Advertisement

Tag: Kannada Story

ಜೆಸ್ಸಿ ಪಿ.ವಿ. ಪುತ್ತೂರು ಬರೆದ ಈ ಭಾನುವಾರದ ಕಥೆ

ಏನಾಗುತ್ತಿದೆಯೆಂದು ಅವರಿಗೆ ಅರ್ಥವಾಗುವ ಮೊದಲೇ ಬೆಂಕಿ ಅರ್ಧದಷ್ಟು ತೋಟಕ್ಕೆ ವ್ಯಾಪಿಸಿತ್ತು. ಅನಿರೀಕ್ಷಿತವಾಗಿ ಘಟಿಸಿದ ಅನಾಹುತ ಕಂಡು ಮಾತುಹೊರಡದೇ ನಿಂತಿದ್ದ ಅಂಬಿಕಾ ಈಗ ಜೋರಾಗಿ ಕಿರುಚಲಾರಂಭಿಸಿದರು. “ಅಯ್ಯೋ, ಯಾರಾದರೂ ಓಡಿ ಬನ್ನಿ.. ನಮ್ಮನ್ನು ಕಾಪಾಡಿ… ಯಾರಾದರೂ ಬನ್ನಿ, ಬೆಂಕಿ ನಂದಿಸಿ….” ನೆರೆಮನೆಯಿಂದ ಕೇಳಿದ ಆರ್ತನಾದ, ಎತ್ತರದಲ್ಲಿ ಕಾಣುತ್ತಿರುವ ಬೆಂಕಿಯ ಕೆನ್ನಾಲಿಗೆ, ಆಗಿರಬಹುದಾದ ಅನಾಹುತದ ಚಿತ್ರಣವನ್ನು ಶಂಕರಣ್ಣನಿಗೆ ಕಟ್ಟಿಕೊಟ್ಟಿತು.
ಜೆಸ್ಸಿ ಪಿ.ವಿ. ಪುತ್ತೂರು ಬರೆದ ಈ ಭಾನುವಾರದ ಕಥೆ “ಹೊರಗಿನ ಬೆಂಕಿ ಮತ್ತು ಒಳಗಿನ ಕಳೆ” ನಿಮ್ಮ ಓದಿಗೆ

Read More

ಸುಭಾಷ್ ಪಟ್ಟಾಜೆ ಬರೆದ ಈ ಭಾನುವಾರದ ಕಥೆ

ಇಲ್ಲ! ಅಪ್ಪ ಪೇಟೆಗೆ ಹೋದ ಸಮಯ ನೋಡಿ ಇಲ್ಲಿಗೆ ಓಡಿ ಬಂದು ಪುಟ್ಟ ಮಗುವಾಗಿದ್ದ ನನ್ನನ್ನು ಎತ್ತಿ ಮುದ್ದಾಡಿದ ವ್ಯಕ್ತಿ ಇವನಲ್ಲ. ಬಿಡುವಿಲ್ಲದ ಮನೆಗೆಲಸದ ವೇಳೆಯಲ್ಲೂ ‘ಎತ್ತಿಕೋ’ ಎಂದು ಅಮ್ಮನನ್ನು ಪೀಡಿಸುತ್ತಿದ್ದಾಗ “ಇತ್ತ ಕೊಡಿ. ನಾನು ನೋಡಿಕೊಳ್ತೇನೆ” ಎಂದು ನನ್ನನ್ನು ಎತ್ತಿಕೊಂಡು, ತೋಟದಲ್ಲೆಲ್ಲ ತಿರುಗಾಡಿ ಬಾಳೆಹೂವಿನ ಜೇನು ನೆಕ್ಕಿಸಿದವನೂ ಇವನಲ್ಲ ಎಂದುಕೊಳ್ಳುತ್ತಿದ್ದಂತೆ ಕತ್ತಲಲ್ಲಿ ಭೂಮಿಯನ್ನು ಥರಗುಟ್ಟಿಸುವ ಸದ್ದು ನಮ್ಮೆಲ್ಲರನ್ನೂ ಇಡಿಯಾಗಿ ಅಲುಗಾಡಿಸಿತು.
ಸುಭಾಷ್ ಪಟ್ಟಾಜೆ ಬರೆದ ಈ ಕಥೆ “ಗೋಡೆ”

Read More

ಶ್ರೀ ಡಿ.ಎನ್. ಬರೆದ ಈ ಭಾನುವಾರದ ಕತೆ

ಹೋಗಿ ನೋಡಿ ಅಪ್ಪನೆಂದು ಗುರುತು ಹಿಡಿದ. ಆತನ ಮೇಲಿದ್ದ ಕೋಪ ಆರಿರಲಿಲ್ಲ. ಜೀವನವಿಡೀ ಬೇರೆಯವರ ಪಾಪ ಕಳೆಯಲು ದಾನಗಳು ತೆಗೆದುಕೊಂಡು ಜಪತಪಗಳಲ್ಲಿ ಕಾಲ ಕಳೆಯುತ್ತಿದ್ದ ಅಪ್ಪ, ತನ್ನ ಅಪರಕರ್ಮವೂ ಸರಿಯಾಗಿ ಆಗದೆ ಯಾವುದೋ ತಿಳಿಯದ ನಗರದಲ್ಲಿ ಅನಾಥ ಹೆಣದಂತೆ ಬೂದಿಯಾಗಿದ್ದ. ಯಾರದೋ ಸಾವಿಗೆ ಗರುಡ ಪುರಾಣ ಓದುತ್ತಿದ್ದ ಅಪ್ಪ ಸತ್ತಾಗ ಅವನಿಗಾಗಿ ಯಾರೂ ಅದನ್ನು ಓದದಂತೆ ರಮೇಶ ನೋಡಿಕೊಂಡ.
ಶ್ರೀ ಡಿ.ಎನ್. ಬರೆದ ಕತೆ “ಪಾಪ”

Read More

‘ವಾಟ್ ದ ಹೆಕ್’ ಅಮ್ಮಾ…

‘ನೀವೇ ಸರಿ, ಅರವಿಂದರಾಯರೇ. ಮಕ್ಕಳನ್ನು ಬಹಳ ಚೆನ್ನಾಗಿ ಬೆಳೆಸಿದ್ದೀರಿ’ ಇನ್ನೂ ಅವರ ಮಾತು ಮುಗಿದಿಲ್ಲ. ಎಲ್ಲಿಂದ ಬಂತೋ ಒಂದು ದೊಡ್ಡ ಅಲೆ, ಅಲ್ಲಿ ಕೂತಿದ್ದವರನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿಬಿಟ್ಟಿತು. ಕಣ್ಣು ಮುಚ್ಚಿ ಬಿಡುವುದರಲ್ಲಿ ಎಲ್ಲ ಮರಳು, ಎಲ್ಲೆಲ್ಲೂ ನೀರು. ಜನರ ಕೂಗು, ಹಾಹಾಕಾರ. ಸುಕನ್ಯ ಕಣ್ಣು ಬಿಟ್ಟಾಗ ಹತ್ತಿರ ಯಾರೂ ಕಾಣುತ್ತಿಲ್ಲ. ‘ವಿನೂ, ವಿಶೂ’ ಜೋರಾಗಿ ಕೂಗುತ್ತಾ ಇಡೀ ಸಮುದ್ರದ ದಡದಲ್ಲಿ ಹುಚ್ಚು ಹಿಡಿದಂತೆ ಓಡುತ್ತಿದ್ದಾಳೆ.
ಗುರುಪ್ರಸಾದ್‌ ಕಾಗಿನೆಲೆ ಬರೆದ ನೀಳ್ಗತೆಯ ಕಂತು

Read More

ಸುಭಾಷ್ ಪಟ್ಟಾಜೆ ಬರೆದ ಈ ಭಾನುವಾರದ ಕತೆ

ಒಳಭಾಗಕ್ಕೆ ತೆರೆದುಕೊಂಡಿದ್ದ ಬಾಗಿಲಿಗೊರಗಿ ನಿಂತುಕೊಂಡ ಪ್ರಿಯಾ ಆಗಸದ ಶೂನ್ಯದಲ್ಲಿ ಮಿನುಗುತ್ತಿರುವ ನಕ್ಷತ್ರಗಳನ್ನು ಅರೆಮುಚ್ಚಿದ ಕಣ್ಣುಗಳಿಂದ ನೋಡುತ್ತಾ ಅಂದಳು “ನಾನು ಕೆಟ್ಟ ಅದೃಷ್ಟದ ಸಂಕೇತ ದಿನೂ. ನೀವು ಹೆಣ್ಣು ನೋಡಲು ಬಂದಾಗ ನಾನು ಏನೇನೋ ಕನಸು ಕಟ್ಟಿದೆ. ಆದ್ರೆ ಅಂದುಕೊಂಡದ್ದೇನೂ ನಿಜವಾಗ್ಲಿಲ್ಲ. ಈಗ ನೋಡು, ಇದೇ ನನ್ನ ಬದುಕು. ಇದೇ ನನ್ನ ಭಾಗ್ಯ” ಎನ್ನುತ್ತಾ ಮುಖವನ್ನು ಅತ್ತ ಹೊರಳಿಸಿ ಗಂಟಲಲ್ಲಿ ಕಟ್ಟಿ ನಿಂತ ಬಿಕ್ಕಳಿಕೆಯನ್ನು ಕಷ್ಟಪಟ್ಟು ತಹಬದಿಗೆ ತಂದುಕೊಂಡಳು.
ಡಾ. ಸುಭಾಷ್‌ ಪಟ್ಟಾಜೆ ಬರೆದ ಈ ಭಾನುವಾರದ ಕತೆ “ಹುಟ್ಟು” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ