Advertisement

Tag: ರಂಜಾನ್ ದರ್ಗಾ

ಲೆನಿನ್‌ಗ್ರಾಡ್‌ನಲ್ಲಿ ತಿರುಗಾಡಿದ ನೆನಪುಗಳು…

ಗಲೀನಾ ಹೇಳಿದ ಮೊದಲ ಪ್ರಸಂಗವೆಂದರೆ ತಾಯಿಯೊಬ್ಬಳು ತನ್ನ ಕೂಸನ್ನು ನೀರಲ್ಲಿ ಮುಳುಗಿಸಿದ ಹೃದಯವಿದ್ರಾವಕ ಘಟನೆ. ಹಿಟ್ಲರನ ಸೈನ್ಯ ಸೋವಿಯತ್ ದೇಶದ ಹಳ್ಳಿಯೊಂದನ್ನು ಸುತ್ತುವರಿದಿತ್ತು. ರಾತ್ರಿಯ ಗಾಢಾಂಧಕಾರ ಕಳೆದ ಕೂಡಲೆ ಆ ದಟ್ಟ ಅರಣ್ಯದ ಮಧ್ಯದಲ್ಲಿನ ಹಳ್ಳಿಯ ಮೇಲೆ ಬೆಳಗಿನ ಜಾವ ದಾಳಿ ಮಾಡುವ ಯೋಜನೆಯನ್ನು ಹಿಟ್ಲರನ ಸೈನ್ಯ ರೂಪಿಸಿತ್ತು. ಈ ಸುದ್ದಿ ಗೊತ್ತಾಗಿದ್ದರಿಂದ ಆ ಹಳ್ಳಿಗರು ರಾತ್ರಿಯೆ ಹಳ್ಳಿಯನ್ನು ಬಿಟ್ಟು ಬೇರೆಕಡೆ ಹೋಗಬೇಕಿತ್ತು. ರಂಜಾನ್‌ ದರ್ಗಾ ಬರೆಯುವ ಆತ್ಮಕತೆಯ ಸರಣಿ

Read More

ಆ ತಂಪು ವಾತಾವರಣದಲ್ಲೂ ಬೆವರಿದೆ…

ಕೊನೆಗೆ ಗಲೀನಾಗೆ ವಿವರಿಸಬೇಕಾಯಿತು. ನಾನು ಬಹಳ ದುಃಖಿಯಾಗಿದ್ದೇನೆ. ನನ್ನ ಯುವಜನಾಂಗವನ್ನು ನಿಮ್ಮ ಯುವಜನಾಂಗದ ಜೊತೆ ಹೋಲಿಕೆ ಮಾಡಿಕೊಂಡು ನೋವನ್ನು ಅನುಭವಿಸುತ್ತಿದ್ದೇನೆ. ಅಲ್ಲದೆ ನನ್ನ ಸಂಸ್ಕಾರ ಬೇರೆಯೆ ಇದ್ದುದರಿಂದ ಈ ಕುಣಿತ ಸಾಧ್ಯವೇ ಇಲ್ಲದ ಮಾತು ಎಂದೆ. ಅವಳು ಅರ್ಥ ಮಾಡಿಕೊಂಡಳು. ‘ನಾನು ಉತ್ತರ ಭಾರತದ ಪ್ರವಾಸದಲ್ಲಿದ್ದಾಗ ಅಲ್ಲಿನ ಬಡತನ ನೋಡಿ ಮರುಗಿದ್ದೆ’ ಎಂದು ತಿಳಿಸಿದ ಅವಳು, ‘ಐ ಯಾಮ್ ಸೋ ಪ್ರೌಢ ಆಫ್ ಯು’ ಎಂದಳು. ಆ ಸ್ಥಳದಿಂದ ವಾಪಸ್ ಬಂದೆವು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 52ನೇ ಕಂತು ನಿಮ್ಮ ಓದಿಗೆ.

Read More

ಯುದ್ಧದಲ್ಲಿ ಗೆಲ್ಲುವುದು ಸಾವು ಮಾತ್ರ…

ಯುಸಿ಼ಫ್ ತನ್ನ ಹದಿನೈದು ವರ್ಷದ ಮಗ ಆದಮ್‌ನ ಹಿಂದೆ ನಿಂತ. ಅಂಬೆಗಾಲು ಹಾಕುತ್ತ ಜನರ ಕಾಲೊಳಗಿಂದ ಬಾಗಿಲ ಬಳಿ ಹೋಗಲು ಮಗನಿಗೆ ತಿಳಿಸಿದ. ಆದಮ್ ಪ್ರಯತ್ನಪಟ್ಟು ಬಾಗಿಲ ಬಳಿ ಬಂದು ಹೊರಗೆ ನುಸುಳಿ ಓಡತೊಡಗಿದ. ಆದರೆ ನಾಜಿಗಳ ಗುಂಡಿಗೆ ಗುರಿಯಾದ. ಮಗನನ್ನು ಹಿಂಬಾಲಿಸಿದ ಯುಸಿ಼ಫ್ ಮೇಲೂ ಗುಂಡು ಹಾರಿಸಲಾಯಿತು. ನಾಜಿಯೊಂದು ಓಡಿ ಬಂದು ಬಿದ್ದ ಯುಸಿ಼ಫ್‌ನನ್ನು ಬೂಟುಗಾಲಿನಿಂದ ಒದ್ದು, ಬಂದೂಕಿನಿಂದ ತಿವಿಯಲಾಯಿತು. ಖತಿನ್ ಅನುಭವಿಸಿದ ಕೊನೆ ಗಳಿಗೆಯನ್ನು ಮೂರ್ಛಾವಸ್ಥೆಯಲ್ಲಿದ್ದ ಯುಸಿ಼ಫ್ ನೋಡಲಾಗಲಿಲ್ಲ. ನಾಜಿಗಳು ಅಲ್ಲಿಂದ ಹೋದ ನಂತರ ನೆರೆ ಗ್ರಾಮದ ಜನರು ಯುಸಿ಼ಫ್‌ನನ್ನು ಬದುಕಿಸಿದರು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ಸರಣಿ

Read More

ಸಮಾಜವಾದದ ಪ್ರೇರಣೆಗೊಂದು ಉದಾಹರಣೆ ಸೋವಿಯತ್‌ ರಷ್ಯಾ

ಸೋವಿಯತ್ ದೇಶಕ್ಕೆ ನಾನು ಭೇಟಿ ನೀಡಿದ ಸಂದರ್ಭದಲ್ಲಿ ಯುವಕರೆಲ್ಲ ಎರಡನೇ ಮಹಾಯುದ್ಧದ ನಂತರ ಜನಿಸಿದವರೇ ಆಗಿದ್ದರು. ಅವರಿಗೆ ೧೯೧೭ರ ಕ್ರಾಂತಿಯಾಗಲಿ, ೧೯೪೫ರಲ್ಲಿ ಕೊನೆಗೊಂಡ ಎರಡನೇ ಮಹಾಯುದ್ಧದ ಅನಾಹುತಗಳಾಗಲೀ ಅನುಭವಕ್ಕೆ ಬರಲು ಸಾಧ್ಯವೇ ಇಲ್ಲ. ಅವನ್ನೆಲ್ಲ ಅವರು ತಿಳಿದುಕೊಳ್ಳುವುದು ಹಿರಿಯರ ಅನುಭವದಿಂದ, ಇತಿಹಾಸದ ಪುಟಗಳಿಂದ. ಬಹುಪಾಲು ಯುವಕರು ಇದನ್ನೆಲ್ಲ ಅರಿತರೂ ಐರೋಪ್ಯ ದೇಶಗಳ ಜನರ ಮತ್ತು ಅವರು ಬಳಸುವ ವಸ್ತುಗಳ ಸಂಪರ್ಕದಿಂದ ಅವರ ಮನಸ್ಸು ಕ್ರಮೇಣ ಕೊಳ್ಳುಬಾಕ ಸಂಸ್ಕೃತಿಯ ಕಡೆಗೆ ವಾಲತೊಡಗಿತು. ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ ೫೦ನೇ ಕಂತು ಇಲ್ಲಿದೆ.

Read More

ಜ್ಞಾನವೆಂಬುದು ಬಣ್ಣದ ಸೊತ್ತಲ್ಲ ಬಿಡಿ

ಮಾಸ್ಕೋದಲ್ಲಿ ಅನೇಕ ಆಫ್ರಿಕಾದ ಯುವಕರು ರಷ್ಯನ್ ಯುವತಿಯರನ್ನು ಮದುವೆಯಾಗಿದ್ದರು. ಅವರ ಮಕ್ಕಳು ಮಿಶ್ರವರ್ಣದವರಾಗಿದ್ದರು. ದಕ್ಷಿಣ ಆಫ್ರಿಕಾದ ಮಿಶ್ರವರ್ಣೀಯರ ಬಿಷಪ್ ಅಲೆನ್ ಬೊಸೆಕ್ “ವು ಆರ್ ದ ಫ್ಯೂಚರ್ ಆಫ್ ಸೌತ್ ಆಫ್ರಿಕಾ” ಎಂದು ಹೇಳಿದ್ದರು. ಮಿಶ್ರವರ್ಣೀಯರು ದಕ್ಷಿಣ ಆಫ್ರಿಕಾ ಅಷ್ಟೇ ಅಲ್ಲ ಇಡೀ ಜಗತ್ತಿನ ಭವಿಷ್ಯ ಎಂಬುದು ಸಾಬೀತಾಗುತ್ತಿದೆ. ಭಾರತದ ಎಲ್ಲ ಜಾತಿ ಮತ್ತು ಧರ್ಮಗಳಲ್ಲಿಆಫ್ರಿಕಾದ ಮೂಲ  ನಿವಾಸಿಗಳು ಇದ್ದಾರೆ ಬೆಳ್ಳಗಿದ್ದವರೂ ಇದ್ದಾರೆ. ಆದರೂ ಜಾತಿ ಭ್ರಮೆ ಉಳಿದುಕೊಂಡಿದೆ. ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ ೪೯ನೇ ಭಾಗ ಇಲ್ಲಿದೆ.

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ