Advertisement

Tag: kendasampige

ಕಾಮ್ರೇಡ್ ಹೆಚ್.ಕೆ. ರಾಮಚಂದ್ರಪ್ಪ ಸ್ಮರಣೆ: ರಂಜಾನ್ ದರ್ಗಾ ಸರಣಿ

ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಬಹಳ ಬದಲಾವಣೆಗಳಾಗಿವೆ. ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಸುಲಿಗೆ ಯೋಜನೆ ಮೂಲಕ ಇಡೀ ಜಗತ್ತಿನ ಕಾರ್ಮಿಕರ ಆರ್ಥಿಕ ಸ್ಥಿತಿ ಕುಸಿಯಿತು. ಈ ಎಲ್ಲ ಕಾರಣಗಳಿಂದಾಗಿ ದಾವಣಗೆರೆಯ ಸಂಗಾತಿಗಳ ಸಾಧನೆ ಗತವೈಭವದಂತೆ ಕಾಣತೊಡಗಿತು. ಅಂಥ ಸಂದರ್ಭದಲ್ಲಿ ಕೂಡ ಹೆಚ್.ಕೆ. ರಾಮಚಂದ್ರಪ್ಪ ಅವರು ಎದೆಗುಂದಲಿಲ್ಲ. ಬದುಕಿನ ಕೊನೆಯ ಉಸಿರು ಇರುವವರೆಗೂ ಅವರು ನಗುಮುಖದಿಂದ ಕಾರ್ಮಿಕರ ಒಳಿತಿಗಾಗಿ ದುಡಿದದ್ದು ಇಂದು ಇತಿಹಾಸವಾಗಿದೆ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 92ನೇ ಕಂತು ನಿಮ್ಮ ಓದಿಗೆ

Read More

ಮಣಿ…: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ನೂರು ವರ್ಷಗಳಿಂದ ಗಣಿ ಸುರಂಗಗಳಿಂದ ತೆಗೆದ ಕಲ್ಲುಗಳ ಅದಿರನ್ನು ಪುಡಿಮಾಡಿ ಚಿನ್ನ ತೆಗೆದುಕೊಂಡು ಬಿಸಾಕಿರುವ ಗಣಿ ತ್ಯಾಜ್ಯದ ಗುಡ್ಡ ಅದು. ನೆಲದ ಮೇಲೆ ಇಷ್ಟು ದೊಡ್ಡ ಗುಡ್ಡ ಬಿದ್ದಿದೆ ಎಂದರೆ ಎಷ್ಟು ಜನರು ಗಣಿ ಸುರಂಗಗಳಲ್ಲಿ ಕೆಲಸ ಮಾಡಿರಬೇಕು? ಎಷ್ಟು ಬೆವರು ಸುರಿದಿರಬೇಕು? ಎಷ್ಟು ಜನರು ಸತ್ತಿರಬೇಕು? ಈ ಗುಡ್ಡಗಳು ಬೀಳಲು ನಮ್ಮ ಪೂರ್ವಜರೆ ಕಾರಣ ಎಂದುಕೊಂಡ. ಮಣಿ ತಂದೆ ಸೆಲ್ವಮ್. ಸೆಲ್ವಮ್ ತಂದೆ ಕುಪ್ಪ ಹೇಳುತ್ತಿದ್ದ ಅನೇಕ ಗಣಿ ದುರಂತಗಳ ಕರಾಳ ಕಥೆಗಳು ಮಣಿ ತಲೆಯಲ್ಲಿ ಹಾವುಗಳಂತೆ ಹರಿದಾಡತೊಡಗಿದವು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಎರಡನೆಯ ಕಂತು ನಿಮ್ಮ ಓದಿಗೆ

Read More

ಬೇಡದ್ದಲ್ಲೇ ಸೈಟು ಖರೀದಿಸಿದ್ದು: ಎಚ್. ಗೋಪಾಲಕೃಷ್ಣ ಸರಣಿ

ತೆಪ್ಪಗೆ ಜೇಬಿಂದ ಎರಡು ಹತ್ತರ ನೋಟು ಬಿಡಿಸಿ ಕೊಟ್ಟೆ. ಇನ್ನೂ ಬೇಕು.. ಅಂದ. ಮೂರು ನೋಟು ಅವನ ಕೈ ಸೇರಿದ ಮೇಲೆ ಅದನ್ನು ಅವನ ಜೇಬಿಗೆ ತುರುಕಿಕೊಂಡ. ನಂತರ ನನ್ನ ಬೆರಳು ಬಾಂಡ್ ಪೇಪರಿನ ಮೇಲೆ ಬಲವಾಗಿ ಊರಿ ಅವನ ಭಾರ ಎಲ್ಲಾ ಬಿಟ್ಟು ಹೊರಳಿಸಿದ. ಅವನು ಎಷ್ಟು ಕೋಪ ರೋಷದಿಂದ ಬೆರಳನ್ನು ಹೊರಳಿಸಿದ್ದ ಅಂದರೆ ಒಂದು ಕಾಲ ಮೇಲೆ ನಿಂತು ಇಡೀ ಅವನ ತೂಕವನ್ನು ನನ್ನ ಬೆರಳಿಗೆ ಹೊರೆಸಿದ್ದ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ

Read More

ಭೂಲೋಕದ ಅದ್ಭುತ ಪುಟ್ಟ ದ್ವೀಪ ಸಿಂಗಾಪುರ: ಡಾ. ವೆಂಕಟಸ್ವಾಮಿ ಪ್ರವಾಸ ಕಥನ

ನಮ್ಮ ಜೊತೆಗೆ ಬಂದಿದ್ದ ಮಹಿಳೆಯೊಬ್ಬರು ಹೋಟಲ್‌ನಲ್ಲಿ ಊಟ ಮಾಡುತ್ತಿದ್ದಾಗ ನಮ್ಮ ದೇಶದವರೇ ಆದ ಹೋಟಲ್ ಮಾಲಿಕನಿಗೆ `ಸಿಂಗಾಪುರದಲ್ಲಿ ಕ್ರೈಮ್ ರೇಟ್ ಏನಿದೆ?’ ಎಂದು ಕೇಳಿಬಿಟ್ಟರು. ಆತ, `ಮೇಡಮ್ ಸಿಂಗಾಪುರದಲ್ಲಿ ಕ್ರೈಮ್ ರೇಟ್ ಝೀರೋ. ಅದೆಲ್ಲ ಭಾರತದಲ್ಲಿ’ ಎಂದು ಕೋಪ ಮಾಡಿಕೊಂಡು ಹೇಳಿದರು.
ಡಾ. ವೆಂಕಟಸ್ವಾಮಿ ಪ್ರವಾಸ ಕಥನದಲ್ಲಿ ಸಿಂಗಪೂರ್‌ ಕುರಿತ ಬರಹ ಇಲ್ಲಿದೆ

Read More

ಹುಡುಗಾಟಗ್ಳು: ಸುಮಾ ಸತೀಶ್ ಸರಣಿ

ಔಟೂಂದ್ರೆ ಅಂಗೇ ಕಣ್‌ ಬುಟ್ಟು ನೋಡಿ, ದಿಟ್ವಾಗ್ಲೂ ಔಟೇನಾ‌ ಎಂಗೆ ಅಂಬ್ತ ತಿಳ್ಕಂಡೇ ಕಾಲು ‌ಪಕ್ಕುಕ್ಕೆ‌ ಮಡಗ್ಬೇಕು. ಎದುರ್ನವೇನಾರಾ ಸುಮ್ ಸುಮ್ಕೆ ಯೋಳಿ ಕಿಸೀತಾವಾ ಅಂಬ್ತ ಮೊದ್ಲು ಅವ್ರ ಮಕ ನೋಡೀವು. ಆಮ್ಯಾಕೆ ಕಾಲು ಗೆರೆ‌ ಮ್ಯಾಗೆ ಮಡಗೈತಾ ಅಂಬ್ತ ಕಂಡ್ಕಂಡು ಆಚೀಕ್ ಬರಾದು. ಅದೆಂತದು ಅಮ್ಮಾಟೇ‌ ಅಂದ್ರೆ ಅದು ಆಮ್‌ ಐ ರೈಟ್ ಅಂಬ್ತ ಇಂಗ್ಲಿಷ್ ‌ನಾಗೆ ಕ್ಯೋಳೋದು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಅವರ ಬಾಲ್ಯದ ಆಟಗಳನ್ನು ಕುರಿತು ಬರೆದಿದ್ದಾರೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ