ಬನ್ನಿ.. ಸ್ವಯಂಪ್ರಭೆಯರನ್ನು ಸಂಭ್ರಮಾಚರಿಸೋಣ: ಎಲ್.ಜಿ.ಮೀರಾ ಅಂಕಣ
ಸಾಂಪ್ರದಾಯಿಕ ಸಮಾಜದ ಊಹೆಗೆ ನಿಲುಕದ ಇನ್ನೊಂದು ಜಿಗಿತವನ್ನು ನಮ್ಮ ಹೆಣ್ಣುಮಕ್ಕಳು ಈಗ ಮಾಡುತ್ತಿದ್ದಾರೆ. ಅದೇನೆಂದರೆ ಲಿಂಗ ಎಂಬುದು ಕೇವಲ ಗಂಡು-ಹೆಣ್ಣು ಎಂದು ಎರಡು ತುದಿಗಳಲ್ಲ, ಗಂಡಿನೊಳಗೆ ಹೆಣ್ಣು ಮತ್ತು ಹೆಣ್ಣಿನೊಳಗೆ ಗಂಡು ಬೇರೆ ಬೇರೆ ಪ್ರಮಾಣಗಳಲ್ಲಿ ಇರಬಹುದು, ಹೀಗಾಗಿ ಲಿಂಗ ಎಂಬುದು ಶ್ರೇಣಿ ಎಂಬ ಹೊಸ ತಿಳುವಳಿಕೆಯನ್ನು ತಮ್ಮ ನಡೆನುಡಿ, ಇರಿಸರಿಕೆ, ಹೋರಾಟಗಳಿಂದ ತಲುಪಿಸಲು ಪ್ರಯತ್ನಿಸುತ್ತಿದ್ದಾರೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಹತ್ತನೆಯ ಬರಹ