‘ವಾಟ್ ದ ಹೆಕ್’ ಅಮ್ಮಾ…
‘ನೀವೇ ಸರಿ, ಅರವಿಂದರಾಯರೇ. ಮಕ್ಕಳನ್ನು ಬಹಳ ಚೆನ್ನಾಗಿ ಬೆಳೆಸಿದ್ದೀರಿ’ ಇನ್ನೂ ಅವರ ಮಾತು ಮುಗಿದಿಲ್ಲ. ಎಲ್ಲಿಂದ ಬಂತೋ ಒಂದು ದೊಡ್ಡ ಅಲೆ, ಅಲ್ಲಿ ಕೂತಿದ್ದವರನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿಬಿಟ್ಟಿತು. ಕಣ್ಣು ಮುಚ್ಚಿ ಬಿಡುವುದರಲ್ಲಿ ಎಲ್ಲ ಮರಳು, ಎಲ್ಲೆಲ್ಲೂ ನೀರು. ಜನರ ಕೂಗು, ಹಾಹಾಕಾರ. ಸುಕನ್ಯ ಕಣ್ಣು ಬಿಟ್ಟಾಗ ಹತ್ತಿರ ಯಾರೂ ಕಾಣುತ್ತಿಲ್ಲ. ‘ವಿನೂ, ವಿಶೂ’ ಜೋರಾಗಿ ಕೂಗುತ್ತಾ ಇಡೀ ಸಮುದ್ರದ ದಡದಲ್ಲಿ ಹುಚ್ಚು ಹಿಡಿದಂತೆ ಓಡುತ್ತಿದ್ದಾಳೆ.
ಗುರುಪ್ರಸಾದ್ ಕಾಗಿನೆಲೆ ಬರೆದ ನೀಳ್ಗತೆಯ ಕಂತು