Advertisement

Tag: Yakshagana

ಇದು ಪ್ರೇಕ್ಷಕಾನುಸಂಧಾನ

ಒಂದು ಪ್ರಸಂಗದಲ್ಲಿ ಭೀಷ್ಮ, ಸತ್ಯವತಿಯನ್ನು ತುಂಬಾ ವರ್ಣನೆ ಮಾಡಿದ್ದನ್ನುಸರೋಜಕ್ಕ ನೋಡಿದರು. ತಂದೆ ಇಷ್ಟ ಪಟ್ಟ ಹೆಣ್ಣನ್ನು ತಾಯಿ ಅಂತನೇ ನೋಡಬೇಕಿತ್ತು. ಹಾಗೆಲ್ಲಾ ತುಂಬಾ ವರ್ಣನೆ ಮಾಡಿದ್ದು ಆಭಾಸವಾಯಿತು ಅಂದರು. ಕರ್ಣಪರ್ವದಲ್ಲಿ ಕರ್ಣ ಪಾಪ, ಪಾಂಡವರಾಗಿ ಹುಟ್ಟಿದರೂ ಏನು ಇಲ್ಲ. ತಾಯಿ ಇದಾರೆ, ತಮ್ಮಂದಿರಿದಾರೆ. ಆದರೂ ಯಾರೂ ಇಲ್ಲ. ಇಡೀ ಮಹಾಭಾರತದಲ್ಲಿ ಕರ್ಣ ಅಂದ್ರೆ ಬಹಳ ಪ್ರೀತಿ. ಕುಂತಿ ನೋಡಿದ್ರೆ ಸಿಟ್ಟು ಬರತ್ತೆ ಒಂದೊಂದ್ಸಲ. ಆದರೆ ಕೀಲಿ ಕೈ ಇರೋದು ಕೃಷ್ಣನ ಹತ್ರನೇ. ಕಪಟ ನಾಟಕ ಅಂತನೇ ಇದೆಯಲ್ಲ.
ಕೃತಿ. ಆರ್. ಪುರಪ್ಪೇಮನೆ ಅವರು ಯಕ್ಷಾರ್ಥ ಚಿಂತಾಮಣಿ ಸರಣಿಯ‌ ಬರಹ

Read More

ಚರ್ಚೆಗಳಲ್ಲಿ ರಸಸಿದ್ಧಾಂತ ಪಠ್ಯಗಳ ಪ್ರಮಾಣ

ಯಾವುದಕ್ಕೆ ಉತ್ತರ ಸಿಗುತ್ತಿಲ್ಲವೊ ಅದನ್ನು ಶಾಸ್ತ್ರ ಹೇಳುತ್ತದೆ ಅಂದ ಮೇಲೆ ಉತ್ತರ ಸಿಗದೇ ನಮಗೆ ಸಮಾಧಾನವಾಗುವ ಹಾಗೆ ಅಥವಾ ಮುಂದಿನ ಚರ್ಚೆ ತಾತ್ಕಾಲಿಕಯಾಗಿಯಾದರೂ ಕೊನೆಗೊಳ್ಳುವಂತೆ ರಸ ಸಿದ್ಧಾಂತವು ‘ಶಾಸ್ತ್ರ’ವಾಗುತ್ತದೆ. ಸಮಾಜದ ಎಲ್ಲ ಘಟಕಗಳಲ್ಲೂ ಮನುಷ್ಯ ವ್ಯವಹರಿಸುವಾಗ ಈ ‘ಶಾಸ್ತ್ರ’ಕ್ಕೆ  ಸಂವಾದಿಯಾಗುವ ಹಲವು ಪರಿಕರಗಳನ್ನು ಬಳಸಿ ಆ ಸಂದರ್ಭಕ್ಕೆ ಅಂತ್ಯ ಹಾಡುವುದು ಸಾಮಾನ್ಯವೇ.  ಇದೇ ಹಿನ್ನೆಲೆಯಲ್ಲಿ…

Read More

ಮಹನೀಯ ಮದ್ಲೆಗಾರರ ಪ್ರಭಾವಲಯ

ಯಕ್ಷಗಾನ ಭಾಗವತಿಕೆಯಲ್ಲಿ ಮದ್ದಳೆಯದ್ದು ಪ್ರಧಾನ ಪಾತ್ರ. ಬಲಿಪ ನಾರಾಯಣ ಭಾಗವತರಿಗೆ ಭಾಗವತಿಕೆ ಕಲಿಯುವುದಕ್ಕೆ ನೆರವಾದ ಮದ್ದಳೆಗಾರರು ಪ್ರಮುಖರೇ.  ಮದ್ದಳೆಗಾರರಾದ  ದಿವಂಗತ ಕುದುರೆಕೋಡ್ಲು ರಾಮ ಭಟ್ಟರು ಮತ್ತು ದಿವಂಗತ ಕೆಮ್ಮಣ್ಣು ನಾರ್ಣಪ್ಪಯ್ಯ ಅವರ ಪ್ರೋತ್ಸಾಹ, ತಿದ್ದುವಿಕೆಯು ಬಲಿಪರ ಭಾಗವತಿಕೆ ಶೈಲಿಯ ಮೇಲೆ ಬಹಳಷ್ಟು ಪ್ರಭಾವ ಬೀರಿದೆ. ಪ್ರಸ್ತುತ ಸರಣಿಯಲ್ಲಿ ಆ ಬಗ್ಗೆ ಬಲಿಪರು ಹೇಳಿಕೊಂಡಿದ್ದಾರೆ. ‘ಬಲಿಪ ಮಾರ್ಗ’ದಲ್ಲಿ ಕೃಷ್ಣ ಪ್ರಕಾಶ್ ಉಳಿತ್ತಾಯ ಬರಹ  ಇಲ್ಲಿದೆ. 

Read More

‘ಸಮಷ್ಟಿ ನೀತಿ’ ಒಪ್ಪುವ ಔಚಿತ್ಯದ ಚರ್ಚೆ

ಯಕ್ಷಗಾನಕ್ಕೆ ಲಕ್ಷಣಗ್ರಂಥವಿಲ್ಲ, ಪ್ರಪಂಚದ ಹಲವು ಪ್ರದರ್ಶನ ಕಲೆಗಳಿಗೂ ಶಾಸ್ತ್ರ ಹೇಳುವ ‘ಪಠ್ಯ’ಗಳಿಲ್ಲ. ನಾಟ್ಯಶಾಸ್ತ್ರ, 11 ನೇ ಶತಮಾನದಲ್ಲಿ ಕ್ಷೇಮೆಂದ್ರ ಬರೆದ ‘ಔಚಿತ್ಯ ವಿಚಾರ ಚರ್ಚಾ’ ಇತ್ಯಾದಿ ಗ್ರಂಥಗಳಿದ್ದರೂ ಆ ಕಾಲದಲ್ಲೇ ಕಲಾಪ್ರಕಾರಗಳು ಅವುಗಳನ್ನು ಎಷ್ಟು ಅನುಸರಿಸುತ್ತಿದ್ದವೊ ಗೊತ್ತಿಲ್ಲ. ಆದರೆ ಪಠ್ಯಗಳು ಒಂದಕ್ಕೊಂದು ಪ್ರತಿಕ್ರಿಯಿಸುತ್ತಾ, ಒಂದನ್ನೊಂದು ವ್ಯಾಖ್ಯಾನಿಸುತ್ತಾ ತಮ್ಮದನ್ನು ಸೇರಿಸುವ ‘ಅಂತರ್ ಪಠ್ಯೀಯತೆ’ಯು ಪಠ್ಯ ಮತ್ತು ಪ್ರಯೋಗಕ್ಕೂ ಅನ್ವಯಿಸುತ್ತದೆ.  ಕೃತಿ ಆರ್. ಪುರಪ್ಪೇಮನೆ ಬರೆಯುವ ‘ಯಕ್ಷಾರ್ಥ  ಚಿಂತಾಮಣಿ’ ಸರಣಿಯಲ್ಲಿ ಯಕ್ಷಗಾನ ಔಚಿತ್ಯದ ಕುರಿತ ಲೇಖನ. 

Read More

ಯಕ್ಷಗಾನ ಪಠ್ಯ: ಕಲೆಗೆ ತೊಡಕುಂಟು ಮಾಡುವ ಪ್ರಮಾದಗಳು

ಕರ್ನಾಟಕದ ಕರಾವಳಿಯುದ್ಧಕ್ಕೂ ಸೊಂಪಾಗಿ ವಿಕಾಸಗೊಂಡಿರುವ ಯಕ್ಷಗಾನ ಕಲೆಯು ಅಪಾರ ವೈವಿಧ್ಯವನ್ನು ಹೊಂದಿದೆ. ಈ ವೈವಿಧ್ಯತೆಯ ಕಾರಣದಿಂದಲೇ, ಅದರ ವ್ಯಾಖ್ಯಾನವನ್ನು ಸರಳವಾಗಿ ಮಾಡುವುದು ಕಷ್ಟವಾಗಿಬಿಟ್ಟಿದೆ. ಆಯಾ ಪ್ರದೇಶಗಳ ಪ್ರಭಾವದೊಂದಿಗೆ ವಿಕಾಸ ಹೊಂದಿರುವ ಈ ಕಲೆಯನ್ನು ಏಕರೂಪವಾಗಿ ನೋಡುವುದು ಸಾಧ್ಯವಾಗುತ್ತಿಲ್ಲ. ಇದೀಗ ಯಕ್ಷಗಾನ ಕಲೆಗೊಂದು ಪಠ್ಯಪುಸ್ತಕ ರಚನೆಯಾಗಿದೆ. ಹಾಗಿದ್ದರೆ ಪಠ್ಯಪುಸ್ತಕವು  ಈ ಬೃಹತ್ ಕಲಾಪ್ರಕಾರವನ್ನು ಸಾಂದ್ರವಾಗಿ ಗ್ರಹಿಸಿದೆಯೇ ಎನ್ನುವ ಪ್ರಶ್ನೆ ಎದುರಾಗಿದೆ. 

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ