ಸಮಬೆಸಗಳ ಸರಿಗಮ ತಪ್ಪಿದ್ದಲ್ಲ
ಈ ಬಾರಿ ಸಿಡ್ನಿ ಮಹಾನಗರ ವಲಯದಲ್ಲಿ ಜಾರಿಗೆ ಬಂದ ಲಾಕ್ ಡೌನ್ ಸ್ವಲ್ಪ ಗಲಾಟೆ ಎಬ್ಬಿಸಿದೆ. ನಗರದ ಪಶ್ಚಿಮ ಬಡಾವಣೆಗಳಲ್ಲಿ ಹೆಚ್ಚು ಡೆಲ್ಟಾ ವೈರಸ್ ಸೋಂಕು ಕಾಣಿಸಿದ್ದು ವರದಿಯಾಗಿತ್ತು. ಆ ಪ್ರದೇಶದಲ್ಲಿ ವಾಸಿಸುತ್ತಿರುವ, ಅನೇಕತೆಗಳಿರುವ- ಅಂದರೆ ಆಂಗ್ಲೋ-ಆಸ್ಟ್ರೇಲಿಯನ್ ಅಲ್ಲದ ಬೇರೆ ಸಂಸ್ಕೃತಿಗಳ ಜನರು ಲಾಕ್ ಡೌನ್ ನಿಯಮಗಳನ್ನು ಸರಿಯಾಗಿ ಪಾಲಿಸಲಿಲ್ಲವೆಂದು ಸುದ್ದಿಯಾಗಿತ್ತು. ರಾಜ್ಯಸರ್ಕಾರ ಆ ಬಡಾವಣೆಗಳಲ್ಲಿ ಬಂದೋಬಸ್ತು ಮಾಡಲು, ಪೊಲೀಸರನ್ನು ಕಳಿಸಿತು. ಇದು ಅಲ್ಲಿನ ವಿವಿಧ ಸಂಸ್ಕೃತಿಗಳ ಜನಸಮುದಾಯಗಳನ್ನು ಆತಂಕಕ್ಕೀಡು ಮಾಡಿದೆ ಎಂಬ ಸುದ್ದಿ ಚರ್ಚೆಗೆ ಬಂದಿದೆ. ಡಾ. ವಿನತೆ ಶರ್ಮ ಬರೆಯುವ ‘ಆಸ್ಟ್ರೇಲಿಯಾ ಪತ್ರ’
Read More