Advertisement

Month: January 2025

ಹಿರಿಯ ಕಾದಂಬರಿಕಾರ ಕೆ.ಟಿ. ಗಟ್ಟಿ ನಿಧನ…

ಪ್ರವಾಸ ನಮಗಿಷ್ಟವಾಗುವುದು ಯಾವಾಗಲೂ ಮನೆಯಲ್ಲಿದ್ದು ಒಮ್ಮೊಮ್ಮೆ ಪ್ರವಾಸ ಹೋದಾಗ. ನಿರಂತರ ಪ್ರವಾಸದಲ್ಲಿರುವುದು ಎಷ್ಟು ರಸಹೀನ ಎಂದು ಗಗನಸಖಿಯರು ಮತ್ತು ಮೆಡಿಕಲ್ ರೆಪ್ರಸೆಂಟೇಟಿವ್‌ಗಳು ಹೇಳಿಯಾರು. ಬೇರೆ ದೇಶ, ಬೇರೆ ನಗರ, ಬೇರೆ ಮನೆ ಎಲ್ಲಾ ಅಷ್ಟೆ. ಸಾಮಾನ್ಯವಾಗಿ ‘ಅತ್ಯಂತ ಪ್ರೇಕ್ಷಣೀಯ ಸ್ಥಳ’ ಸುಪ್ರಸಿದ್ಧವಾಗಿರುತ್ತದೆ. ಅದು ಹಲವು ಬಾರಿ ಟೀವಿಯಲ್ಲಿ ಮತ್ತು ಸಿನಿಮಾದಲ್ಲಿ ಕಂಡ, ಪತ್ರಿಕೆ ಪುಸ್ತಕಗಳಲ್ಲಿ ಓದಿದ ಸ್ಥಳವೇ ಆಗಿರುತ್ತದೆ.
ಹಿರಿಯ ಸಾಹಿತಿ ಕೆ.ಟಿ. ಗಟ್ಟಿ ಇಂದು ಮಂಗಳೂರಿನಲ್ಲಿ ನಿಧನರಾಗಿದ್ದು ಅವರು ಕೆಂಡಸಂಪಿಗೆಗೆ ಬರೆದ “ಬಿಸಿಲುಕೋಲು” ಸರಣಿಯ ಕೆಲ ಬರಹಗಳು ನಿಮ್ಮ ಓದಿಗೆ

Read More

ಮಹಮ್ಮದ್‌ ರಫೀಕ್‌ ಕೊಟ್ಟೂರು ಬರೆದ ಈ ಭಾನುವಾರದ ಕತೆ

ಮುಂದಿನ ಬೆಟ್ಟವನ್ನು ತೋರಿಸಿ ಗುಡದಪ್ಪ ಇದನ್ನು ದಾಟಬೇಕು ಎಂದ. ನಾನು ಹೌಹಾರಿದೆ. ಮತ್ತೆ ಮುಂದಿನ ಬೆಟ್ಟ ಏರತೊಡಗಿದೆವು. ಮೊದಲಿಗಿಂತಲೂ ಸ್ವಲ್ಪ ಕಡಿದಾಗೇ ಇತ್ತು. ದಾರಿಯಿಲ್ಲದ ಕಲ್ಲುಗಳ ನಡುವೆ ದಾರಿ ಹುಡುಕುತ್ತಾ ನಡೆಯುವುದು ಕಷ್ಟವಾಯಿತು.
ಮಹಮ್ಮದ್‌ ರಫೀಕ್‌ ಕೊಟ್ಟೂರು ಬರೆದ ಈ ಭಾನುವಾರದ ಕತೆ “ಡಾಲ್ಮೆನ್‌ಗಳು” ನಿಮ್ಮ ಓದಿಗೆ

Read More

ಸೂರ್ಯಕೀರ್ತಿ ಬರೆದ ಐದು ಕವಿತೆಗಳು

“ಪ್ರೇಮ ಪರೀಕ್ಷೆಯಲ್ಲಿ
ಈ ಜಗತ್ತು ರೋಗಿಯಾಗಿದೆ.
ಸದಾ ಬಳಲುವ, ತೃಷೆಯ
ತೂತು ಮಡಿಕೆಯ ಹೋಲುತ್ತದೆ.
ಯುದ್ಧ, ಅಹಂಕಾರ, ಮದ
ಕಾಮ, ಮೋಹದ ಬಲೆಯಲ್ಲಿ
ಈ ಜಗತ್ತು ರೋಗದ ಮನೆಯಾಗಿದೆ.”- ಸೂರ್ಯಕೀರ್ತಿ ಬರೆದ ಐದು ಕವಿತೆಗಳು

Read More

ಒಂದು ಆಕಾಶ, ಹಲವು ಏಣಿಗಳು: ಯೋಗೀಂದ್ರ ಮರವಂತೆ ಬರಹ

ವಿಮಾನಗಳ ಚರಿತ್ರೆಯನ್ನು ಬರೆದವರು ಬೇರೆಬೇರೆ ಕಾಲಘಟ್ಟದಿಂದ ಸ್ಥಳದಿಂದ ಘಟನೆಗಳಿಂದ ತಮ್ಮ ಅಧ್ಯಯನ, ಪುರಾವೆ ಹಾಗು ಅಂದಾಜುಗಳನ್ನು ವಿಶದೀಕರಿಸುವುದಿದೆ. ಆಕಾಶಕ್ಕೆ ನೆಗೆಯಬೇಕು ಎನ್ನುವ ಉತ್ಕಟ ಆಸೆ ಮನುಷ್ಯರಿಗೆ ಎಂದು ಬಂತೋ ಕರಾರುವಕ್ಕಾಗಿ ಹೇಳಿದವರಿಲ್ಲವಾದರೂ ಬಾನಿನಲ್ಲಿ ಸ್ವಚ್ಛಂದವಾಗಿ ಹಾರಿ ಇಳಿಯುವ ಹಕ್ಕಿಗಳನ್ನು ನೋಡಿ ನಮಗೂ ಹಾರುವ ಕನಸು ಹುಟ್ಟಿತು. ಮತ್ತೆ ಆ ನಿಟ್ಟಿನಲ್ಲಿ ಪ್ರಯತ್ನಗಳು ನಿರಂತರವಾಗಿ ಸಾಗಿದವು ಎನ್ನುವ ಉಲ್ಲೇಖಗಳು ಓದಿನಲ್ಲಿ ಸಿಗುತ್ತವೆ.
ಯೋಗೀಂದ್ರ ಮರವಂತೆ ಬರೆದ ವಿಮಾನ ಲೋಕದ ಅಚ್ಚರಿ, ಅನುಭವಗಳ ಕುರಿತ ಹೊಸ ಕೃತಿ “ಏರೋ ಪುರಾಣ”ದ ಒಂದು ಬರಹ ನಿಮ್ಮ ಓದಿಗೆ

Read More

ವಿದೇಶಗಳಲ್ಲಿ ಸ್ವದೇಶಿ ಭಾವಸಂಚಾರ: ಗುರುಪ್ರಸಾದ ಕುರ್ತಕೋಟಿ ಸರಣಿ

ಒಮಾಹಾದ ಭಾರತೀಯರ ವಿಶೇಷತೆ ಕೂಡ ಅದೇ ಆಗಿದೆ. ಅಲ್ಲಿ ಎಷ್ಟೋ ಸಮಾರಂಭಗಳನ್ನು ಒಟ್ಟಾಗಿ ಮಾಡುತ್ತಾರೆ. ಒಂದೊಂದು ಹಬ್ಬದಲ್ಲಿ ಒಬ್ಬ ಭಾಷಿಕರ ಸಂಘ ನಿರ್ವಹಣೆಯ ಜವಾಬ್ದಾರಿ ಹೊತ್ತಿರುತ್ತದೆ. ಶಿವರಾತ್ರಿ ಬಂತೆಂದರೆ ಅಲ್ಲಿನ ಪ್ರತಿಯೊಂದು ಕೆಲಸಗಳನ್ನು ಕನ್ನಡ ಸಂಘದವರು ನಿಭಾಯಿಸುತ್ತಾರೆ. ಅವತ್ತಿನ ದಿವಸ ಎಷ್ಟೋ ಸಾವಿರ ಭಾರತೀಯರಿಗೆ ಇಡ್ಲಿ ಚಟ್ನಿ, ಸಾಂಬಾರ್, ಬೂಂದಿ ಉಂಡೆ ಹಾಗೆ ತರತರಹದ ಅಡಿಗೆ ಮಾಡಿ ಬಡಿಸುವ ಜವಾಬ್ದಾರಿ ಕನ್ನಡಿಗರದು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ