ಪೀಪಲ್ಸ್ ರಿಪಬ್ಲಿಕ್ ಚೀನಾದಲ್ಲಿ….: ಡಾ. ವೆಂಕಟಸ್ವಾಮಿ ಪ್ರವಾಸ ಕಥನ
ಸುತ್ತಲೂ ಆಕಾಶದ ಒಳಗೆ ಮೋಡಗಳ ಜೊತೆಗೆ ಸಾಗರದ ಅಲೆಗಳಂತೆ ಕಣ್ಣು ಹಾಯುವವರೆಗೂ ಬೆರೆತುಹೋಗಿರುವ ಅನಂತ ಗಿರಿ ಶಿಖರ ಶ್ರೇಣಿಗಳು. ತಣ್ಣನೆ ರಾತ್ರಿಯಲ್ಲಿ ಚಳಿಯ ರಗ್ಗನ್ನೊದ್ದು ಕಣ್ಣುಜ್ಜಿಕೊಂಡು ಪೂರ್ವದಲ್ಲಿ ಬೆಟ್ಟಗಳ ಕಡೆಗೆ ಸೂರ್ಯನು ನೋಡುತ್ತಿದ್ದನು. ನಡುವೆ ಬಿಳಿ ಮುಗಿಲು ಮತ್ತು ಮಂಜಿನ ತೆರೆಗಳ ಸರಸ. ಎಲ್ಲವನ್ನು ಸೀಳಿಕೊಂಡು ಆಕಾಶವನ್ನೇ ಮೆಟ್ಟಿಲು ಮಾಡಿಕೊಂಡು ಗಿರಿ ಶಿಖರಗಳ ಮೇಲೆ ಎದ್ದು ಬಿದ್ದು ಚಾಚಿ ಮಲಗಿರುವ ಡ್ರ್ಯಾಗನ್ ಮಹಾಗೋಡೆಗಳು.
ಚೀನಾ ಪ್ರವಾಸದ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ