ಹಿಡಿಯಷ್ಟು ಪ್ರೀತಿ ಕಡಲಿನಷ್ಟಾಯ್ತು: ಮಹಾಲಕ್ಷ್ಮೀ. ಕೆ. ಎನ್. ಬರಹ
ಮೋಡ ಕಪ್ಪಾದಾಗ ಮಳೆ ಬಂದೇಬರುತ್ತೆ ಅನ್ನೋ ಮುನ್ಸೂಚನೆ ಇರುತ್ತೆ, ಕಾಲೇಜಿನಲ್ಲಿ ಸ್ವಲ್ಪ ಮೈ ಬೆಚ್ಚಗಾದಾಗ ಮನೆಗೆ ಹೋಗುವಷ್ಟರಲ್ಲಿ ಇವತ್ತು ಜ್ವರ ಬಂದೇ ಬರುತ್ತೆ ಅಂತ ಗೊತ್ತಾಗುತ್ತೆ, ಇವತ್ತು ರೆಕಾರ್ಡ್ ಬುಕ್ ಮರೆತುಬಂದಿದ್ದೀನಿ ಲೆಕ್ಚರರ್ ಹತ್ತಿರ ಬೈಗುಳಗಳು ಕಾದಿದೆ ಅಂತ ಗೊತ್ತಾಗುತ್ತೆ, ಆದರೆ ಪ್ರೀತಿ ಹುಟ್ಟುವ ಘಳಿಗೆ ಯಾರಿಗೆ ತಾನೇ ತಿಳಿದೀತು? ಕೆಲವೊಮ್ಮೆ ಮೆಚ್ಚುಗೆಯಲ್ಲಿ ಮುಗುಳ್ನಕ್ಕು ಪ್ರಾರಂಭವೇ ಇಲ್ಲದೆಯೇ ಅಲ್ಲಿಗೇ ಮುಕ್ತಾಯವಾಗಬಹುದು.
ಪ್ರೇಮಿಗಳ ದಿನಕ್ಕೆ ಮಹಾಲಕ್ಷ್ಮೀ ಕೆ. ಎನ್. ಬರಹ ನಿಮ್ಮ ಓದಿಗೆ
ಫಾಲ್ಗುಣ ಮತ್ತು ಪ್ರೇಮ: ಕೆ. ಎನ್. ಲಾವಣ್ಯ ಪ್ರಭಾ ಬರಹ
ಹೆಜ್ಜೆ ಮೇಲೊಂದು ಹೆಜ್ಜೆ ಇರಿಸುತ್ತಲೇ ಮೂರು ದಾರಿಗಳು ಕೂಡುವ ಬೀದಿಯ ತಿರುವಲ್ಲಿ ಬಂದು ನಿಂತು ಮಂದಹಾಸದಲ್ಲಿ ಉಸಿರನ್ನೊಮ್ಮೆ ದೀರ್ಘವಾಗಿ ಒಳಗೆಳೆದುಕೊಂಡು ಹೊರಗೆ ಚೆಲ್ಲುತ್ತಾ ಹಗೂರಾಗಿ… ಸಾಗಿ ಬಂದ ದಾರಿಯಲ್ಲೊಮ್ಮೆ ಇಣುಕುತ್ತಾಳೆ. ಬೆನ್ನಹಿಂದಿನ ಪ್ರತಿ ಹೆಜ್ಜೆಯನ್ನೂ ಗಮನಿಸುತ್ತಲೇ ಮುಂದಿನ ಹೆಜ್ಜೆ ಇಡುವ ಅವಳ ನಡೆ ಬಹುಶಃ ಅವಳಿಗೆ ಮಾತ್ರ ಒಲಿದ ಕಲೆಯೇನೋ.. ಅವಳ ಎಡ ತೋಳಿನೆಡೆ ಒಂದು ದಾರಿ, ಬಲ ತೋಳಿನೆಡೆ ಮತ್ತೊಂದು ದಾರಿ ಮತ್ತು ಅವಳು ಸಾಗಿ ಬಂದ ದಾರಿ ಅವಳೆದುರಿನಲ್ಲೇ.
ಕೆ. ಎನ್. ಲಾವಣ್ಯ ಪ್ರಭಾ ಬರಹ ನಿಮ್ಮ ಓದಿಗೆ
ರಾಜೇಂದ್ರನ ಫಜೀತಿ ಪ್ರಸಂಗ!: ಶರಣಗೌಡ ಬಿ ಪಾಟೀಲ ತಿಳಗೂಳ ಬರೆದ ಪ್ರಬಂಧ
“ನೀವು ಸಂಡೇ ಬರ್ತೀವಿ ಅಂತ ಹೇಳಿದ್ದೀರಿ. ಯಾವ ಸಮಯ ಬರ್ತೀರಿ? ಅಂತ ಗೊತ್ತಾಗಲಿಲ್ಲ. ಸಮಯ ಗೊತ್ತಾದರೆ ನಾನು ಅವರಿಗೆ ಫೋನ್ ಮಾಡಿ ತಿಳಸ್ತೀನಿ. ಅವರೂ ತಯಾರಿ ಮಾಡ್ಕೋಬೇಕಲ್ಲ? ಹಂಗೇ ದಿಢೀರ ಅಂತ ಅವರ ಮನೆಗೆ ಹೋದರೆ ಸರಿ ಇರೋದಿಲ್ಲ? ಒಬ್ಬರೇ ಬರ್ತೀರಾ ಇಲ್ಲ ಮನೆಯವರಿಗೂ ಕರೆದುಕೊಂಡ ಬರ್ತೀರಾ?
ಶರಣಗೌಡ ಬಿ ಪಾಟೀಲ ತಿಳಗೂಳ ಬರೆದ ಪ್ರಬಂಧ ನಿಮ್ಮ ಓದಿಗೆ
ಏನು ಬರೆಯುವುದು?: ಎಂ.ವಿ. ಶಶಿಭೂಷಣ ರಾಜು ಬರಹ
ತಮ್ಮ ಖಯಾಲಿಗೋ, ಸಾಮಾಜಿಕ ಜವಾಬ್ದಾರಿಯಿಂದಲೋ, ಸಮಾಜಕ್ಕೆ ತನ್ನದೊಂದು ಅಳಿಲ ಸೇವೆ ಎಂದೋ ಪ್ರಖ್ಯಾತಗೊಳ್ಳಲೋ ಬರೆಯುವರಿಗೆ ಸ್ವಲ್ಪ ಭಯ ಇದ್ದೇ ಇರುತ್ತದೆ. ಏಕೆಂದರೆ ಸಹಾಯ ಮಾಡಿಸಿಕೊಂಡವರೇ ಎದುರು ತಿರುಗುವುದು, ಹಿಂದೆ ಕೆಟ್ಟದಾಗಿ ಆಡಿಕೊಳ್ಳುವುದು, ಕಷ್ಟಕೊಡುವುದು ಹೀಗೆ ಅನೇಕ ರೀತಿಯಲ್ಲಿ ನೋವು ಕೊಡುವುದರಿಂದ, ನನಗ್ಯಾಕೆ ಇಲ್ಲದ ಉಸಾಬರಿ ಎಂದುಕೊಳ್ಳುವವರು ಸಂಖ್ಯೆ ಹೆಚ್ಚಾಗುತ್ತಿದೆ.
ಎಂ.ವಿ. ಶಶಿಭೂಷಣ ರಾಜು ಬರಹ ನಿಮ್ಮ ಓದಿಗೆ
ಮೈಸೂರಿನ ಸಂಕ್ರಾಂತಿಯ ವೈಶಿಷ್ಟ್ಯ: ಡಾ. ಪುನೀತ್ ಕುಮಾರ್ ಪದ್ಮನಾಭನ್ ಬರಹ
ಪ್ರಕೃತಿಮಾತೆಯು ಹೇಗೆ ಸೂರ್ಯನ ಮುಖಾಂತರ ನಮಗೆ ಬೇಕಾದ್ದನ್ನು ಕೊಡುತ್ತಾಳೆಯೋ, ಬದಲಿಗೆ ಯಾವುದನ್ನೂ ನಮ್ಮಿಂದ ಅಪೇಕ್ಷಿಸುವುದಿಲ್ಲವೋ, ಅಂತಹಾ ಒಂದು ಶಕ್ತಿಗೆ, ಪ್ರಕೃತಿಗೆ ನಮ್ಮ ಸಂಕ್ರಾಂತಿಯ ಪೂಜೆ. ಸಂಕ್ರಾಂತಿಯ ದಿನದಂದು ಪೂಜೆಯನ್ನು ಕೃತಜ್ಞತಾ ಭಾವದಿಂದ ಪ್ರಕೃತಿಮಾತೆಗೆ ಮಾಡುವುದೆ ಸಂಕ್ರಾಂತಿಹಬ್ಬದ ವಿಶೇಷತೆ.
ಸಂಕ್ರಾಂತಿ ಹಬ್ಬದ ನಿಮಿತ್ತ ಮೈಸೂರಿನ ಸಂಕ್ರಾಂತಿಯ ಹಿನ್ನೆಲೆ ಹಾಗೂ ಅದರ ವೈಶಿಷ್ಟ್ಯತೆಗಳ ಕುರಿತು ಡಾ. ಪುನೀತ್ ಕುಮಾರ್ ಪದ್ಮನಾಭನ್ ಬರಹ
ಕ್ಯಾಂಟೀನ್ ಗೆಳೆಯರ ಆಲೋಚನೆಗಳು: ಶರಣಗೌಡ ಬಿ. ಪಾಟೀಲ ತಿಳಗೂಳ ಪ್ರಬಂಧ
ಆ ಯುವತಿಯನ್ನ ನೋಡಿದರೆ ಯಾವುದೋ ಕಛೇರಿಯಲ್ಲಿ ಕೆಲಸ ಮಾಡುವವಳಂತೆ ಕಾಣಿಸ್ತಿದ್ದಾಳೆ. ಅವಳ ವೇಷ ಭೂಷಣ ಹಾಗೇ ಇದೆ. ಯಾರೋ ಕಛೇರಿಯವರಿಗೇ ಕಾಯ್ತಿರಬೇಕು” ಅಂತ ಅಭಿಪ್ರಾಯ ಹೊರ ಹಾಕಿದ. ನಿನ್ನ ಮಾತು ನಾನು ಒಪ್ಪೋದಿಲ್ಲ. ಕಛೇರಿ ಸಮಯ ಈಗಾಗಲೇ ಮುಗಿದು ಹೋಗಿದೆ. ಕಛೇರಿ ಕೆಲಸ ಏನಾದ್ರು ಇದ್ದಿದ್ದರೆ ಕಛೇರಿಯಲ್ಲೇ ಮುಗಿಸಿ ಬರ್ತಾರೆ. ಯಾರೂ ರಸ್ತೆಯಲ್ಲಿ ಕಾಯೋದಿಲ್ಲ ಅಂತ ತನ್ನ ಮಾತಿಗೆ ಅಂಟಿಕೊಂಡ.
ಶರಣಗೌಡ ಬಿ. ಪಾಟೀಲ ತಿಳಗೂಳ ಬರೆದ ಪ್ರಬಂಧ ನಿಮ್ಮ ಓದಿಗೆ
ಕಳೆದ ವರ್ಷದ ಹಲವು ಬಣ್ಣಗಳು..: ವಿಶ್ವನಾಥ ಎನ್ ನೇರಳಕಟ್ಟೆ ಬರಹ
ಐಸ್‌ಕ್ಯಾಂಡಿ ತೆಗೆದುಕೊಳ್ಳಬೇಕೆಂಬ ಯೋಚನೆ ಮೊದಲು ಬಂದದ್ದು ಅಣ್ಣನಿಗೆ. ಹೋಗಿ ನಿಂತ ನಾವು ಮೂರು ಐಸ್‌ಕ್ಯಾಂಡಿ ಕೊಡಲು ಹೇಳಿದೆವು. ನನಗೆ ಆಮೇಲೆಯೇ ಹೊಳೆದದ್ದು, ಮನೆಯಲ್ಲಿ ಅಮ್ಮ ಇದ್ದಾಳೆ. ಅಮ್ಮನಿಗೆಂದು ಇನ್ನೊಂದು ಐಸ್‌ಕ್ಯಾಂಡಿ ಕೊಡಲು ಹೇಳಿದೆ. ನಾನು ಎರಡು ಕೈಗಳಲ್ಲಿಯೂ ಐಸ್‌ಕ್ಯಾಂಡಿ ಹಿಡಿದು ಹೊರಟೆ. “ಮನೆ ಮುಟ್ಟುವಷ್ಟರಲ್ಲಿ ಅದು ಕರಗಿಹೋಗಿರುತ್ತದೆ. ಬೇಡ” ಎಂದು ಹೇಳಿದ ಅಪ್ಪನ ಮಾತು ನನ್ನ ಕಿವಿಯನ್ನೇ ಹೊಕ್ಕಿರಲಿಲ್ಲ.
೨೦೨೩ನೇ ವರ್ಷ ಬದುಕಿಗೆ ಹಚ್ಚಿದ ಹಲವು ಬಣ್ಣಗಳ ಕುರಿತು ವಿಶ್ವನಾಥ ಎನ್. ನೇರಳಕಟ್ಟೆ ಬರಹ
ನಮ್ಮನ್ನು ನಾವು ತಿದ್ದಿಕೊಳ್ಳುವುದೇ ಹೊಸತನ: ಕೀರ್ತನ ಎಂ. ಬರಹ
ಈಗಿನ ಓಡುವ ಕಾಲದಲ್ಲಿ ಸಂಕಲ್ಪ ಮಾಡಿದರೆ ಸಾಲದು ದೃಢ ಸಂಕಲ್ಪ ಮುಖ್ಯ. ಅದನ್ನು ಪಾಲಿಸುವ ಅನುಸರಿಸುವ ಏಕ ಮನಸ್ಥಿತಿ ಮುಖ್ಯ. ಅಂದುಕೊಂಡಿದ್ದನ್ನು ಮಾಡಿ ಸಾಧಿಸುತ್ತೇನೆ ಎನ್ನುವ ಗಟ್ಟಿ ಮನಸ್ಸು, ಹಟ, ಛಲ ಮುಖ್ಯ. ಅದೆಲ್ಲವೂ ನಮ್ಮನ್ನು ಒಳ್ಳೆಯ ಮಾರ್ಗದಲ್ಲಿ ಕರೆದುಕೊಂಡು ಹೋಗುವುದರಲ್ಲಿ ನಿರತವಾಗಿರಬೇಕು.
ಹೊಸ ವರ್ಷವನ್ನು ಆರಂಭಿಸುವುದರ ಕುರಿತು ಕೀರ್ತನ ಎಂ. ಬರಹ ನಿಮ್ಮ ಓದಿಗೆ
ಹೊಸ ವರುಷಕೆ… ಹೊಸ ಹರುಷಕೆ..: ಪ್ರಕಾಶ್ ಪೊನ್ನಾಚಿ ಬರಹ
ಬದುಕು ನಿಂತ ನೀರಲ್ಲ, ಬದಲಾವಣೆ ಜಗದ ನಿಯಮ ಎಂದುಕೊಂಡೇ ಮನುಷ್ಯ ಬದಲಾವಣೆಗೊಳಪಟ್ಟುಕೊಂಡು ಹೊಸ ರೂಪಾಂತರಗಳನ್ನು ಆವಿಸ್ಕರಿಸಿ ಹೊಸ ಜಗದ ಸೃಷ್ಟಿಗೆ ನಾಂದಿ ಹಾಡುತ್ತಾ ಬಂದ. ಪ್ರತಿ ವರ್ಷವೂ ಹೊಸದೊಂದು ಜನ್ಮವೆಂದುಕೊಂಡೆ ಹೊಸ ಸೃಷ್ಟಿಗಳಿಗೆ ಬುನಾದಿ ಹಾಕಲಾರಂಭಿಸಿದ. ಎಲ್ಲಾ ಎಲ್ಲೆಗಳನ್ನು ಮೀರಿ ಲೋಕದೊಳಿತಿಗೆ ಸ್ಪೃಷ್ಯ ಯಾವುದೋ ಅವುಗಳ ಸೃಷ್ಟಿಯಲ್ಲಿ ತಲ್ಲೀನನಾದ.
ಹಳ್ಳಿಗಳಲ್ಲಿನ ಹೊಸ ವರ್ಷದಾಚರಣೆಯ ಕುರಿತು ಪ್ರಕಾಶ್ ಪೊನ್ನಾಚಿ ಬರಹ ನಿಮ್ಮ ಓದಿಗೆ