Advertisement

Tag: ಸಾಹಿತ್ಯ

ದೇವರ ಉತ್ಸವ, ಅಭಿಮಾನ, ಬಾಲ್ಯದ ನೆನಪು: ಮಾರುತಿ ಗೋಪಿಕುಂಟೆ ಸರಣಿ

ಒಮ್ಮೆ ನಾನು ನನ್ನ ಓರಗೆಯವ ಇದೇ ಕ್ರಿಕೆಟ್‌ ಕಾರಣಕ್ಕೆ ಜಗಳಕ್ಕೆ ಬಿದ್ದಿದ್ದೆವು. ನನಗೂ ಎಲ್ಲಿಲ್ಲದ ಕೋಪ ಬಂದು ಉಸಿರು ಕಟ್ಟುವಂತೆ ಅವನ ಕೊರಳಿಗೆ ಕೈ ಹಾಕಿ ಒಬ್ಬರನ್ನೊಬ್ಬರು ಬಿಗಿಯಾಗಿ ಹಿಡಿದುಕೊಂಡು ಹೊರಳಾಡುವಾಗ ಕರ್ಕೆಯ (ಹಸಿರು ಹುಲ್ಲು) ದಂಟು ನನ್ನ ಭುಜವನ್ನು ಗಾಯ ಮಾಡಿತ್ತು. ಅದರ ಮಾರ್ಕ್ ಈಗಲೂ ಇದೆ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ

Read More

ನಮ್ಮೊಳಗೂ ಒಂದು “ಬೌಲ್” ಇದೆಯೇ?: ಬಿ.ಕೆ. ಸುಮತಿ ಬರಹ

ಮನುಷ್ಯ ಬದುಕಿನ ಎಲ್ಲ ಹೋರಾಟಗಳನ್ನೂ ಆರಂಭದ ಬಿಕು ಮತ್ತು ಮಾಲಿಂಗನ ಯುದ್ಧದಲ್ಲಿಯೇ ಕಾಣಬಹುದು. ಆ ಯುದ್ಧ ಒಂದು ಚಿತ್ರಮಾಲಿಕೆಯ ಹಾಗಿದೆ. ವಸ್ತುವನ್ನು ಅಪ್ಪಿಕೊಳ್ಳುವುದು, ಬಿಟ್ಟು ಕೊಡಲು ಹೆಣಗಾಡುವುದು, ಕಿತ್ತುಕೊಳ್ಳುವುದು, ಇದೇ ಅಲ್ಲವೇ ನಮ್ಮ ಹೋರಾಟ? ಶಬ್ದ ನಿಶ್ಶಬ್ದದ ಹೋರಾಟ. ಕೊಟ್ಟು ಬಿಟ್ಟಿದ್ದರೆ ಏನಾಗುತ್ತಿತ್ತು? ಮಾಲಿಂಗನಿಗೆ ಅದನ್ನು ಪಡೆಯುವ ಅರ್ಹತೆ ಇತ್ತೇ? ಬಿಕು ಆನಂದನ ಅಗಲಿಕೆಯಿಂದ ವಿಚಲಿತನಾಗಿ ಬಳಲಿ ನಿತ್ರಾಣನಾಗುವುದು ಏಕೆ? ಬಿಕುವಿನ ಆರೈಕೆಯಲ್ಲಿ ಅರಳಿದ ಸುಮಲತೆ ಆತನನ್ನು ಬಿಟ್ಟು ಹೊರಡಲು ಮನಸ್ಸು ಮಾಡಿದ್ದಾದರೂ ಹೇಗೆ?
ಡಾ. ಎಂ.ಎಸ್.‌ ಮೂರ್ತಿಯವರ “ಬೌಲ್‌” ಕಾದಂಬರಿಯ ಕುರಿತು ಬಿ.ಕೆ. ಸುಮತಿ ಬರಹ

Read More

ಸಾಂಸ್ಕೃತಿಕ ಲೋಕಕ್ಕೆ ವೇದಿಕೆಯಾಗಿದ್ದ ನಗರ…

ಪವರ್ ಹೌಸ್ ಹಿಂಭಾಗವೇ ಶಿವನ ಹಳ್ಳಿ. ಆಗ ಅರವತ್ತರ ದಶಕದಲ್ಲಿ ಒಂದು ಹದಿನೈದು ಅಡಿ ಅಗಲದ ಮಣ್ಣಿನ ರಸ್ತೆ ಇವೆರೆಡರ ಮಧ್ಯೆ ಹಾದು ಹೋಗುತ್ತಿತ್ತು. ಪೂರ್ತಿ ಏರಿಯಾ ರೆವೆನ್ಯೂ ನಿವೇಶನಗಳು. ಅರವತ್ತು ನೂರರ ಸೈಟುಗಳು ಐನೂರು ಆರು ನೂರು ರೂಪಾಯಿ. ಸುಮಾರು ಜನ ನಿವೇಶನ ಕೊಂಡವರು ರೆವೆನ್ಯೂ ಆಸ್ತಿ, ಸೈಟು ರೋಡ್ ಆಗುತ್ತೆ ಅಂತ ಹೆದರಿ ಮಾರಿದರು. ಎಷ್ಟೋ ಜನರಿಗೆ ಈ ರೀತಿ ಆಗಿ ಆಗಿ ಹೆದರಿದ್ದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐದನೆಯ ಕಂತು ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕೇಶವ ಮಳಗಿ ಬರೆದ ಕತೆ

ಭಾಳ ಸಿಹಿಸುದ್ದಿಯೇನೂ ಅಲ್ಲ. ಆದರೂ, ಕಹಿಯಂತೂ ಅಲ್ಲಲ. ತೇರಿಗೆ ಹೂವುಹಣ್ಣು ಹಾಕವರಿದ್ರ ಇವತ್ತೇ ತಗೊಂಡು ತಯಾರಾಗ್ರಿ. ನಾಳೆ ಶಿಗತಾವೋ ಇಲ್ಲೋ. ಭಯಂಕರ ತುಟ್ಟಿನು ಇರತಾವು. ಬಿಸಿಲು ಏರಾಕ ಹೊಂಟೈತಿ. ಜರಾ ಚಹಾ ಕುಡೀತಿರೇನು ನೋಡ್ರಿ, ಹೇಳುತ್ತ ತಾನೂ ಹಗುರಾದಂತೆ ಬೋಲ್ಡಿ ಬಾಬಾ ಕೊಳವೆಗೆ ತಂಬಾಕು ತುಂಬಿ ಕಿಡಿ ಹಚ್ಚಿದ. ರುಕುಮವ್ವ, ಚಂದ್ರವ್ವಳನ್ನು ಕೈಯಿಂದ ಎಳೆದುಕೊಳ್ಳುತ್ತ ಬೆನ್ನು ಸವರಿ, ಸಮಾಧಾನ ಆತಿಲ್ಲವಾ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕೇಶವ ಮಳಗಿ ಬರೆದ ಕಥೆ

Read More

ಮಾನವೀಯತೆಗಾಗಿಯೇ ಜೀವ ತೇದವರ ನೆನೆಯುತ್ತಾ…

‘ವರ್ಣ’ ಅಪ್ಪಟ ದಲಿತ ಜಗತ್ತಿನ ಪ್ರಾತಿನಿಧಿಕ ಕವಿತೆ. ಕವಿ ಸುಮ್ಮನೆ ಎಲೆಮರೆಯ ಕಾಯಿಯಂತಿದ್ದರೂ ಬಿಡದೆ ಪ್ರಚೋದಿಸಿ ಅಖಾಡಕ್ಕೆ ಕರೆದು ಕೊನೆಗೆ ಮಣ್ಣುಮುಕ್ಕುವ ಉಢಾಳರಿಗೆ ಎಚ್ಚರಿಕೆಯಂತಿದೆ ಈ ಕವಿತೆ. “ಹಸಿರು, ಕೆಂಪು, ಕಪ್ಪು, ಬಣ್ಣಗಳೊಳಗೆ ಕರಗಿಹೋದ ದಲಿತರ ನೆತ್ತರು ಮತ್ತು ಬೆವರು ಉಳ್ಳವರನ್ನು ಉಸಿರುಗಟ್ಟಿ ಸಾಯಿಸಿದರೆ ಆಶ್ಚರ್ಯಪಡಬೇಕಿಲ್ಲ”. ‘ಹಸಿವು’ ಕವಿತೆ ಅವ್ವನ ಉದಾರತನವನ್ನೂ ಆಕೆಯ ಸಂಸ್ಕಾರವನ್ನೂ ದರ್ಶಿಸಿ ದಂಗುಬಡಿಸುತ್ತದೆ. ಹಸಿವು ಎಂದು ಬಂದವರಿಗೆ ತನ್ನ ಪಾಲಿನ ತಟ್ಟೆಯಲ್ಲಿದ್ದ ಹಿಟ್ಟನ್ನು ಕೊಟ್ಟುಬಿಡುತ್ತಾಳೆ. ಅಭಿಷೇಕ್‌ ವೈ.ಎಸ್. ಬರೆಯುವ “ಕಾವ್ಯದ ಹೊಸ ಕಾಲ” ಅಂಕಣ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ