ಟೋಬಿ ಎಂಬ ಶಿಕ್ಷಕ: ಕೆ. ಸತ್ಯನಾರಾಯಣ ಪ್ರವಾಸ ಸರಣಿ
ಟೋಬಿ ಸ್ಪಷ್ಟ ವಿಚಾರಗಳಿಗೆ ಬಂದಿದ್ದರು. ನೀವು ಉದ್ಯೋಗರಂಗವನ್ನು ಪ್ರವೇಶಿಸಿದ ಮೇಲೂ ಕೆಲಸ ಕಾರ್ಯ ಚೆನ್ನಾಗಿ ನಿರ್ವಹಿಸಲು, ಪದೋನ್ನತಿ ಪಡೆಯಲು, ಸಹೋದ್ಯೋಗಿಗಳೊಡನೆ ಬೆರೆಯಲು, ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು, ನಿಮಗೆ ನಿಜಕ್ಕೂ ನೆರವಾಗುವುದು ಜೀವನಾನುಭವವೇ. ನಂತರ ಈ ಜೀವವಾನುಭವದಿಂದ ಮೂಡುವ ಜ್ಞಾನಾನುಭವ ಮತ್ತು ಜೀವನ ಕೌಶಲ್ಯ. ವ್ಯಕ್ತಿತ್ವ ನಿರ್ಮಾಣಗಳ ದಾರಿ ಚಿಕ್ಕ ವಯಸ್ಸಿನಲ್ಲೇ ದೊರಕಬೇಕು. ಮಕ್ಕಳ ಬಾಲ್ಯದಲ್ಲೇ ಇದಕ್ಕೆ ಭದ್ರ ಬುನಾದಿ ಹಾಕಬೇಕು.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್ಲ್ಯಾಂಡ್ಸ್ ಬಾಣಂತನ” ಸರಣಿಯ ಆರನೆಯ ಬರಹ