ಚಿ ಛೀ ಚೀನಾ: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ
ಅಂದವಾಗಿ ಬರೆಯುವ ಕಲೆಯಾದ ಕ್ಯಾಲಿಗ್ರಫಿ ಮತ್ತು ಚಿತ್ರಕಲೆಗಳ ಬಗ್ಗೆ ಚೀನಾದ ಜನರಿಗೆ ಅತೀವವಾದ ಆಸಕ್ತಿಯಿದೆ. ಚಿತ್ರಕಲೆ ಮತ್ತು ಕ್ಯಾಲಿಗ್ರಫಿ ಕಲೆಗಳು ಚೀನಾದಲ್ಲಿ ಒಂದಕ್ಕೊಂದು ಪೂರಕ ಎನ್ನುವಂತೆ ಬೆಳೆದುಕೊಂಡು ಬಂದಿವೆ. ವರ್ಣಚಿತ್ರವನ್ನು ರಚಿಸಿದ ಬಳಿಕ ಆ ವರ್ಣಚಿತ್ರಕ್ಕೆ ಸರಿಹೊಂದುವ ಕವಿತೆಯನ್ನು ಕಲಾತ್ಮಕವಾಗಿ ಬರೆಯಲಾಗುತ್ತಿತ್ತು. ಹೀಗೆ ಕ್ಯಾಲಿಗ್ರಫಿಯು ಚಿತ್ರಕಲೆಯ ಸೊಬಗನ್ನು ಹೆಚ್ಚಿಸುತ್ತಿತ್ತು. ಚಿತ್ರಕಲೆಗೆ ಅನುಗುಣವಾಗಿ ಕ್ಯಾಲಿಗ್ರಫಿ ಸ್ಪಂದಿಸುತ್ತಿತ್ತು. ಹಿಂದಿನ ಕಾಲದ ಚೀನೀಯರಿಗೆ ಅಕ್ಷರಗಳ ಬಗ್ಗೆ ವಿಪರೀತವೆನಿಸುವ ಮೋಹವಿತ್ತು.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ