Advertisement

Tag: kendasampige

ನಮ್‌ ಸೈಟ್‌ ಎಲ್ಲಿದೆ! : ಎಚ್. ಗೋಪಾಲಕೃಷ್ಣ ಸರಣಿಯ ಐವತ್ತನೆಯ ಕಂತು!

ಮೊದಲನೇ ಮಗನ ಚೆಡ್ಡಿಗೆ ಕೂಡುವ ಭಾಗದಲ್ಲಿ ತೇಪೆ ಹಾಕಿಸಿ ಎರಡನೆಯವನಿಗೆ ಹಾಕುತ್ತಿದ್ದರು, ಅವನ ನಂತರ ಮೂರನೇ ಅವನು, ಅದಾದ ಮೇಲೆ ನಾಲ್ಕು, ಐದು ಹೀಗೆ. ಕೊನೇ ಹುಡುಗನ ಬಳಿ ಬರುವ ಹೊತ್ತಿಗೆ ಚಡ್ಡಿಗೆ ತೇಪೆ ಹಾಕಲು ಜಾಗವೇ ಇರ್ತಾ ಇರಲಿಲ್ಲ. ಆಗಿನ್ನೂ ಪ್ರೈವೇಟ್ ಸ್ಕೂಲ್ ಬಂದಿರಲಿಲ್ಲ ಮತ್ತು ಎಲ್ಲರೂ ಸರ್ಕಾರಿ ಶಾಲೆ. ತೇಪೆ ಇಲ್ಲದಿರುವ ಚೆಡ್ಡಿ ಹಾಕಿದವನು ಮನೆಯ ಮೊದಲ ಮಗ ಎಂದು ಸುಲಭವಾಗಿ ಗೊತ್ತಾಗುತ್ತಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐವತ್ತನೆಯ ಕಂತು

Read More

ವರ್ತಮಾನದ ಬೆಂಕಿಯಲ್ಲಿ ಅರಳಿದ ಹೂವು ಮೈ ಫ್ಯಾಮಿಲಿ: ಎಚ್. ಆರ್. ರಮೇಶ ಬರಹ

ಈ ನಾಟಕದ ಮತ್ತೊಂದು ವೈಶಿಷ್ಟ್ಯತೆಯೆಂದರೆ, ಇಂದಿನ ತಂತ್ರಜ್ಞಾನ ಮತ್ತು ಅದರ ಪರಿಣಾಮದ ಸೋ ಕಾಲ್ಡ್ ಆನ್ ಲೈನ್ ಸಾಮಾಜಿಕ ಜಾಲ ತಾಣಗಳು ಮನುಷ್ಯ ಸಂಬಂಧಗಳನ್ನು ಸಡಿಲಗೊಳಿಸುತ್ತ, ಒಂಟಿತನಗಳನ್ನು ಹುಟ್ಟುಹಾಕುತ್ತ ಮನುಷ್ಯರನ್ನು ಭಾವನಾರಹಿತರನ್ನಾಗಿಸುತ್ತಿರುವುದನ್ನು, ಇಡೀ ಮನುಕುಲವೇ ಅನುಭವಿಸುತ್ತಿರುವುದನ್ನು, ಭಾರತೀಯ ಸಂದರ್ಭದಲ್ಲಿ ಇಟ್ಟು ನೋಡಿರುವುದು. ಇದಕ್ಕೆ ಪುರಾಣ, ಇತಿಹಾಸ, ಮತ್ತು ಜ್ವಲಂತ ಸಂಗತಿಗಳು ರೂಪಕವಾಗಿ ಮೈದಾಳಿ ಬಂದಿವೆ.
ಕುಮಾರಿ ಗೌತಮಿ ಕತೆಯಾಧಾರಿತ ಮೈಸೂರಿನ ರಂಗಾಯಣದ ರೆಪರ್ಟರಿ ಕಲಾವಿದರು ಅಭಿನಯಿಸಿದ “ಮೈ ಫ್ಯಾಮಿಲಿ” ನಾಟಕದ ಕುರಿತು ಎಚ್.ಆರ್.‌ ರಮೇಶ್‌ ಬರಹ

Read More

ಆ ಹೊಳೆವ ಕಂಗಳು…: ಸುಧಾ ಆಡುಕಳ ಅಂಕಣ

ಅದೇನು ಜಾದೂ ನಡೆಯಿತೋ ತಿಳಿಯದು, ಅಲ್ಲಿಂದ ತಿರುಗಿ ಬಂದ ಮಂಜಿಯ ಅಪ್ಪ ಗಡುಸಾಗಿ ಮಾತನಾಡತೊಡಗಿದ, “ಮಗಳು ನಂದು, ಏನು ಮಾಡಬೇಕಂತ ನಂಗೊತ್ತದೆ. ನೀವು ಇನ್ನೂ ಮೀಸೆ ಸರಿಯಾಗಿ ಬರದಿರೋರೆಲ್ಲ ಕಾನೂನು ಮಾತಾಡೂದು ಬ್ಯಾಡ. ಅವಳ ದೇಹ ಬಿಡುಗಡೆಗೆ ಕಾಯ್ತದೆ. ನಮ್ಮ ಕುಟುಂಬದ ದೆಯ್ಯಗಳು ಅವಳನ್ನು ಕಳಿಸಿಕೊಡು ಅಂತ ಕೂಗ್ತಿವೆ. ನೀವು ಪೋಲೀಸು, ಕಾನೂನು ಅಂತ ವರಾತ ಸುರುಮಾಡಿ ಅವಳ ದೇಹ ಕೊಳೆಯೂ ಹಾಗೆ ಮಾಡಬೇಡಿ.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಇಪ್ಪತ್ನಾಲ್ಕನೆಯ ಕಂತು ನಿಮ್ಮ ಓದಿಗೆ

Read More

ಒಡೆದದ್ದನ್ನು ಇಡಿಯಾಗಿಸಿಕೋ ಮೆಕ್ಸಿಕೋ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ವಿಶ್ವದಲ್ಲಿ ಅತೀ ಹೆಚ್ಚು ಜ್ವಾಲಾಮುಖಿಗಳಿಗೆ ನೆಲೆಯಾಗಿರುವ ದೇಶ ಮೆಕ್ಸಿಕೋ. ರಾಷ್ಟ್ರದ ಹೆಚ್ಚಿನ ಪರ್ವತ ಪ್ರದೇಶಗಳಲ್ಲಿ ಜ್ವಾಲಾಮುಖಿಗಳು ಕಂಡುಬರುತ್ತವೆ. ಆಶ್ಚರ್ಯದ ಸಂಗತಿಯೆಂದರೆ, ವಿಶ್ವದ ಅತ್ಯಂತ ಚಿಕ್ಕ ಜ್ವಾಲಾಮುಖಿಯೂ ಇರುವುದು ಮೆಕ್ಸಿಕೋದಲ್ಲಿ. ಪ್ಯೂಬ್ಲಾ ಸಮೀಪದಲ್ಲಿರುವ ಕ್ಯುಕ್ಸ್ಕೊಮೇಟ್ ಜ್ವಾಲಾಮುಖಿಯ ಎತ್ತರ ಕೇವಲ 43 ಅಡಿ. ಇದು ಈಗ ನಿಷ್ಕ್ರಿಯವಾಗಿದೆ. 1910ರಲ್ಲಿ ಮೆಕ್ಸಿಕೋದಲ್ಲಿ ಕ್ರಾಂತಿ ನಡೆದಿತ್ತು. ಇದರ ಪರಿಣಾಮವನ್ನು ಈಗಿನ ಕಾಲಘಟ್ಟದಲ್ಲಿಯೂ ಕಾಣುವುದಕ್ಕೆ ಸಾಧ್ಯವಿದೆ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ

Read More

ಮಹಾರಾಜಾ ಕಾಲೇಜಿನ ಮಧುರ ನೆನಪು ……: ಮೂರ್ತಿ ದೇರಾಜೆ ಬರಹ

ಮೈಸೂರಿಗೆ ಬಂದು ಮಹಾರಾಜಾ ಕಾಲೇಜು ನೋಡಿ ನಾವು ಮಾತ್ರ ಅಲ್ಲ…. ನನ್ನ ಅಪ್ಪನೂ ಕಂಗಾಲು. ಕಾಲೇಜು ಕಛೇರಿಯಲ್ಲಿ, “ಮಾರ್ಕ್ಸ್ ಎಷ್ಟಿದೆ…? ಬೇಕಾದ ಸಬ್ಜೆಕ್ಟ್ ಅಷ್ಟು ಸುಲಭದಲ್ಲೆಲ್ಲಾ ಸಿಗಲ್ಲ….” ಅಂತೆಲ್ಲ ಸ್ವಲ್ಪ ಹೆಚ್ಚೇ ಹೆದರಿಸಿದರೂ…… ಸೀಟಂತೂ ಸಿಕ್ಕಿತು. ನಮ್ಮ ಪೂರ್ವಜನ್ಮದ ಪುಣ್ಯ ಅಂತ ಭಾವಿಸಿದ್ದೆವು…… ಆಗ ನಮಗೇನು ಗೊತ್ತು….!! ವರ್ಷ ಕಳೆಯುವಾಗ ಗೊತ್ತಾಯ್ತು, ಇಲ್ಲಿ ಮಾರ್ಕ್ಸ್ ವಿಷಯ ಬಿಡಿ…. ! ೪-೫ ಭಾರಿ ಫೈಲ್ ಆದವರಿಗೂ ಎಡ್ಮಿಶನ್ ಕಷ್ಟವಿಲ್ಲ ಅಂತ.
ಮೈಸೂರಿನ ಮಹಾರಾಜಾ ಕಾಲೇಜು ದಿನಗಳ ಕುರಿತು ಮೂರ್ತಿ ದೇರಾಜೆ ಬರಹ ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ