Advertisement

Tag: Kannada Literature

ಡಾ. ರಾಜಶೇಖರ ನೀರಮಾನ್ವಿ ಕತೆ: “ಹಂಗಿನರಮನೆಯ ಹೊರಗೆ”

ಜೀವನದ ಘಟನೆಗಳು ನಮ್ಮಿಬ್ಬರಲ್ಲಿ ಸಾಮ್ಯವನ್ನು ತೋರಿಸಿದ್ದರೂ, ಮಾನಸಿಕವಾಗಿ ನಾವಿಬ್ಬರೂ ಒಂದೊಂದು ಧ್ರುವ. ಆದರೂ ಯಾವದೋ ಆಕರ್ಷಣ ಶಕ್ತಿ ನಮ್ಮಿಬ್ಬರನ್ನು ಬಂಧಿಸಿಬಿಟ್ಟಿದೆ.
ಮೊನ್ನೆ ಶುಕ್ರವಾರದಂದು ತೀರಿಕೊಂಡ ಕನ್ನಡದ ಅಪರೂಪದ ಕತೆಗಾರ ಡಾ. ರಾಜಶೇಖರ ನೀರಮಾನ್ವಿ ಅವರ ಪ್ರಸಿದ್ಧ ಕತೆ “ಹಂಗಿನರಮನೆಯ ಹೊರಗೆ”

Read More

ಇರುವುದೆಲ್ಲವ ಹೇಳಿಬಿಡು…: ಸುಶೀಲಾ ಡೋಣೂರ ಕಾದಂಬರಿಯ ಪುಟಗಳು

‘ಈ ಮಾತು ಚರ್ಚೆಗೆ ಬರದೆ ಹೋಗಿದ್ರ ನಾನು ಈ ಸುಳ್ಳು ಹೇಳಬಹುದಿತ್ತು ಪೂಣ, ಈಗ ಎಲ್ಲಾನೂ ಒಪ್ಗೊಂಡ ಮ್ಯಾಲ ಮತ್ತ ಅದೇ ಸುಳ್ಳನ್ನ ಆರಂಭದಿಂದ ಹೇಳು ಅಂದ್ರ ಹೇಳಾಕ ಆಗೂದಿಲ್ಲ. ಏನು ಶಿಕ್ಷೆ ಕೊಡ್ತೀಯೊ ಕೊಡು. ನಾ ನಿನ್ನ ಪ್ರೀತಿಸ್ತೀನಿ ಅನ್ನೂದು ಖರೆ, ಅದೇ ಅಂತಿಮ. ನೀ ಸಿಕ್ರೂ ಸರಿ, ಸಿಗಲಿಲ್ಲ ಅಂದ್ರೂ ಸರಿ. ಜೀವನಪೂರ್ತಿ ನಿನ್ನ ನೆನಪಿನ್ಯಾಗ ಸಾಗಿಸುವಷ್ಟು ಸುಂದರ ಕ್ಷಣಗಳನ್ನ ಕಳದೀನಿ ನಿನ್ನ ಜೋಡಿ, ಅವೇ ಸಾಕು’.
ಪತ್ರಕರ್ತೆ ಸುಶೀಲಾ ಡೋಣೂರ ಹೊಸ ಕಾದಂಬರಿ “ಪೀಜಿ”ಯ ಒಂದು ಅಧ್ಯಾಯ ನಿಮ್ಮ ಓದಿಗೆ

Read More

ಬೆಂಗಳೂರು ವಸತಿ ಪುರಾಣ-1: ರಂಜಾನ್‌ ದರ್ಗಾ ಸರಣಿ

ಮೊದಲ ದಿನವಾದ ಕಾರಣ ಲೈಟ್ ಹಚ್ಚಿಕೊಂಡೇ ಮಲಗಿದೆ. ಬೇಗ ನಿದ್ರೆ ಬರಲಿಲ್ಲ. ಆ ಮೇಲೆ ಮಧ್ಯರಾತ್ರಿ ಎಚ್ಚರವಾಯಿತು. ಕಣ್ಣು ತೆರೆದಾಗ ಗಾಢಾಂಧಕಾರ ಆವರಿಸಿದ್ದು ಗಾಬರಿ ಹುಟ್ಟಿಸಿತು. ಕರೆಂಟ್ ಹೋಗಿರಬಹುದು ಎಂದು ಭಾವಿಸಿ ಹಾಗೆ ಮಲಗಿದೆ. ಬೆಳಿಗ್ಗೆ ಬಹಳ ಹೊತ್ತಿನವರೆಗೆ ಎಚ್ಚರಾಗಲಿಲ್ಲ. ಕೊನೆಗೆ ಎಚ್ಚರವಾದಾಗ ಸೊಳ್ಳೆಪರದೆ ಮೇಲೆಲ್ಲ ಸೊಳ್ಳೆಗಳು ಸುತ್ತಿಕೊಂಡಿದ್ದರಿಂದ ಕತ್ತಲು ಆವರಿಸಿದ್ದು ಗೊತ್ತಾಯಿತು!
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ಕುರ್ ಮಾವಡ ಕೊಂಡ ದೇವಡಾ…..: ಸುಧಾ ಆಡುಕಳ ಅಂಕಣ

ಮೊದಲು ಯಾರೆಲ್ಲ ಹೋಗುವವರೆಂದು ಪಟ್ಟಿಯಾಗಬೇಕು, ನಾಟಕದ ಟಿಕೇಟಿಗೆ ಹಣದ ಹೊಂದಿಕೆಯಾಗಬೇಕು, ಹುಡುಗಿಯರ ಅಣಿಯಾದ ದಿನ ಊರ ಹುಡುಗಿಯರಿಗೆ ಹಬ್ಬ. ತೋಟದ ತುಂಬೆಲ್ಲ ಅಲೆದು ಅಬ್ಬಲಿಗೆ ಹೂವನ್ನಾಯ್ದು ಕಟ್ಟುವ ಸಂಭ್ರಮವೇನು? ನಾಟಕ ನೋಡುವಾಗ ತಿನ್ನಲೆಂದು ಶೇಂಗಾ ಹುರಿಯುವ ಸಡಗರವೇನು? ಅತ್ತರಿನೆಣ್ಣೆಯನ್ನು ಪೂಸಿ ತಲೆಬಾಚುವ ಸಂಭ್ರಮವೇನು?
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಹತ್ತನೆಯ ಕಂತು ನಿಮ್ಮ ಓದಿಗೆ

Read More

ನೀಲಿ ನೋಡಿದ ಕಾಡು: ಸುಧಾ ಆಡುಕಳ ಅಂಕಣ

ಒಮ್ಮೆ ಅವನೂ, ನೀಲಿಯ ತಂದೆಯೂ ಅಂಟುವಾಳದ ಕಾಯಿಗಳನ್ನು ಹುಡುಕುತ್ತ ಕಾಡಿನಲ್ಲಿ ಬಹುದೂರದವರೆಗೆ ಸಾಗಿದರಂತೆ. ಚೀಲಗಟ್ಟಲೆ ಕಾಯಿಗಳನ್ನು ಕೊಯ್ದು ಮೂಟೆಗಟ್ಟಿ ದಣಿವಾರಿಸಿಕೊಳ್ಳಲೆಂದು ಮರವೊಂದರ ಬೇರಿನ ಮೇಲೆ ಕುಳಿತು ಕವಳ ತಿನ್ನತೊಡಗಿದರಂತೆ. ಸುಮಾರು ಹೊತ್ತಿಗೆ ನೋಡಿದರೆ ಅವರು ಕುಳಿತಿದ್ದ ಬೇರು ನಿಧಾನಕ್ಕೆ ಚಲಿಸಲು ಪ್ರಾರಂಭವಾಯಿತಂತೆ. ಅರೆ! ಇದೇನಿದು? ಎಂದು ಎದ್ದು ದೂರ ನಿಂತರೆ ಮರದ ಬೇರೆಂದು ಅವರು ಕುಳಿತದ್ದು ಮಾದೊಡ್ಡ ಹೆಬ್ಬಾವಿನ ಮೇಲಂತೆ!
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಎಂಟನೆಯ ಕಂತು ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ