲ್ವಾ ಅಂತ ಅನ್ನುಸ್ತು. ಇನ್ನೊಂದು ಕಿತ ಬ್ಯಾಡ್ವೇ ಬ್ಯಾಡ, ತೋಳ ದೆವ್ವ ಅಲ್ಲ. ಒಂದ್ಕಿತ ಹಿಂದುಕ್ ತಿರ್ಗಿ ನೋಡ್ತಿವ್ನಿ, ಅನುಮಕ್ಕ ಕೈ ತೋರ್ಸಿ ನಿಲ್ಲು ಅಂತಾವ್ಳೆ. ಹಿಂದಿಂದೇನೆ ಬರ್ತಾವ್ಳೆ. ದ್ಯಾವ್ರೆ ಏನ್ ಮಾಡ್ಲಿ. ಈಗೇನಾರಾ ಈ ತೋಳುದ್ ಕೈಯಾಗೆ ಸಿಕ್ಕಿ ಸತ್ತು ನರಕುಕ್ಕೇನಾರೂ ಹೋದ್ರೆ, ದರದರನೆ ಎಳ್ಕೋ ಹೋಗಿ ಬಿಸಿ ಬಿಸಿ ಎಣ್ಣೆ ಕುದಿಯೋ ಬಾಂಡ್ಲೀಗೆ ಹಾಕಿ ಬೋಂಡಾ ಬಜ್ಜಿ ತರ ತೇಲುಸ್ತಾರೆ ಅನ್ನೋದು ನೆಪ್ಪಾತು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯ