Advertisement

Tag: Short story

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರಾಜು ಹೆಗಡೆ ಕತೆ

ಸಂಜೆಯಾಗುತ್ತಿದ್ದಂತೆ, ಹೆಂಡತಿಗೆ ಅದು ಕಾಡತೊಡಗಿತು. ಸಾವಿರಾರು ರೂಪಾಯಿಯ ಮುಖ ನೋಡಿ ಅವಳ ಬಯಕೆಯನ್ನು ಇಲ್ಲ ಮಾಡದೆವಲ್ಲ, ನಾವೇನು ಅಷ್ಟು ದುಡ್ಡಿನಿಂದ ಹಂಚು ಹಾಕುವುದು ಅಷ್ಟರಲ್ಲೆ ಇದೆ ಎಂದೆಲ್ಲ ಗೊಣಗೊಣ ಮಾಡತ್ತಿದ್ದಳು. ನನಗೂ ಹಾಗೇ ಅನಿಸುತ್ತಿತ್ತು. ಆದರೆ ಅದು ಮುಗಿದ ಕತೆ ಎಂದು ನನಗೆ ನಾನೇ ಹೇಳಿಕೊಂಡು ಮರೆಯಲು ಯತ್ನಿಸುತ್ತಿದ್ದೆ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರಾಜು ಹೆಗಡೆ ಕತೆ “ಫ್ರಿಜ್ಜು”

Read More

ಗುರುರಾಜ್‌ ಕೆ. ಕುಲಕರ್ಣಿ ಬರೆದ ಈ ಭಾನುವಾರದ ಕತೆ “ರೊಟ್ಟಿ ಕಾರಕೂನ”

ಚೇರಮನ್ನರು ಎದ್ದು ಹೋದ ಮೇಲೆ, ಎಲ್ಲರಿಗಿಂತ ವಯಸ್ಸಿನಲ್ಲಿಯೂ, ಹುದ್ದೆಯಲ್ಲಿಯೂ ಚಿಕ್ಕವನಾಗಿದ್ದ ಸಿಪಾಯಿ ನಾಗಯ್ಯನೇ ಮಾಸ್ತರುಗಳಿಗೆ ಸಮಾಧಾನ ಹೇಳಿದ – “ಸರಾ, ಅವಗ ಮಾಸ್ತರ ಆಗಬೇಕಂದ್ರ ಇನ್ನೂ ಐದಾರು ವರ್ಸ ಕಾಲೇಜು ಕಲತು ಪಾಸ ಮಾಡ್ಬಕು. ಇಲ್ಲ್ಯಾಂದರ ನೀವೆಲ್ಲಾ ಅವರಪ್ಪನ ಮುಸುಡಿ ನೋಡಿ ಪಾಸ ಮಾಡತಿದ್ರಿ, ಶಹರದೂರಾಗ ಯಾರು ಇವ್ನ ಪಾಸು ಮಾಡ್ಬಕು?
ಗುರುರಾಜ್‌ ಕೆ. ಕುಲಕರ್ಣಿ ಬರೆದ ಕತೆ “ರೊಟ್ಟಿ ಕಾರಕೂನ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ನನ್ನ ಮೆಚ್ಚಿನ ನನ್ನ ಕಥಾ ಸರಣಿಯಲ್ಲಿ ಶ್ರೀಧರ ಬನವಾಸಿ ಕತೆ

ಜಿನದತ್ತ ತಿಮ್ಮಪ್ಪನ ಮಾತುಗಳಿಗೆ ಉತ್ತರಿಸಲು ಧೈರ್ಯ ತೋರಲಿಲ್ಲ. ಕಥೆಗಾರನ ಕಲ್ಪನೆ, ಸ್ವಾತಂತ್ರ್ಯವೇನು ಎಂಬುದು ಆ ಪಾತ್ರಕ್ಕೇನು ಗೊತ್ತು? ಒಂದು ಕತೆಯ ಎಲ್ಲ ಪಾತ್ರಗಳು ಕತೆಗಾರ ಹೇಳಿದಂತೆ ಕೇಳಬೇಕು ಅನ್ನುವ ಸತ್ಯ ಆ ತಿಮ್ಮಪ್ಪನಂತವನಿಗೆ ಎಲ್ಲಿ ತಾನೇ ಅರ್ಥವಾಗಬೇಕು. ಅವನಿಗೆ ಇದನ್ನು ಬಿಡಿಸಿ ಹೇಳಿದರೂ ಅರ್ಥ ಮಾಡಿಕೊಳ್ಳುತ್ತಾನೆಯೇ?
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಶ್ರೀಧರ ಬನವಾಸಿ ಬರೆದ ಕತೆ `ಜಿನದತ್ತನೆಂಬ ಕಥೆಗಾರನೂ…’ ನಿಮ್ಮ ಈ ಭಾನುವಾರದ ಓದಿಗೆ

Read More

ಮಹಮ್ಮದ್‌ ರಫೀಕ್‌ ಕೊಟ್ಟೂರು ಬರೆದ ಈ ಭಾನುವಾರದ ಕತೆ

ಮುಂದಿನ ಬೆಟ್ಟವನ್ನು ತೋರಿಸಿ ಗುಡದಪ್ಪ ಇದನ್ನು ದಾಟಬೇಕು ಎಂದ. ನಾನು ಹೌಹಾರಿದೆ. ಮತ್ತೆ ಮುಂದಿನ ಬೆಟ್ಟ ಏರತೊಡಗಿದೆವು. ಮೊದಲಿಗಿಂತಲೂ ಸ್ವಲ್ಪ ಕಡಿದಾಗೇ ಇತ್ತು. ದಾರಿಯಿಲ್ಲದ ಕಲ್ಲುಗಳ ನಡುವೆ ದಾರಿ ಹುಡುಕುತ್ತಾ ನಡೆಯುವುದು ಕಷ್ಟವಾಯಿತು.
ಮಹಮ್ಮದ್‌ ರಫೀಕ್‌ ಕೊಟ್ಟೂರು ಬರೆದ ಈ ಭಾನುವಾರದ ಕತೆ “ಡಾಲ್ಮೆನ್‌ಗಳು” ನಿಮ್ಮ ಓದಿಗೆ

Read More

ಸಚೇತನ ಭಟ್‌ ಅನುವಾದಿಸಿದ ಜಪಾನಿನ ಹರುಕಿ ಮುರಕಮಿ ಕತೆ

ಮಧ್ಯರಾತ್ರಿ ನನಗೆ ಎಚ್ಚರವಾದಾಗ ಇಜುಮಿ ಇರಲಿಲ್ಲ. ನಾನು ಹಾಸಿಗೆಯ ಪಕ್ಕದಲ್ಲಿದ್ದ ಗಡಿಯಾರವನ್ನು ನೋಡಿದೆ. ಹನ್ನೆರಡು ಮೂವತ್ತು. ತಡಕಾಡುತ್ತಾ ಲ್ಯಾ೦ಪ್ ಹಚ್ಚಿದೆ. ರೂಮಿನ ಸುತ್ತ ದೃಷ್ಟಿ ಹಾಯಿಸಿದೆ. ನಾನು ಗಾಢ ನಿದ್ರೆಯಲ್ಲಿದ್ದಾಗ ಯಾರೋ ಕದ್ದು ಒಳ ನುಗ್ಗಿ ಸುತ್ತಲೂ ನಿಶ್ಯಬ್ದವನ್ನು ಹರಡಿಟ್ಟು ಹೋದ ಹಾಗೆ ಎಲ್ಲವೂ ಸ್ತಬ್ದವಾಗಿದ್ದವು. ನಾನು ಎದ್ದು ಹೊರಗೆ ಬಂದು ಹಾಲಿನಲ್ಲಿ ಹುಡುಕಾಡಿದೆ. ಇಜುಮಿ ಅಲ್ಲಿರಲಿಲ್ಲ.
ಸಚೇತನ ಭಟ್‌ ಅನುವಾದಿಸಿದ ಜಪಾನಿನ ಪ್ರಸಿದ್ಧ ಕತೆಗಾರ ಹರುಕಿ ಮುರಕಮಿ ಕತೆ “ಮನುಷ್ಯನನ್ನು ತಿನ್ನುವ ಬೆಕ್ಕುಗಳು”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ