Advertisement

Tag: Ramjan Darga

ಕಾಮ್ರೇಡ್ ಹೆಚ್.ಕೆ. ರಾಮಚಂದ್ರಪ್ಪ ಸ್ಮರಣೆ: ರಂಜಾನ್ ದರ್ಗಾ ಸರಣಿ

ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಬಹಳ ಬದಲಾವಣೆಗಳಾಗಿವೆ. ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಸುಲಿಗೆ ಯೋಜನೆ ಮೂಲಕ ಇಡೀ ಜಗತ್ತಿನ ಕಾರ್ಮಿಕರ ಆರ್ಥಿಕ ಸ್ಥಿತಿ ಕುಸಿಯಿತು. ಈ ಎಲ್ಲ ಕಾರಣಗಳಿಂದಾಗಿ ದಾವಣಗೆರೆಯ ಸಂಗಾತಿಗಳ ಸಾಧನೆ ಗತವೈಭವದಂತೆ ಕಾಣತೊಡಗಿತು. ಅಂಥ ಸಂದರ್ಭದಲ್ಲಿ ಕೂಡ ಹೆಚ್.ಕೆ. ರಾಮಚಂದ್ರಪ್ಪ ಅವರು ಎದೆಗುಂದಲಿಲ್ಲ. ಬದುಕಿನ ಕೊನೆಯ ಉಸಿರು ಇರುವವರೆಗೂ ಅವರು ನಗುಮುಖದಿಂದ ಕಾರ್ಮಿಕರ ಒಳಿತಿಗಾಗಿ ದುಡಿದದ್ದು ಇಂದು ಇತಿಹಾಸವಾಗಿದೆ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 92ನೇ ಕಂತು ನಿಮ್ಮ ಓದಿಗೆ

Read More

ಮಹೋನ್ನತ ಮಾನವ: ರಂಜಾನ್‌ ದರ್ಗಾ ಸರಣಿ

ಅವರೊಮ್ಮೆ ಸಸ್ಯಶಾಸ್ತ್ರದ ಪ್ರಯೋಗಾಲಯಕ್ಕೆ ಭೇಟಿ ನೀಡಿದಾಗ, ಪ್ರಯೋಗಕ್ಕಾಗಿ ಎಲ್ಲಿಂದಲೋ ತಂದ ಕಮಲದ ಹೂ ನೋಡಿದರು. ಮತಗೆ ಅದನ್ನೆತ್ತಿ ಖಲಿಲ್ ಗಿಬ್ರಾನನ ಕವನದ ಸಾಲೊಂದನ್ನು ಉಸುರಿದರು. ಅದರ ಪಕಳೆಗಳನ್ನು ಕಿತ್ತು ಪರೀಕ್ಷಿಸುವುದು ಅವರಿಗೆ ಹಿಂಸೆ ಎನಿಸಿತ್ತು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 89ನೇ ಕಂತು ನಿಮ್ಮ ಓದಿಗೆ

Read More

ಭಕ್ತವತ್ಸಲ ಸಿದ್ಧಗಂಗಾ ಶ್ರೀಗಳು: ರಂಜಾನ್ ದರ್ಗಾ ಸರಣಿ

ಎಲ್ಲ ಜಾತಿ ಜನಾಂಗಗಳ ಮಕ್ಕಳ ಶೈಕ್ಷಣಿಕ ಏಳ್ಗೆಯೆ ಅವರ ಬಹುದೊಡ್ಡ ಗುರಿಯಾಗಿತ್ತು. ಪ್ರತಿ ವರ್ಷ ಹತ್ತುಸಾವಿರ ಮಕ್ಕಳನ್ನು ಸಾಕುತ್ತ, ಅವರಿಗೆ ಯಾವುದೇ ರೀತಿಯ ಕೊರತೆಯಾಗದಂತೆ ನೋಡಿಕೊಳ್ಳುತ್ತ, ಶೈಕ್ಷಣಿಕವಾಗಿ ಅವರನ್ನು ಉನ್ನತ ಸ್ಥಾನಕ್ಕೇರಿಸುವುದು ಸಾಮಾನ್ಯ ಮಾತಲ್ಲ. ಅವರ ಮಠದ ಎಲ್ಲ ವಿಭಾಗಗಳಲ್ಲಿ ನಿಷ್ಠೆಯಿಂದ ಎಲೆ ಮರೆಯ ಕಾಯಿಯಂತೆ ಕಾರ್ಯನಿರ್ವಹಿಸುವ ಪ್ರತಿಯೊಬ್ಬರೂ ಗೌರವಕ್ಕೆ ಅರ್ಹರಾಗಿದ್ದಾರೆ. ಅವರ ಮಠದ ಆವರಣವು ಪುಟ್ಟ ಭಾರತವೇ ಆಗಿದೆ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ಪತ್ರಿಕಾ ರಂಗದ ನಾಡೋಜ ಪಾಟೀಲ ಪುಟ್ಟಪ್ಪ: ರಂಜಾನ್‌ ದರ್ಗಾ ಸರಣಿ

ಬಡವರ ಬಗ್ಗೆ, ಹದಗೆಟ್ಟ ರಾಜಕೀಯ ಸ್ಥಿತಿಯ ಬಗ್ಗೆ ಮತ್ತು ಸಾಮಾಜಿಕ ನಿಷ್ಕ್ರಿಯತೆಯ ಬಗ್ಗೆ ಪಾಪು ಮರಗುತ್ತಿದ್ದರು. ಸಾಹಿತ್ಯ, ರಾಜಕಾರಣ, ಸಿನಿಮಾರಂಗ ಮುಂತಾದ ಕ್ಷೇತ್ರಗಳಲ್ಲಿನ ದೊಡ್ಡವರ ಸಣ್ಣತನದ ಬಗ್ಗೆ ಮತ್ತು ಸಣ್ಣವರ ದೊಡ್ಡತನದ ಬಗ್ಗೆ ವಿವರಿಸುತ್ತಿದ್ದರು. ಅವರ ಮಾತುಗಳು ರಂಜಕತೆಯಿಂದ ಮತ್ತು ಕೆಲವು ಸಲ ವಿಷಾದದಿಂದ ಕೂಡಿರುತ್ತಿದ್ದವು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 83ನೇ ಕಂತು ನಿಮ್ಮ ಓದಿಗೆ

Read More

ಮರೆಯಲಾಗದ ಮಾತೆ: ರಂಜಾನ್‌ ದರ್ಗಾ ಸರಣಿ

ಮಾತಾಜಿಯವರು ಸ್ಪಷ್ಟವಾದ ಧ್ವನಿಯಲ್ಲಿ ಹೇಳುತ್ತಿದ್ದರು. ಆಗ ಅವರು ಮಾತನಾಡುತ್ತಿದ್ದುದು ಮಹಿಳಾ ಜಗದ್ಗುರುಗಳ ವಿಚಾರವಾಗಿತ್ತು. ಅವರು ಹೇಳುವ ಶೈಲಿ ವೀರೋಚಿತವಾಗಿತ್ತು. ಯೌವನದ ಉತ್ಸಾಹದಿಂದ ಕೂಡಿದ ಸಾತ್ವಿಕ ಸೌಂದರ್ಯ ಮತ್ತು ಅಧ್ಯಾತ್ಮದ ಮೆರಗು ಮೇಳೈಸಿದ ಅವರ ಮಾತು, ಮಹಿಳೆಯ ಅಸ್ಮಿತೆಯ ಬಗೆಗಿನ ದೃಢನಿರ್ಧಾರದ ಧ್ವನಿಯಾಗಿತ್ತು. ಅವರ ಮಾತಿನಿಂದ ಸಭೆಯಲ್ಲಿ ವಿದ್ಯುತ್ ಸಂಚಾರವಾದಂತಾಯಿತು. ಮಹಿಳೆ ಜಗದ್ಗುರುವಾಗುವುದೆಂದರೇನು? ಅದು ಹೇಗೆ ಸಾಧ್ಯ?
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 82ನೇ ಕಂತು ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ