Advertisement

Tag: Novel

“ಭವಿಷ್ಯದ ಕರಾಳತೆಯನ್ನು ಮುಂಗಂಡ ಎರಡು ಕಾದಂಬರಿಗಳು”

ಜಾಗತಿಕ ಪ್ರಭುತ್ವದಡಿಯಲ್ಲಿರುವ ಹಕ್ಸಲೀಯ ಕಾದಂಬರಿಯಲ್ಲಿ ಗೋಚರಿಸುವ ಸಮಾಜದಲ್ಲಿ ಸಂಬಂಧಗಳಿರುವುದಿಲ್ಲ – ಅಲ್ಲಿರುವ ಸೂತ್ರವೆಂದರೆ ‘ಎಲ್ಲರೂ ಎಲ್ಲರ ಸಂಬಂಧಿ’. ಈ ಜಗತ್ತಿನಲ್ಲಿ ಮಕ್ಕಳು ತಾಯಿಯ ಗರ್ಭದಲ್ಲಲ್ಲ, ವಿಶಾಲ ಕೋಳಿಗೂಡುಗಳಂತಹ ‘ಕಾವುಮನೆ’ಗಳಲ್ಲಿ ಜನ್ಮ ಪಡೆಯುತ್ತಾರೆ. ಟ್ಯೂಬು, ಇನ್ಕ್ಯುಬೇಟರುಗಳಲ್ಲಿರುವಾಗಲೇ ಭ್ರೂಣಗಳನ್ನು ವರ್ಗಗಳಾಗಿ ವಿಂಗಡಿಸಿ, ಆಯಾ ವರ್ಗಗಳಿಗೆ ಹೊಂದುವಂತೆ ಮಾಡಲು ಅವುಗಳಿಗೆ ಹಾರ್ಮೋನುಗಳನ್ನು, ಕೆಮಿಕಲ್ಲುಗಳನ್ನು ನೀಡಲಾಗುತ್ತದೆ. ಕಮಲಾಕರ ಕಡವೆ ಅಂಕಣದಲ್ಲಿ ಬ್ರೇವ್ ನ್ಯೂ ವರ್ಲ್ಡ್ ಕಾದಂಬರಿಯ ವಿಶ್ಲೇಷಣೆ. 

Read More

ಸು.ರುದ್ರಮೂರ್ತಿ ಶಾಸ್ತ್ರಿ ಬರೆದ ಹೊಸ ಕಾದಂಬರಿಯ ಕೆಲವು ಪುಟಗಳು

ಮಹಾದೇವಿ ಅಡಿಗೆ ಮನೆಯ ಬಾಗಿಲ ಮರೆಯಿಂದಲೇ ಇಣುಕಿ ನೋಡುತ್ತಿದ್ದಳು. ನಿನ್ನೆ ಕೌಶಿಕ ತನ್ನನ್ನು ನುಂಗುವಂತೆ ನೋಡುತ್ತಿದ್ದುದಕ್ಕೂ, ಈಗ ಮಂತ್ರಿ ಮನೆಗೆ ಬಂದಿರುವುದಕ್ಕೂ ಏನೋ ಸಂಬಂಧವಿರಬೇಕೆಂದು ಅವಳಿಗೆ ಸಂದೇಹ ಬಂತು.  ಹೇಗೆ ಮಾತು ಆರಂಭಿಸಬೇಕೆಂದು ತೋಚದೆ ಮಹಾಬಲಯ್ಯ ಚಡಪಡಿಸಿದ. ಆದರೆ ಬಂದಾಗಿದೆ, ಮಾತಾಡಲೇಬೇಕಾಗಿತ್ತು. ರಾಜಾಜ್ಞೆಯನ್ನು ಮಂತ್ರಿಯಾಗಿ ಪಾಲಿಸಲೇ ಬೇಕಾಗಿತ್ತು. -ಸು.ರುದ್ರಮೂರ್ತಿ ಶಾಸ್ತ್ರಿಗಳು  ಬರೆದ ‘ಅಕ್ಕಮಹಾದೇವಿ’ ಹೊಸ ಕಾದಂಬರಿಯ ಒಂದು ಅಧ್ಯಾಯ ಇಲ್ಲಿದೆ. 

Read More

ನೇತ್ರಾವತಿಯಲ್ಲಿ ಹರಿದು ಹೋದ ನೀರೆಷ್ಟೋ…

ಏನೇನೋ ಚಿಂತಿಸುತ್ತ ಇದಿನಬ್ಬ ಕುಳಿತಿದ್ದಾನೆ; ಅಷ್ಟರಲ್ಲೇ ದೂರದಲ್ಲಿ ಒಂದು ಸಣ್ಣ ತಂಡ ನಡೆದು ಬರುತ್ತಿದೆ. ಇದಿನಬ್ಬನಿಗೆ ಮತ್ತೆ ಬದುಕುವ ಆಸೆ ಚಿಗುರಿತು, ಅಪರಿಚಿತರಾದರೇನು? ಮನುಷ್ಯರನ್ನು ಕಂಡೆನಲ್ಲಾ ಅನ್ನುವ ಖುಷಿ. ಹತ್ತಿರವಾದಂತೆ ಮುಖ ಚಹರೆ ಸ್ಪಷ್ಟವಾಗತೊಡಗಿತು. ಹೌದು, ಯೂಸುಫ್ ಮತ್ತು ಇತರ ಸಹ ಯಾತ್ರಿಕರು. ದೂರದಲ್ಲಿ ಬಂದವರಿಗೂ ಪರಿಚಯ ಸಿಕ್ಕಿರಬೇಕು. ಎಲ್ಲರೂ ಇದಿನಬ್ಬರ ಕಡೆಗೆ ಓಡಿ ಬಂದರು.  ಉಳಿದವರು ಎಲ್ಲಿ ಹೋದರೋ ಗೊತ್ತಾಗಲಿಲ್ಲ.”

Read More

ಒಬ್ಬರೊಳಗೊಬ್ಬರು ಮಾಯವಾಗುವ ಬಗೆ

‘ದಿ ವೈಟ್ ಕ್ಯಾಸಲ್’ ಕಾದಂಬರಿ ಟರ್ಕಿಯ ಆಟಮನ್ ಸಾಮ್ರಾಜ್ಯದಲ್ಲಿ ಗುಲಾಮನಾಗಿರುವ ಇಟಲಿ ದೇಶದ ವಿದ್ಯಾರ್ಥಿಯೊಬ್ಬನ ಪ್ರವರ. ಇದು ಹದಿನೇಳನೆಯ ಶತಮಾನದ ಕತೆ. ಇಟಲಿಯ ವೆನಿಸ್ ನಗರದಿಂದ ನೇಪಲ್ಸ್ ನಗರಕ್ಕೆ ಹಡಗಿನಲ್ಲಿ ಪ್ರಯಾಣಿಸುತ್ತಿದ್ದಾಗ ಈತ ಟರ್ಕರ ಸೈನ್ಯಕ್ಕೆ ಸೆರೆ ಸಿಕ್ಕವನು. ಜೀವ ಹೋದರೂ ತಾನು ಹುಟ್ಟಿದ ಕ್ರಿಶ್ಚಿಯನ್ ಧರ್ಮವನ್ನು ಬಿಡಲಾರೆ ಎಂಬ ಪಣ ತೊಟ್ಟವನು. ತೊಟ್ಟ ಪಣವನ್ನು ಕಾಯ್ದುಕೊಳ್ಳುವುದು ಸುಲಭವೇ ? ಧರ್ಮದ ಈ ನಂಟು ಅವನನ್ನು ಎತ್ತ ಕೊಂಡೊಯ್ಯುವುದು?”

Read More

ಬಸವಳಿದ ಬಾಳಿಗೆ ಬೆಳಕು ನೀಡಬೇಕಿದೆ ಕಂದೀಲು: ಶ್ರೀದೇವಿ ಕೆರೆಮನೆ ಅಂಕಣ

“ಕಥಾವಸ್ತುವೇನೋ ತೀರಾ ಸರಳ ಎಂದೆನಿಸಿದರೂ ಅದನ್ನು ನಿರೂಪಿಸುವ ಭಿನ್ನತೆಯಲ್ಲಿಯೇ ಕಥೆಗಾರ ಸೋಮುರೆಡ್ಡಿ ಗೆಲ್ಲುತ್ತಾರೆ. ಭಾಷೆಯ ಆಯ್ಕೆಯಲ್ಲಿ ಸೋಮು ಗೆಲ್ಲುತ್ತಾರೆ ಎನ್ನುವುದಕ್ಕಿಂತ ಅದು ಅವರ ಆಡುಭಾಷೆಯೇ ಆಗಿರುವುದರಿಂದ ತೀರಾ ನಿರ್ಭಿಡೆಯಿಂದ….”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ