Advertisement

Tag: ಸಣ್ಣಕತೆ

ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ

ಹಾಗೇ ಒಂದು ಜೊಂಪು ಹತ್ತಿತ್ತು. ಕನಸಿನಲ್ಲಿ ತನ್ನಲ್ಲಿ ಉಳಿದಿದ್ದ ಟಿಕೆಟ್ ಒಂದಕ್ಕೆ ಲಕ್ಷ ರೂಪಾಯಿಯ ಬಂಪರ್ ಬಂದ ಹಾಗೆ, ಅದರಿಂದ ಬಂದ ಹಣದಲ್ಲಿ ತಂಗಿಯ ಮದುವೆ, ತನಗೊಂದು ಮೂರು ಚಕ್ರದ ಸ್ಕೂಟರ್, ಸಣ್ಣದೊಂದು ಲಾಟರಿ ಟಿಕೆಟ್ ಮಾರುವ, ಸ್ಟೇಷನರಿ ಅಂಗಡಿ. ಅದರಿಂದ ಬರುವ ಆದಾಯ. ಅಲ್ಲಿ ಹುಡುಗನೊಬ್ಬನನ್ನು ಕೆಲಸಕ್ಕೆ ಇರಿಸಿ ತಾನು ಬಿ.ಕಾಂ. ಮುಂದುವರಿಸಿದ ಹಾಗೆ……
ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ “ಬಂಪರ್‌ ಬಹುಮಾನ” ನಿಮ್ಮ ಓದಿಗೆ

Read More

ಸುಬ್ರಹ್ಮಣ್ಯ ಹೆಗಡೆ ಬರೆದ ಈ ಭಾನುವಾರದ ಕತೆ

ಅಪರಾಧವು ಸಾಮೂಹಿಕವಾದಾಗ ಅದು ಸಾಮಾಜಿಕ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ತನ್ಮೂಲಕ ನಮ್ಮ ಊರಿನ ಗಂಡಸರೆಲ್ಲ ತಿಂಗಳಿಗೆ ಒಂದೆರಡು ಬಾರಿ ಟೆಂಟಿನಲ್ಲಿ ಬಿಸಿಯಾಗತೊಡಗಿದರು. ಆಸೆಗಳಿಗೆ ಬೇಧಭಾವವಿಲ್ಲ. ಎಲ್ಲರಿಗು ಆಸೆಗಳಿದ್ದರಿಂದ ಯಾರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಕೆಲವು ವರ್ಷಗಳ ನಂತರ ತಾಲೂಕು ಸೆಂಟರಿನಲ್ಲಿ ಮಿನಿ ಥೇಟರು, ವಿಡಿಯೋ ಪಾರ್ಲರುಗಳು ಶುರುವಾದ ಕಾರಣ ಜನರಿಗೆ ಒಳ್ಳೆಯ ಕ್ಲಾರಿಟಿಯ ಅನುಭವ ಸಿಕ್ಕು, ಟೆಂಟು ಸತ್ತು ಹೋಯಿತು.
ಸುಬ್ರಹ್ಮಣ್ಯ ಹೆಗಡೆ ಬರೆದ ಕತೆ “ಪರಾಜಿತ ವಿಠ್ಠಲ ವಿಜಯ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಮಯೂರ ಬಿ ಮಸೂತಿ ಬರೆದ ಈ ಭಾನುವಾರದ ಕತೆ

ತಲೆಗೆ ಮಂಕು ಬಡಿದಂತಾಯಿತು, ಆದರೂ ಚೇತರಿಸಿಕೊಂಡು ಮನೆ ತಲುಪಿದೆ. ಶಶಿ, ಮಕ್ಳು ಕಾಯ್ತಾ ಇದಾರೆ, ಆಗ್ಲೇ ತುಂಬಾ ಹೊತ್ತಾಯ್ತು, ಟೈಮ್ ನೋಡಿ ೧೦:೩೦, ನಂಗು ಜೋರಾಗಿ ನಿದ್ದೆ ಬರ್ತಾ ಇದೆ. ಬೇಗ ಬನ್ನಿ ಊಟ ಮಾಡೋಣವೆಂದಳು ನಿಶಾ. ನಾನು ಏನು ಮಾತಾಡದೆ ಕೈಯಲ್ಲಿದ್ದ ಪೇಪರ್ ಬ್ಯಾಗ್ ಅನ್ನು ಅವಳ ಕೈಗೆ ನೀಡಿದೆ. ಬಿರಿಯಾನಿ ತಿನ್ನಲು ಶುರು ಮಾಡಿದೆವು. ಯಾಕೆ ಶಶಿ ಏನು ಮಾತಾಡುತ್ತಿಲ್ಲ?
ಮಯೂರ ಬಿ ಮಸೂತಿ ಬರೆದ ಈ ಭಾನುವಾರದ ಕತೆ “ಕಬಾಬ್ ಮೆ ಹಡ್ಡಿ”

Read More

ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”

ಸೀತಮ್ಮನ ಗೊಣಗಾಟ ನಿಲ್ಲುವ ಲಕ್ಷಣ ಕಾಣಲಿಲ್ಲ. ಒಂದೊಮ್ಮೆ ಈಕೆ ಸತ್ತು ಹೋಗಬಾರದಿತ್ತ ಎಂಬಷ್ಟು ರೂಪೇಶ್ ಜಿಗುಪ್ಸೆ ಪಟ್ಟುಕೊಂಡ. ನಂದಿನಿ ಒಂದು ನಾಟಕದ ವರ್ಕ್‌ಷಾಪಿಗೆ ರಿಸೋರ್ಸ್‌ ಪರ್ಸನ್ ಆಗಿ ಮುಂಬಯಿಗೆ ಹೋದವಳು ವಾಪಸ್ ಬರಲಿಲ್ಲ! ಕೇಳಿದರೆ ಅವಳು ಏನು ಹೇಳ್ತಾಳೆ ಅಂತ ರೂಪೇಶ್‌ಗೆ ಗೊತ್ತು. ಅಮ್ಮನಿಗೆ ಖುಷಿಯಾಗಿರಬೇಕು. ಈಕೆ ಒಮ್ಮೆ ಸಾಯಬಾರದಾ ಅಂತ ಅವನು ಮತ್ತೆ ಮತ್ತೆ ಸ್ವಗತದಂತೆ ಹೇಳಿಕೊಂಡ.
ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ” ನಿಮ್ಮ ಓದಿಗೆ

Read More

ಚಂದ್ರಶೇಖರ್ ಡಿ. ಆರ್. ಬರೆದ ಈ ಭಾನುವಾರದ ಕತೆ

ಅಮ್ಮ ಹೋಗಿ ಎರಡು ತಿಂಗಳಾಗಿದೆ. ಕ್ಯಾನ್ಸರ್ ಟ್ರೀಟ್‌ಮೆಂಟ್ ಅವಳನ್ನು ಆರೇಳು ತಿಂಗಳು ಬಹುವಾಗೆ ಕಾಡಿಸಿತ್ತು. ಅವಳು ಹೋದಮೇಲೆ ಅಪ್ಪ ಬಹು ಕೃಶವಾಗಿದ್ದಾನೆ. ಅವಳು ಹೋದಮೇಲೆ ಎಷ್ಟೋ ಮಾತುಗಳು ಅವಳಿಗೆ ನಾ ಹೇಳಿಲ್ಲ ಎನಿಸಿ ನೊಂದುಕೊಳ್ಳುತ್ತೇನೆ. ಅವಳಿಂದ ಕೇಳುವುದು ತುಂಬಾ ಇದೆ ಎನಿಸಿ ನಿದ್ದೆ ಬರದೇ ಬೆಳಕಾಕೋವರೆಗು ಒದ್ದಾಡಿದ್ದು ಇದೆ.
ಚಂದ್ರಶೇಖರ್ ಡಿ ಆರ್ ಬರೆದ ಈ ಭಾನುವಾರದ ಕತೆ “ಹಲೋ…” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ