ನನ್ನ ತಾಯಿ ವೆಂಕೂಬಾಯಿ: ರಂಜಾನ್ ದರ್ಗಾ ಸರಣಿ
ವೆಂಕೂಬಾಯಿ ನನ್ನ ಪಾಲಿನ ಮಹಾತಾಯಿ ಆಗಿದ್ದರು. ನಾನು ಅವರ ಮಗನೇ ಎನ್ನುವಷ್ಟರ ಮಟ್ಟಿಗೆ ಪ್ರೀತಿಸುತ್ತಿದ್ದರು. ನನಗಾಗಿ ಅವರು ಬ್ರಾಹ್ಮಣ ಸಂಪ್ರದಾಯದ ಎಲ್ಲ ಕಟ್ಟಳೆಗಳನ್ನು ಮೀರುತ್ತಿದ್ದರು. ಖುಷಿಯ ವಿಚಾರವೆಂದರೆ “ನಾನು ಮೀರುತ್ತಿದ್ದೇನೆ” ಎಂಬ ಭಾವವೂ ಅವರಲ್ಲಿ ಇರಲಿಲ್ಲ. ನಾನು ಬಿಸಿಬಿಸಿ ರೊಟ್ಟಿ ಪ್ರಿಯ. ಊಟದ ಸಮಯಕ್ಕೆ ಹೋದಾಗಲೆಲ್ಲ ನನಗಾಗಿ ರೊಟ್ಟಿ ಬಡಿಯುತ್ತಿದ್ದರು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 76ನೇ ಕಂತು ನಿಮ್ಮ ಓದಿಗೆ