Advertisement

Tag: abdul rasheed.

ಮುಗ್ಧತೆಯನ್ನೂ ತಾತ್ವಿಕತೆಯನ್ನೂ ಪೋಣಿಸಿಕೊಂಡ ರಶೀದ್‍ರ ಕತೆಗಳು

ಹೆಚ್ಚು ಪ್ರಯಾಸವಿಲ್ಲದೆ ಬರೆಯುವ ಶೈಲಿ  ಕತೆಗಾರ ಅಬ್ದುಲ್ ರಶೀದ್ ಅವರಿಗೆ ಒಲಿದಿದೆ. ಅವರು ಹಾಗೆ ಬರೆದಂತಹ ಬರಹವು ತಿಳಿಹಾಸ್ಯದಿಂದ ಓದುಗರಿಗೆ ಕಚಗುಳಿ ಇಡುವುದು, ತನ್ನ ವಿಶಿಷ್ಟ ಕಾಣ್ಕೆಗಳಿಂದ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುವುದು, ಕೆಲವು ಪಾತ್ರಗಳು ಹಾಗೂ ಪ್ರಸಂಗಗಳು ಮನಸ್ಸಿನ ಮೂಲೆಯಲ್ಲಿ ಮನೆ ಮಾಡುವುದು. ಎಂತಹ ಸಂದರ್ಭದಲ್ಲೂ ರಶೀದ್ ಅವರಲ್ಲಿನ ಕಥೆಗಾರ ಜಾಗೃತನಾಗಿರುತ್ತಾನೆ. ಸುಮತಿ ಮುದ್ದೇನಹಳ್ಳಿ ಬರಹ.

Read More

ಅಬ್ದುಲ್ ರಶೀದ್ ಕಥಾಸಂಕಲನಕ್ಕೆ ವಿವೇಕ ಶಾನಭಾಗ ಬರೆದ ಮುನ್ನುಡಿ

ಕತೆ ಜರುಗುವ ಆವರಣವು ಅನುಭವದ ಅವಿಭಾಜ್ಯ ಎಂಬುದನ್ನು ಅರಿತು ಅದನ್ನು ಸಹಜ ಸರಾಗತೆಯಲ್ಲಿ ಸಿದ್ಧಿಸಿಕೊಂಡವರು ರಶೀದ್. ಅವರ ಮೊದಲ ಕತೆಯಿಂದಲೂ ಇದನ್ನು ಕಾಣಬಹುದು. ಇಲ್ಲಿಯ ‘ಮೋಹಕ ದ್ವೀಪದ ಮೂಗಿನ ತುದಿ’ ಕತೆಯೊಳಗೆ ಬರುವ ವಿವರಗಳು, ಘಟನೆಗಳು, ಮಾತುಗಳು ಆ ಆವರಣದಲ್ಲಿ ಅಲ್ಲದೇ ಬೇರೆಲ್ಲೂ ಘಟಿಸಲು ಅಸಾಧ್ಯವೆನ್ನುವ ಹಾಗೆ ಸಂಯೋಜನೆಗೊಂಡಿವೆ.
ಕತೆಗಾರ ಅಬ್ದುಲ್‌ ರಶೀದ್‌ ಹೊಸ ಕಥಾ ಸಂಕಲನ “ಲಾರ್ಡ್ ಕಾರ್ನ್‌ವಾಲೀಸ್ ಮತ್ತು ಕ್ವೀನ್‌ ಎಲಿಜಬೆತ್‌” ಗೆ ವಿವೇಕ ಶಾನಭಾಗ ಬರೆದ ಮಾತುಗಳು

Read More

ಅಬ್ದುಲ್ ರಶೀದ್ ವಿರಚಿತ ‘ರಕ್ತಚಂದನ’ ಎಂಬ ನೀಳ್ಗತೆಯು

ಚಾರುದತ್ತರ ಮರಣದ ಸುದ್ದಿ ನನಗೆ ಗೊತ್ತಾಗಿದ್ದು ಅವರು ತೀರಿಹೋಗಿ ಮಾರನೇ ದಿನ ಮಧ್ಯಾಹ್ನ. ಕೊರೋನಾದ ಮೊದಲ ಅಲೆ ಅದಾಗ ತಾನೇ ಉಲ್ಬಣಿಸುತ್ತಿದ್ದ ಕಾರಣ ಫೇಸ್ ಬುಕ್ಕು ಲೈವಿನಲ್ಲೇ ಅವರಿಗೆ ಅಭಿಮಾನಿಗಳು ಶ್ರದ್ಧಾಂಜಲಿ ಅರ್ಪಿಸುತ್ತಿದ್ದರು. ಲೇಖಕಿ ವಿಲಾಸಿನಿ ಹಾಸಿಗೆಯಲ್ಲಿ ಮಲಗಿದ್ದಲ್ಲೇ ಗೋಡೆಗೆ ಒರಗಿ ಕುಳಿತು ಕಣ್ಣು ಮುಖ ಊದಿಸಿಕೊಂಡು ಲೈವಿನಲ್ಲಿ ಮುಳುಮುಳು ಅಳುತ್ತಾ ನಡುನಡುವೆ ಸ್ಪಷ್ಟವಾಗಿ ಮಾತಾಡುತ್ತಿದ್ದಳು. …”

Read More

ಅಬ್ದುಲ್ ರಶೀದ್ ಬರೆದ ಈ ಭಾನುವಾರದ ಕಥೆ “ಕಲಗಚ್ಚು”

“ಆಗಲೂ ಹೀಗೇ ಇದ್ದಳು. ಸಂಜೆಗತ್ತಲ ಹೊತ್ತಲ್ಲಿ ನೂರು ಆಶೆಗಳನ್ನು ಹುಟ್ಟಿಸುವವಳು ಒಂದು ಸಂಜೆ ಇರುಳು ತಲೆಯ ಮೇಲಿದ್ದ ಕಲಗಚ್ಚಿನ ಬಕೆಟ್ಟನ್ನು ನನ್ನ ಮೇಲೆ ಬಗ್ಗಿಸಿದ್ದಳು. ಆಮೇಲೆ ಎಂದೂ ಬಂದಿರಲಿಲ್ಲ. ಮಾತೂ ಬಿಟ್ಟಿದ್ದಳು. ಗುರುತೇ ಇಲ್ಲದವಳಂತೆ ದೂರವಾದಳು. ನಾನೂ ಊರು ಬಿಟ್ಟು ದೂರ ಎಲ್ಲೆಲ್ಲೋ ಹೋದೆ. ಏನೆಲ್ಲಾ ಆದೆ. ಅವಳ ಮೇಲೇ ಮೊದಲ ಕತೆ ಬರೆದು ಹರಿದು ಹಾಕಿದೆ. ಆಮೇಲೆಯೂ ಕಥೆಗಳನ್ನು ಬರೆದೆ. ಕವಿಯೂ ಆದೆ.”

Read More

ಹಸಿರು ಕಡಲ ಹೆಣ್ಣಾಮೆಯ ಪ್ರಸವ ಪ್ರಸಂಗ

“ಆ ದೊಡ್ಡ ಹೆಣ್ಣಾಮೆ ಬಹಳಷ್ಟು ಲೆಕ್ಕಾಚಾರ ಹಾಕಿ ಸಾವಿರಾರು ಮೈಲು ದೂರದಿಂದ ಈಜಿ ಬಂದಿರಬಹುದು. ಭೂಮಿಯ ಅಯಸ್ಕಾಂತೀಯ ಗುಣಗಳು ಈ ಹೆಣ್ಣಿಗೆ ತವರಿನ ದಾರಿಯನ್ನು ತೋರಿಸಿರಬಹುದು. ಕಡಲಿನ ಒಳ ಅಲೆಗಳ ಹರಿವು, ಆಕಾಶದ ತಾರೆಗಳ ಲೆಕ್ಕಾಚಾರ, ಕಡಲ ಭರತ ಇಳಿತಗಳ ಪಂಚಾಂಗ, ಹೊಟ್ಟೆಯೊಳಗಿನ ಮೊಟ್ಟೆಗಳ ಜಾತಕದ ಗೋಚಾರಫಲ ಎಲ್ಲವೂ ಇದ್ದಿರಬಹುದು. ಆದರೆ ಎಲ್ಲೋ ಲೆಕ್ಕ ತಪ್ಪಿದಂತೆ ಇಳಿ ಹಗಲ ಹೊತ್ತೇ ಸೂರ್ಯ ಮುಳುಗುವ ಮೊದಲೇ ಈ ಆಮೆ ಪ್ರಸವ ಮುಗಿಸಿ…”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ