ಕಾಳಪ್ಪಬ್ಲಾಕಿನಲ್ಲಿ ಟೆಸ್ಟ್ ಕ್ರಿಕೆಟಿಗರು!
ಈ ಕ್ರಿಕೆಟ್ ಹುಚ್ಚು ಬರೆ ಹುಡುಗರಿಗಲ್ಲ, ಹುಡುಗಿಯರಿಗೂ ಇದ್ದಿತು. ನಮ್ಮ ಮನೆಯಲ್ಲೂ ರಾಮೇಶ್ವರಿ, ಎದಿರು ಮನೆಯ ಸ್ವರ್ಣ, ವಿಜಯ, ಪುಷ್ಪರಿಗೂ ಕ್ರಿಕೆಟ್‌ನಲ್ಲಿ ಬಹಳ ಆಸಕ್ತಿ ಇದ್ದು ಅವರೂ ಕ್ರಿಕೆಟ್ ನೋಡಲು ಹೋಗುತ್ತಿದ್ದರು. 1953 ಜನವರಿಯಲ್ಲಿ ಅಖಿಲ ಭಾರತ ವಿಶ್ವವಿದ್ಯಾಲಯಗಳ ಕ್ರಿಕೆಟ್ ಪಂದ್ಯಾವಳಿ ಬೆಂಗಳೂರಿನಲ್ಲಿ ನಡೆಯಿತು. ಅದರ ಹೆಸರು ರೋಹಿಂಗಟನ್ ಬೇರಿಯಾ ಟ್ರೋಫಿ.
Read More