Advertisement

Tag: ಸಂಜೋತಾ ಪುರೋಹಿತ್‌

ಕೂರಾಪುರಾಣ ೪: ಸೂಜಿಗಳೆಂದರೆ ಸಂಕಷ್ಟವೇ…

ಎರಡು ನಿಮಿಷಗಳ ಕಾಲ ಕೂರಾ ಅವಳನ್ನು ನಮ್ಮೊಡನೆ ಮಾತನಾಡಲು ಬಿಡಲೇ ಇಲ್ಲ. ಅವಳ ಮೇಲೆ ಹತ್ತುವುದು, ಅವಳ ಸುತ್ತ ಸುತ್ತುವುದು, ಅವಳ ಕೆನ್ನೆಯನ್ನು ನೆಕ್ಕುವುದು.. ಎಲ್ಲ ಮಾಡುತ್ತಿದ್ದ. ಒಳಗೆ ಬಂದಾಗ ಆಕೆ ಅವನಿಗೆ ಒಂದೆರಡು ಟ್ರೀಟಿನ ತುಂಡುಗಳನ್ನು ಕೊಟ್ಟಿದ್ದಳು. ಇದೆಲ್ಲ ಅವಳನ್ನು ಒಲಿಸಲಿಕ್ಕೆ ಮತ್ತು ಇನ್ನೆರಡು ತುಂಡುಗಳನ್ನು ಪಡೆಯಲಿಕ್ಕೆ ಎಂದು ನಮಗೆ ಗೊತ್ತಿತ್ತು. ನಿಧಾನವಾಗಿ ಆಕೆ ನಮ್ಮೊಡನೆ ಮಾತನಾಡುತ್ತ ನಾಯಿಗಳ ಆರೋಗ್ಯದ ಬಗ್ಗೆ ವಿವರಿಸತೊಡಗಿದಳು.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ನಾಲ್ಕನೆಯ ಕಂತು

Read More

ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಶುರು….

ಅಮ್ಮ ‘ಬೆಳಗಾರುತಿ ಬೆಳಗಾರತಿ ದತ್ತಾತ್ರೇಯನಿಗೆ’ ಎಂದು ಹಾಡುತ್ತಿದ್ದರೆ ಅದಕ್ಕೆಷ್ಟು ಅರ್ಥವಾಗಿತ್ತೋ… ಒಳಗೆ ಬರಲೊಲ್ಲೆ ಎಂಬಂತೆ ಹೊಸ್ತಿಲಿಗೆ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ನಿಂತಿದ್ದ ಅದರ ಬಲಗಾಲನ್ನು ಎತ್ತಿ ಒಳಗೆ ಇಡಿಸಿದ್ದೆವು. ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ ಅದು ಮನೆಯೊಳಗೆ ಓಡಾಡುವಾಗ ಅದನ್ನು ಎಷ್ಟು ನೋಡಿದರೂ ಸಾಲದು. ನಾವು ಕರೆದರೂ ಹತ್ತಿರ ಬರದೇ ಕುರ್ಚಿಯ ಅಡಿಗೆ ಹೋಗಿ‌ ಮಲಗುತ್ತಿತ್ತು.
ತಮ್ಮ ಮುದ್ದು ನಾಯಿಯ ಕುರಿತು ಸಂಜೋತಾ ಪುರೋಹಿತ ಬರೆಯುವ ಹೊಸ ಸರಣಿ “ಕೂರಾಪುರಾಣ”

Read More

ಸಂಜೋತಾ ಪುರೋಹಿತ್ ಅನುವಾದಿಸಿದ ರಾಬರ್ಟ್‌ ಬಾರ್ರ್ ಕತೆ

ಹ್ಯಾಂಗಿಂಗ್ ಒವರ್‌ಲುಕ್ ತಲುಪಲು ಕೆಲವೇ ಹೆಜ್ಜೆಗಳು ಬಾಕಿಯಿದ್ದವು. ಅದನ್ನು ತಲುಪುವವರೆಗೂ ಆಕೆ ‘ನಾವು ಒಬ್ಬರಿಗೊಬ್ಬರು ತಳುಕು ಹಾಕಿಕೊಂಡಿದ್ದೇವೆ’ ಎಂದು ಮತ್ತೆ ಮತ್ತೆ ತನಗೊಬ್ಬಳಿಗೇ ಕೇಳಿಸುವಂತೆ ಹೇಳಿಕೊಂಡಳು. ಜಾನ್ ಬೋಡಮ್ಯಾನ್ ಶಿಥಿಲವಾಗಿದ್ದ ಆ ಗೋಡೆಯ ಮೇಲೆ ಕುಳಿತ. ಕೈಯ್ಯಲ್ಲಿದ್ದ ಕೋಲನ್ನು ಬಂಡೆಯ ಮೇಲಿಟ್ಟು ಆಕೆ ಅತ್ತಿಂದಿತ್ತ ಓಡಾಡಿದಳು. ಅವಳ ಹೆಜ್ಜೆಗಳಲ್ಲಿ ಭಯ ಇಣುಕುತ್ತಿತ್ತು.
ಸಂಜೋತಾ ಪುರೋಹಿತ್ ಅನುವಾದಿಸಿದ ಸ್ಕಾಟಿಶ್‌- ಕೆನಡಿಯನ್‌ ಕತೆಗಾರ ರಾಬರ್ಟ್‌ ಬಾರ್ರ್ ಕತೆ “ಒಂದು ಆಲ್ಪೈನ್‌ ವಿಚ್ಛೇದನ” ನಿಮ್ಮ ಓದಿಗೆ

Read More

ಹೂದೋಟದ ಹೂಗಳಂಥಾ “ಸಂಗಮ”

‘ಸಂಗಮ’ ಕಥಾ ಸಂಕಲನದಲ್ಲಿ ನನಗೆ ಬಹಳ ಇಷ್ಟವಾಗಿದ್ದು ಕತೆಗಳಿಗೆ ಆಯ್ದುಕೊಂಡಿರುವ ಶೀರ್ಷಿಕೆಗಳು. ಓದಿದ ತಕ್ಷಣ ಕತೆಯ ಬಗ್ಗೆ ಯಾವ ತರಹದ ಸುಳಿವನ್ನೂ ಬಿಟ್ಟು ಕೊಡುವುದಿಲ್ಲ ಅವು. ಆ ಶೀರ್ಷಿಕೆ ಯಾಕೆ ಎಂದು ತಿಳಿಯಬೇಕಿದ್ದರೆ ನೀವು ಇಡೀ ಕತೆಯನ್ನು ಓದಬೇಕು. ಉದಾಹರಣೆಗೆ ಎರಡನೇಯ ಕತೆ ‘ಮೈ ದಾಸ್’ ಅನ್ನೇ ತೆಗೆದುಕೊಳ್ಳಿ. ಊಹುಂ.. ನೀವು ಗೆಸ್ ಮಾಡಲಿಕ್ಕೆ ಸಾಧ್ಯವೇ ಇಲ್ಲ. ಮುಟ್ಟಿದೆಲ್ಲವೂ ಚಿನ್ನ ಎಂಬ ಗಾದೆ ಮಾತಿದೆಯಲ್ವ.. ಅದನ್ನು ನಿಜವಾಗಿಯೂ ಸಾಧ್ಯವಾಗಿಸಲು ಯತ್ನಿಸುವ ವೈಜ್ಞಾನಿಕ ಸಂಶೋಧಕನ ಕತೆ.
ರಾಜಲಕ್ಷ್ಮಿ ಎನ್.‌ ರಾವ್‌ ಅವರ “ಸಂಗಮ” ಕಥಾಸಂಕಲನದ ಕುರಿತು ಸಂಜೋತಾ ಪುರೋಹಿತ್‌ ಬರಹ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ