Advertisement

Tag: ರಂಜಾನ್ ದರ್ಗಾ

ಸಮತೆಯ ಸಂತ, ಕಾಮ್ರೇಡ್ ವಿ.ಎನ್. ಪಾಟೀಲ: ರಂಜಾನ್‌ ದರ್ಗಾ ಸರಣಿ

ಪ್ರಾಮಾಣಿಕ ರಾಜಕಾರಣಿಗಳು ತಮ್ಮ ಇಳಿವಯಸ್ಸಿನಲ್ಲಿ ಎಷ್ಟೊಂದು ಕಷ್ಟಪಡುವರು ಎಂಬುದರ ಬಗ್ಗೆ ಅರಿವಿದ್ದ ನನಗೆ ಅಂದು ಬಹಳ ಹೊತ್ತಿನವರೆಗೆ ನಿದ್ರೆ ಬರಲಿಲ್ಲ. ಪ್ರಾಮಾಣಿಕ ರಾಜಕಾರಣಿಗಳಿಗೆ ಇಂಥ ಗತಿ ಬರದೆ ಬೇರೆ ದಾರಿಯಿಲ್ಲ ಎನಿಸಿತು. ಎಷ್ಟೋ ಮರಿಪುಢಾರಿಗಳು ವಿಧಾನ ಸೌಧ, ಮಂತ್ರಿಗಳ ಮನೆ ಮತ್ತು ಶಾಸಕರ ಭವನದ ಮುಂದೆ ಕಾರಲ್ಲಿ ಸುತ್ತಾಡುವುದನ್ನು ನೋಡಿದ ನನಗೆ, ನನ್ನ ನಾಯಕನೊಬ್ಬ ಈ ರೀತಿ ಯಾವ ಸೌಲಭ್ಯಗಳೂ ಇಲ್ಲದೆ ಬದುಕುವುದನ್ನು ನೋಡಿ ಅತೀವ ಖೇದವೆನಿಸಿತು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 69ನೇ ಕಂತು ನಿಮ್ಮ ಓದಿಗೆ

Read More

ನನ್ನ ತವನಿಧಿ…: ರಂಜಾನ್ ದರ್ಗಾ ಬರೆಯುವ ಸರಣಿ

ಜನಸಾಮಾನ್ಯರ ಶಕ್ತಿಯಲ್ಲಿ ಮತ್ತು ಜ್ಞಾನ ಶಕ್ತಿಯಲ್ಲಿ ಅವರಿಗೆ ಅಪಾರವಾದ ನಂಬಿಕೆ ಇದೆ. ಒಬ್ಬ ವಕೀಲನಿಗೆ ತನ್ನ ಕ್ಷೇತ್ರದಲ್ಲಿನ ಎಷ್ಟು ಶಬ್ದಗಳು ಗೊತ್ತಿವೆಯೋ ಅದಕ್ಕಿಂತ ಹೆಚ್ಚಿನ ಶಬ್ದಗಳು ಮೀನುಗಾರನಿಗೆ ಅವನ ಸಮುದ್ರ ಸಂಬಂಧದಿಂದ ಗೊತ್ತಾಗುತ್ತವೆ ಎಂದು ಅವರು ಹೇಳಿದ್ದರು. ಆತನಿಗೆ ವಿವಿಧ ಜಾತಿಯ ಜಲಚರಗಳು, ಗಾಳಿ, ಮೋಡಗಳು, ತೆರೆಗಳು, ಕಾಲ ಮತ್ತು ದಿನಮಾನಗಳ ಪರಿಚಯವಿರುತ್ತದೆ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 68ನೇ ಕಂತು ನಿಮ್ಮ ಓದಿಗೆ

Read More

ರಂಜಾನ್ ದರ್ಗಾ ಬರೆಯುವ ʻನೆನಪಾದಾಗಲೆಲ್ಲʼ ಸರಣಿ ಮತ್ತೆ ಆರಂಭ

ಒಂದು ದಿನ ಮಧ್ಯಾಹ್ನದ ಡ್ಯೂಟಿಗಾಗಿ ಪ್ರಜಾವಾಣಿ ಕಚೇರಿಗೆ ಬರುವಾಗ ಟೈಂ ಆಫೀಸಿನ ಎದುರಿಗೆ ಮುಖ್ಯ ಗೇಟ್ ಮುಂದೆ ಜವಾಹಾರ ಬಾಲಭವನದ ದಿನಗೂಲಿಗಳೆಲ್ಲ ನಿಂತಿದ್ದರು. ಇವರೇಕೆ ಬಂದಿದ್ದಾರೆ ಎಂದು ಯೋಚನೆ ಮಾಡುವಷ್ಟರಲ್ಲಿ ಒಬ್ಬಾತ ಮುಂದೆ ಬಂದು, “ಸರ್ ನಿಮಗೆ ಥ್ಯಾಂಕ್ಸ್ ಹೇಳಲು ಬಂದಿದ್ದೇವೆ. ತಾವು ಬರೆದ ಲೇಖನ ಫಲ ನೀಡಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಚಂದ್ರಪ್ರಭಾ ಅರಸು ಅವರು ನಮ್ಮ ಸ್ಥಿತಿಗತಿ ಅರಿತುಕೊಂಡು ನಮ್ಮೆಲ್ಲರ ಸಂಬಳ ಹೆಚ್ಚು ಮಾಡಿದ್ದಾರೆ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 67ನೇ ಕಂತು ನಿಮ್ಮ ಓದಿಗೆ

Read More

ಅರ್ಧ ಶತಮಾನದ ರಾಜಕೀಯ ಅರಿವು: ರಂಜಾನ್‌ ದರ್ಗಾ ಸರಣಿ

ಚುನಾವಣೆಯ ದಿನ ವಿಜಾಪುರದ ಒಂದು ಹಳ್ಳಿಯಲ್ಲಿ ನಡೆದ ಘಟನೆಯೊಂದು ನೆನಪಿಗೆ ಬರುತ್ತಿದೆ. ಆಗ ಹತ್ತಿ ಬಿಡಿಸುವ ಕಾಲವಾಗಿತ್ತು. ಜಮೀನುದಾರರು ಚುನಾವಣೆಯ ಹಿಂದಿನ ದಿನ ಆ ಹಳ್ಳಿಯಲ್ಲಿ ಘೋಷಣೆ ಮಾಡಿದ್ದು ಬಹಳ ಹೊಸದಾಗಿತ್ತು. ಚುನಾವಣೆ ದಿನ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತಮ್ಮ ಹೊಲಗಳಲ್ಲಿ ಬೇಕಾದಷ್ಟು ಹತ್ತಿ ಬಿಡಿಸಿಕೊಂಡು ಹೋಗಬಹುದೆಂದು ಘೋಷಿಸಿದರು. ಆದರೆ ಹಳ್ಳಿಗರು ಹತ್ತಿಯ ಆಸೆಗಾಗಿ ಮತ ಚಲಾಯಿಸುವುದನ್ನು ಬಿಡಲಿಲ್ಲ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 66ನೇ ಕಂತು ನಿಮ್ಮ ಓದಿಗೆ

Read More

ಕತ್ತಲಲಿ ಕಂಡ ಮಿನುಗುವ ಕಣ್ಣುಗಳು….

ಆ ಹಾಳು ಗುಡಿಯ ಮುಂದೆ ಹೋದೆವು. ಒಬ್ಬರೂ ಕಾಣಲಿಲ್ಲ. ಅಷ್ಟೊತ್ತಿಗೆ ಒಳಗಿನಿಂದ ಒಬ್ಬ ಯುವಕ ಬಂದ. ದೇವಾಲಯದೊಳಗೆ ಸಂಪೂರ್ಣ ಕತ್ತಲು ಕವಿದಿತ್ತು. ಇದೇನು ಹೀಗೆ ಎಂದಾಗ, ಆತ ‘ಇರುವುದೊಂದೇ ಮೋಂಬತ್ತಿ ನಿಮ್ಮ ಬರುವಿಗೆ ಕಾಯುತ್ತಿದ್ದೆವು’ ಎಂದ. ಒಳಗೆ ಕಾಲಿಟ್ಟಕೂಡಲೆ ಆತ ಮೋಂಬತ್ತಿ ಹಚ್ಚಿದ. ಅಲ್ಲಿ ಕುರ್ಚಿ ಟೇಬಲ್ ಏನೂ ಇರಲಿಲ್ಲ. ಆ ಮೋಂಬತ್ತಿಯ ಬೆಳಕಲ್ಲಿ ನೂರಾರು ಯುವಕರು ಕುಳಿತಿದ್ದು ಮಸುಕು ಮಸುಕಾಗಿ ಕಾಣುತ್ತಿತ್ತು. ಅವರ ಕಣ್ಣುಗಳು ಮಾತ್ರ ನಕ್ಷತ್ರಗಳ ಹಾಗೆ ಹೊಳೆಯುತ್ತಿದ್ದವು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 64ನೇ ಕಂತು ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ