ನವೋದಯದ ಶ್ರೇಷ್ಠಕವಿ ಕಡೆಂಗೋಡ್ಲು
ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮ ಕಾವ್ಯ ಪ್ರತಿಭೆಯ ಮೂಲಕ ಕಂಡೆಂಗೋಡ್ಲು ಶಂಕರ ಭಟ್ಟರು ಪ್ರಧಾನವಾಗಿ ಗುರುತಿಸಿಕೊಂಡಿದ್ದರೂ, ಅವರ ಜೀವನ ಪಥ ಬಹುಮುಖಿಯಾಗಿತ್ತು. ಸ್ವಾತಂತ್ರ್ಯ ಚಳವಳಿಯಲ್ಲಿ ಅವರು ಎಷ್ಟೊಂದು ಸಕ್ರಿಯರಾಗಿದ್ದರು ಎಂಬುದಕ್ಕೆ ಅವರು 1921ರಲ್ಲಿ ಬರೆದ ‘ವಸ್ತ್ರಾಪಹರಣ’ ಖಂಡಕಾವ್ಯವೇ ಸಾಕ್ಷಿ. ಖಾದಿ ಮಾರಾಟ, ಮದ್ಯ ಮಾರಾಟ ವಿರೋಧ, ಸ್ತ್ರೀಪರ ಧ್ವನಿ, ಶೋಷಿತರ ಪರ ನಿಲುವುಗಳೊಂದಿಗೆ ತಮ್ಮ ಸಾಹಿತ್ಯ ಪ್ರಯಾಣವನ್ನು ಶ್ರೀಮಂತವಾಗಿಸಿಕೊಂಡಿದ್ದರು. ಡಾ.ಬಿ. ಜನಾರ್ದನ ಭಟ್ ಅವರು, ಅಡಿಗರಿಗಿಂತ ಹಿಂದಿನ ಯುಗದ ಶ್ರೇಷ್ಠ ಕವಿ ಅಂದರೆ ಕಡೆಂಗೋಡ್ಲು ಶಂಕರ ಭಟ್ಟರ ಕುರಿತು ಬರೆದಿದ್ದಾರೆ.
Read More