ಒಂಟಿಯಾದಾಗ ಕೈಹಿಡಿಯುವ ಗುಲ್ಜಾರರು: ಗೊರೂರು ಶಿವೇಶ್ ಬರಹ
ಗುಲ್ಜಾರ್ ನಿರ್ಜೀವ ವಸ್ತುಗಳನ್ನು ಹೇಗೆ ರೂಪಕಗಳಿಂದ ನಿರೂಪಿಸುತ್ತಾರೆ ಎಂಬುದನ್ನು ಇಲ್ಲಿ ಕಾಣಬಹುದು. ರಸ್ತೆಗಳು ನಡೆಯುತ್ತಲೇ ಇರುತ್ತವೆ… ಆದರೆ ವಾಸ್ತವವಾಗಿ ಎಲ್ಲಿಯೂ ಹೋಗುವುದಿಲ್ಲ… “ಖಾಲಿ ಪಾತ್ರೆಗಳಂತೆ ದಿನಗಳು ಉರುಳುತ್ತವೆ, ರಾತ್ರಿಗಳು ತಳವಿಲ್ಲದ ಬಾವಿಗಳು. ಕಣ್ಣುಗಳು ಕಣ್ಣೀರಿನ ಬದಲು ಹೊಗೆಯನ್ನು ಸೂಸುತಿವೆ. ಜೀವಿಸಲು ಕಾರಣಗಳಿಲ್ಲ, ಹೀಗಾಗಿ ಸಾಯಲು ಕಾರಣಗಳನ್ನು ಹುಡುಕುತ್ತಿರುವೆ. ಜೀವನಕ್ಕಿಂತ ಉದ್ದವಿರುವ ಈ ರಸ್ತೆಗಳು ಗುರಿ ಇಲ್ಲದೆ ಗುರಿಯನ್ನು ತಲುಪದೇ ಚಲಿಸುತ್ತಿವೆ..
ಗುಲ್ಜಾರ್ ಅವರ ಬರಹಗಳ ಕುರಿತು ಗೊರೂರು ಶಿವೇಶ್ ಬರಹ