Advertisement

Month: January 2025

ಕೃಷ್ಣ ದೇವಾಂಗಮಠ ತೆಗೆದ ಈ ದಿನದ ಫೋಟೋ

ಈ ದಿನದ ಚಿತ್ರ ತೆಗೆದವರು ಕೃಷ್ಣ ದೇವಾಂಗಮಠ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು  ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

“ಇಷ್ಟವಿಲ್ಲದ ಕಾನ್ವೆಂಟಿಗೆ ಹೋಗುವುದಿದೆ
ಬೋರ್ಡು ಮೇಲೆ ಬರೆದ ಅಕ್ಷರಗಳನ್ನು
ಅ ಉ ತಪ್ಪದಂತೆ ಉರು ಹೊಡೆದು
ಹಳೆಯ ಕನ್ನಡಕದ ಟೀಚರ್ ಕೈಯ್ಯಲ್ಲಿ
ಬೆನ್ನು ತಟ್ಟಿಸಿಕೊಳ್ಳುವುದಿದೆ
ಬ್ರಹ್ಮಾಂಡ ಗೆದ್ದ ಸಂತಸದಲ್ಲಿ ಅರಳುವುದಿದೆ”- ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

Read More

ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ

ನಾವೂ ನಮ್ಮ ಮಕ್ಕಳೂ, ಕೆಲಸಕ್ಕೂ, ಶಾಲೆಗೂ ಸೈಕಲ್ನಲ್ಲೋ ನಡೆದುಕೊಂಡೋ ಹೋಗಬೇಕು. ನೀವು ಹಾಕಿದ ಊಟ ತಿಂದು ಕೊಬ್ಬಿದ ನಾಯಿಗಳು ನಮ್ಮ ಮೇಲೆ ಹಾರಿ ಬೀಳ್ತವೆ. ಮೊನ್ನೆ ಮೊನ್ನೆ ಒಂದು ಸಣ್ಣ ಹುಡುಗನಿಗೆ ಸಿಕ್ಕಾಪಟ್ಟೆ ಕಚ್ಚಿ ನಾವು ಅವನನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ಇನ್ನು ಮೇಲೆ ನೀವು ಇಲ್ಲಿ ತಂದು ಹಾಕಬೇಡಿ ಎಂದರಂತೆ….
ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ “ನಾಯಿ ನೆರಳು” ನಿಮ್ಮ ಓದಿಗೆ

Read More

ಮಾನಸಿಕ ಹಿಂಸೆಯೂ ಕ್ರೌರ್ಯವೇ: ಗಿರೀಶ್‌ ಕಾಸರವಳ್ಳಿ ಕೃತಿಯ ಆಯ್ದ ಭಾಗ

ಕಾರಂತರದ್ದು ಸದಾ ಕ್ರಿಯಾಶೀಲವಾಗಿರುವ ಮನಸ್ಸು. ಅವರಿಗೇ ‘ತಾನು ಖಾಲಿಯಾದೆ’ ಅಂತನ್ನಿಸಬೇಕಾದರೆ ಆ ಭೂಪಾಲ್ ಘಟನೆ ಎಂತಹ ಆಘಾತ ತಂದಿರಬೇಕು. ಅವರ ಮನಸ್ಸು ಮುದುಡುವಂತೆ ಮಾಡಿ, ತಮ್ಮಿಂದ ಇನ್ನು ಸೃಜನಾತ್ಮಕವಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ ಅನ್ನಿಸುವಂತೆ ಮಾಡಿದರಲ್ಲಾ, ಅದುವೇ ಕ್ರೌರ್ಯ. ಭೂಪಾಲ್‌ನ ಆ ಘಟನೆ ನಿಜವಾಗಿಯೂ ನಡೆದದ್ದೋ ಅಲ್ಲವೋ ನನಗೆ ತಿಳಿಯದು. ಅಲ್ಲಿನ ರಾಜಕೀಯ ರಂಗಮಂಡಲದ ಮುಖ್ಯಸ್ಥರಾಗಿದ್ದ ಕಾರಂತರನ್ನು ಬಲಿಪಶು ಮಾಡಿದರು ಎಂದು ಅವರ ಕೆಲವು ಸ್ನೇಹಿತರು ಹೇಳಿದ್ದನ್ನು ನಾನು ಕೇಳಿದ್ದೇನೆ.
ಖ್ಯಾತ ಸಿನಿಮಾ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರ ಚಲನಚಿತ್ರಗಳ ಸಂಕಥನ “ಬಿಂಬ ಬಿಂಬನ” ದಿಂದ “ಕ್ರೌರ್ಯ” ಚಿತ್ರದ ಕುರಿತ ಮಾತುಕತೆ ನಿಮ್ಮ ಓದಿಗೆ

Read More

ಯುಗಾದಿ ಹಬ್ಬ; ಶರತ್ಕಾಲದ ಚುಂಬಕ: ವಿನತೆ ಶರ್ಮ ಅಂಕಣ

ಅಮೆರಿಕಕ್ಕೆ ಹೋಲಿಸಿದರೆ ಅಷ್ಟೊಂದು ಸಂಪತ್ತು, ಸಿರಿತನವಿಲ್ಲದಿದ್ದರೂ ಅದೇ ಮಟ್ಟದ ಶ್ರದ್ಧೆ ಮತ್ತು ಆಸಕ್ತಿಗಳನ್ನು ಇಟ್ಟುಕೊಂಡೆ ಬ್ರಿಟನ್ನಿನ ಕನ್ನಡ ಸಂಘಗಳು ಭಾರತೀಯ ಹಬ್ಬಗಳ ಜೊತೆ ಭಾಷೆ-ಸಂಸ್ಕೃತಿಯನ್ನೂ ಸೇರಿಸಿಕೊಂಡು ಕಾರ್ಯಕ್ರಮಗಳನ್ನು ನಡೆಸಿ ಮಿಂಚುತ್ತವೆ. ಈ ಹಿರಿಯಕ್ಕಂದಿರ ಹಿಂದೆ ಸೇರುವುದು ಮತ್ತೆಲ್ಲಾ ದೇಶಗಳ ಕನ್ನಡ ಸಂಘಗಳು ಮತ್ತು ಅವುಗಳ ಆಚರಣೆಗಳು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ಅಂಕಣ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ