ಶಾಕ್ತಾರಾಧನೆ, ಹನುಮಾರಾಧನೆ ಮತ್ತು ಮೊಹರಂ
`ಮೊಹರಂ’ ಎಂದರೆ ನಿಷಿದ್ಧವಾದುದು ಎಂದರ್ಥ. ಶ್ರದ್ಧಾವಂತ ಮುಸ್ಲಿಮರ ಪಾಲಿಗಿದು ಸೂತಕದ ಮಾಸ. ಈ ಮಾಸದಲ್ಲಿ ಅವರು ಮದುವೆಯಂತಹ ಶುಭಕಾರ್ಯ ಹಮ್ಮಿಕೊಳ್ಳುವುದಿಲ್ಲ. ದುರಂತ ಸಾವು ವಸ್ತುವಾಗಿರುವ ಮೊಹರಂ ಸಾಹಿತ್ಯವೂ ಒಂದರ್ಥದಲ್ಲಿ ಸೂತಕದ ಸಾಹಿತ್ಯವೇ. ವಿಶೇಷವೆಂದರೆ, ಅರಬರ ಈ ದಾಯಾದಿ ಸಂಘರ್ಷದ ರಾಜಕೀಯ ಚರಿತ್ರೆ, ಮೊಹರಂ ಆಚರಣೆಯ ರೂಪತಾಳಿದ ಬಳಿಕ, ಇಸ್ಲಾಮಿನ ಜತೆಜತೆಗೆ ಜಗತ್ತಿನ ನಾನಾ ಭಾಗಗಳಿಗೆ ಹೋಯಿತು ಮತ್ತು ಅರಬೇತರ ದೇಶಗಳಲ್ಲಿ ವಿಭಿನ್ನ ರೂಪಾಂತರ ಪಡೆಯಿತು.
ಡಾ. ಅರುಣ್ ಜೋಳದಕೂಡ್ಲಿಗಿ ಬರಹ