ಶಾಂತಿನಾಥ ದೇಸಾಯಿಯವರ ಕೃತಿಗಳಲ್ಲಿ ವ್ಯಕ್ತಿಸ್ವಾತಂತ್ರ್ಯದ ಬಿಕ್ಕಟ್ಟುಗಳು
ಆಧುನಿಕತೆಯು ನಮ್ಮ ಮನಸ್ಸಿಗೆ ಇತ್ತ ಸ್ವಾತಂತ್ರ್ಯವನ್ನು ಮೊಟ್ಟಮೊದಲ ಬಾರಿಗೆ ಕನ್ನಡ ಗದ್ಯ ಸಾಹಿತ್ಯದಲ್ಲಿ ಸ್ಪಷ್ಟವಾಗಿ ಗ್ರಹಿಸಿದವರು ದೇಸಾಯರು. ಅವರ ಪಾತ್ರಗಳು ಈ ಸ್ವಾತಂತ್ರ್ಯವನ್ನು ನಿಭಾಯಿಸಲಾಗದ ತಮ್ಮ ವೈಫಲ್ಯದಿಂದ ಕಂಗೆಡುವಂಥವರು. ಸಂಪೂರ್ಣ ಸ್ವಾತಂತ್ರ್ಯವನ್ನು ಭರಿಸುವುದು ಎಷ್ಟು ಕ್ಲಿಷ್ಟಕರವಾದದ್ದು ಮತ್ತು ಈ ಹಾದಿ ಹೆಜ್ಜೆಹೆಜ್ಜೆಗೂ ಎಂಥ ವೈಫಲ್ಯಗಳಿಂದ ಕೂಡಿದ್ದು ಎಂಬುದು ಅವರ ಕಥೆಗಳ ಅಂತರಂಗವನ್ನು ಪ್ರವೇಶಿಸಿದಾಗಲೇ ಗೊತ್ತಾಗುವ ಸಂಗತಿ.
ಕುವೆಂಪು ವಿಶ್ವವಿದ್ಯಾಲಯ ಪ್ರಕಟಿಸಿರುವ “ಶಾಂತಿನಾಥ ದೇಸಾಯಿ ಸಾಹಿತ್ಯ-ವ್ಯಕ್ತಿತ್ವ” ಕೃತಿಯಲ್ಲಿನ ಕಥೆಗಾರ ವಿವೇಕ ಶಾನಭಾಗ ಬರೆದ ಲೇಖನ ನಿಮ್ಮ ಓದಿಗೆ