ಸಾತ್ವಿಕ ಜೀವನವಿಧಾನವೇ ಬಹುದೊಡ್ಡ ಆಸ್ತಿ
ಒಂದು ಸಲ ಮಳೆಗಾಲದಲ್ಲಿ ರಾತ್ರಿ ಹೀಗೆ ಸಿಕ್ಕಿಹಾಕಿಕೊಂಡು ನಾವು ಮಕ್ಕಳು ಮತ್ತು ಹಿರಿಯರೆಲ್ಲ ಬಹಳ ಹಸಿದು ಆ ಹಾಸ್ಟೆಲ್ ಕೋಣೆಯಲ್ಲಿ ಕುಳಿತಿದ್ದೆವು. ಅಷ್ಟೊತ್ತಿಗೆ ಜಂಬಗಿಯವರು ರಾತ್ರಿ ಒಂಬತ್ತು ಗಂಟೆ ಹೊತ್ತಿಗೆ ಯಾವುದೋ ಖಾನಾವಳಿಯಿಂದ ನಮಗೆಲ್ಲ ಸಾಕಾಗುವಷ್ಟು ಬಿಸಿ ಅನ್ನ ಮತ್ತು ಸಾರು ತೆಗೆದುಕೊಂಡು ಬಂದರು. ಅವೆರಡೂ ರುಚಿ ಶುಚಿಯಾಗಿದ್ದವು. ಆ ಚಳಿ, ಆ ಹಸಿವು, ಆ ಬಿಸಿ ಬಿಸಿ ಅನ್ನ ಮತ್ತು ಸಾರಿನ ರುಚಿ ಎಂದೂ ಮರೆಯಲು ಸಾಧ್ಯವಿಲ್ಲ. ನಾನು ದೊಡ್ಡವನಾದ ಮೇಲೆ ಜಂಬಗಿಯವರನ್ನು ಹುಡುಕಲು ಯತ್ನಿಸಿ ವಿಫಲನಾದೆ.”
Read More