ದ ಗ್ರೇಟ್ ನೋಟ್ ಬುಕ್ ರಾಬರಿ!: ಪೂರ್ಣೇಶ್ ಮತ್ತಾವರ ಸರಣಿ
ಜೋಗಿ ಕಿಂದರಿ ಬಾರಿಸತೊಡಗಿದೊಡನೆ ಜಗತ್ತನ್ನೇ ಮೋಹಿಸುವ ಅದರ ನಾದಕ್ಕೆ ಇಲಿಗಳು ಅನ್ನದ ಮಡಕೆಯನ್ನು ಆಗಲಿ, ಟೋಪಿಯ ಗೂಡನ್ನು ತ್ಯಜಿಸಿ, ಅಂಗಿಯ ಜೇಬು, ಕಾಲು ಚೀಲಗಳನ್ನೆಲ್ಲಾ ಬಿಟ್ಟು ಹಾರುತ್ತಾ, ಓಡುತ್ತಾ, ನೆಗೆದು ಬಂದು ಅವನನ್ನೇ ಹಿಂಬಾಲಿಸಿ ಹೋಗುವಂತೆ ಹೌಸ್ ಮಾಸ್ಟರ್‌ರ ಹುಣಸೆ ಬರಲಿನ ಬಾರಿಸುವಿಕೆಗೆ ನಮ್ಮ ಗೆಳೆಯರು ಟ್ರಂಕ್ ಕಪಾಟುಗಳ ಒಳಗಿನಿಂದ, ಹಾಸಿಗೆ ದಿಂಬುಗಳ ಕೆಳಗಿನಿಂದ, ವೆಂಟಿಲೇಟರ್ ಸಂದಿಯಿಂದ, ಫ್ಯಾನ್ ರೆಕ್ಕೆಯ ಮೇಲಿನಿಂದ, ಟಾಯ್ಲೆಟ್ ರೂಮಿನ ಹೆಂಚಿನ ತಳದಿಂದ, ಮರ ಗಿಡಗಳ ಮರೆಯಿಂದ ನೋಟ್ ಬುಕ್‌ಗಳನ್ನು ಎತ್ತಿ ತರಲಾರಂಭಿಸಿದ್ದರು.
ಪೂರ್ಣೇಶ್ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿ