Advertisement

Month: January 2025

ಸಾಕ್ಷರತೆಯ ರೂಪವಾಗಿ ಅಕ್ಷರ: ಚಂದ್ರಮತಿ ಸೋಂದಾ ಸರಣಿ

ಶಾಲೆಯ ಪಠ್ಯದ ಭಾಗವಾಗಿ ಪತ್ರಲೇಖನ ಇರುತ್ತಿತ್ತು. ಮಕ್ಕಳ ಪತ್ರಕ್ಕಾಗಿ ಹೆತ್ತವರು, ಹೆತ್ತವರ ಪತ್ರಕ್ಕಾಗಿ ಮಕ್ಕಳು ಕಾಯುತ್ತಿದ್ದರು. ಹಬ್ಬ ಅಥವಾ ವಿಶೇಷ ಸಂದರ್ಭಗಳ್ಲಿ ಶುಭಾಶಯ ಅಥವಾ ಹಾರೈಕೆಯ ಪತ್ರಗಳಿಗೆ ಹೆಚ್ಚಿನ ಮಾನ್ಯತೆ ಇತ್ತು. ಕಳಿಸುವವರು ಮತ್ತು ಪಡೆಯುವವರ ನಡುವೆ ಇದೊಂದು ಸ್ನೇಹಸೇತುವಾಗಿತ್ತು. ಈಗಿನಂತೆ ದೂರವಾಣಿಯ ಸಂಪರ್ಕ ಇಲ್ಲದಿದ್ದುದರಿಂದ ಪತ್ರವೇ ಸರ್ವಸ್ವವಾಗಿತ್ತು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿ

Read More

ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ

“ಮನುಷ್ಯತ್ವದ ಚರ್ಮವ ಸುಲಿದು
ಹೃದಯ ಕಂಪಿಸುವಾಗಲೂ
ಜಾತಿಯ ಅಮಲಿನಲ್ಲಿ
ಧರ್ಮದ ಅಫೀಮಿನಲ್ಲಿ
ನನ್ನನ್ನೇ ನಾನು ಅರಸುತಿದ್ದೆ
ನೆನಪುಗಳ ಒಲೆಯಲ್ಲಿ
ಶಿರವನಿಟ್ಟು
ಉರಿಸುತಿದ್ದೆ
ಉರುವಲಿನಂತೆ”- ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ

Read More

ಬಾಯಲ್ಲಿರುವ ಬಿಸಿ ತುಪ್ಪವೇ!: ಗುರುಪ್ರಸಾದ ಕುರ್ತಕೋಟಿ ಸರಣಿ

ಎಲ್ಲ ಅಡ್ಡಾಡಿ ಆದ ನಂತರ ಒಂದು ಕುರಿಯನ್ನು ಕರೆದು ತಂದು ಒಂದು ಕಟಕಟೆಯ ಮೇಲೆ ನಿಲ್ಲಿಸಿದಳು. ಕತ್ತಿ ತೊಗೊಂಡು ಕಡೆದೇ ಬಿಡುತ್ತಾಳೆಯೇ ಅಂತ ಭಯ ಆಯ್ತು. ಅವಳು ಅದನ್ನು ನಿಲ್ಲಿಸಿದ್ದು ಅವತ್ತು ಬಂದಿದ್ದ ಅತಿಥಿಗಳ ಅಮೃತ ಹಸ್ತಗಳಿಂದ ಅದರ ಹಾಲು ಹಿಂಡಿಸಲು ಅಂತ ತಿಳಿದು ತುಸು ಸಮಾಧಾನ ಆಯ್ತು. ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿ

Read More

ಓದುವ ಸುಖ ಹಾಗೂ ಅರಿವು: ಗೋಳೂರ ನಾರಾಯಣಸ್ವಾಮಿ ಬರಹ

ಇಂದು ಸಮಾಜದಲ್ಲಿ ನಡೆಯುತ್ತಿರುವ ಒಳ್ಳೆಯದು ಕೆಟ್ಟದ್ದನ್ನು ಹೇಳುವ ಸಾಹಿತಿಗಳು, ನ್ಯಾಯವಾದಿಗಳು, ಮುಂದಾಳುಗಳು ಹಾಗೂ ಇನ್ನಿತರರು ಮಾಧ್ಯಮಗಳ ನಡುವೆ ಅಸೂಯೆ, ವೈಮನಸ್ಸು, ಅಹಂಕಾರ ಇರುತ್ತದೆ; ಆದರೆ ಬಂಡವಾಳಶಾಹಿಗಳು, ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು, ದೊಡ್ಡ ದೊಡ್ಡ ನಗರಗಳಲ್ಲಿ ವಾಸಿಸುವ ದಂಧೆಕೋರರು, ಭಯೋತ್ಪಾದಕರು, ಉಗ್ರಗಾಮಿಗಳು, ಆಯಕಟ್ಟಿನ ಜಾಗಗಳಲ್ಲಿ ಆಡಳಿತ ನಡೆಸುವ ಭ್ರಷ್ಟಾಚಾರಿಗಳ ನಡುವೆ ತುಂಬಾ ದೊಡ್ಡ ಸಾಮರಸ್ಯವಿದೆ: ಸಹಕಾರವಿದೆ.
ಗೋಳೂರ ನಾರಾಯಣಸ್ವಾಮಿ ಬರಹ ನಿಮ್ಮ ಓದಿಗೆ

Read More

“ಹಾದಿಖರ್ಚಿಗೆ ನಿನ್ನ ಮುದ್ದಿರಲಿ ಸಾಕು”: ಎಸ್ ನಾಗಶ್ರೀ ಅಜಯ್ ಅಂಕಣ

ನೋಡಲು ಸುಂದರವಾಗಿದ್ದರೆ ಅವರು ಕೆಟ್ಟವರೇ ಆಗಿರಬೇಕು. ಅಹಂಕಾರಿ, ಸ್ವಾರ್ಥಿ, ಸಮಯಸಾಧಕಿ, ಅವಕಾಶವಾದಿಯೇ ಆಗಿರಬೇಕೆಂಬ ಮೌಢ್ಯ ಉಸಿರುಗಟ್ಟಿಸುತ್ತದೆ. ದೇವರು ಕೊಟ್ಟ ರೂಪ. ಅದರಲ್ಲಿ ಅವರದ್ದೇನು ತಪ್ಪು? ಎಂದು ನೋಡಲು ಸುಮಾರಾಗಿರುವವರ ಪರ ವಹಿಸುವ ಸಮಾಜವೇ, ಚೆಂದ ಇರುವವರನ್ನು “ದೇವರು ಕೊಟ್ಟ ರೂಪ. ಅವರನ್ನೇಕೆ ಶಿಕ್ಷಿಸಬೇಕು?” ಎಂದು ಯೋಚಿಸುವುದಿಲ್ಲ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ