Advertisement

Month: January 2025

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರಾಜೀವಗೌಡ ಎಂ.ಜೆ. ಮೇಲೂರು ಕತೆ

ಹೆಜ್ಜೆಯಿಡಲೂ ಎಲ್ಲರೂ ಭಯಬೀಳುತ್ತಿದ್ದ ಕಾಡಿನ ಆ ಅಭೇಧ್ಯ ಕಣಿವೆಗೆ ಅವನು ಹೊಸದೇ ಆದ ಒಂದುದಾರಿ ಮಾಡಿಕೊಂಡು ಬಂದಾಗ, ಅಲ್ಲಿ ಕೆನೆಗಟ್ಟಿದ್ದ ಸೌಂದರ್ಯಕ್ಕೆ ಮಾರುಹೋಗಿದ್ದ. ಅಲ್ಲೇನಿದೆ ಕೇವಲ ಮರ, ಗಿಡ, ಬಳ್ಳಿ, ವಿಷಜಂತುಗಳು, ಕ್ರೂರಪ್ರಾಣಿಗಳು, ರಕ್ತ ಹೀರುವ ಜಿಗಣಿಗಳು ಎನ್ನುತ್ತಿದ್ದವರ ಮಧ್ಯದಲ್ಲಿದ್ದಾಗ ಇಂತಹಕಡೆ ಸೌಂದರ್ಯ ಕಾಣಲು ಬೇರೆಯದೇ ಆದ ಕಣ್ಣಗಳಿರಬೇಕು. ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರಾಜೀವಗೌಡ ಎಂ.ಜೆ. ಮೇಲೂರು ಕತೆ “ಸ್ವೇದಗಂಧಿ”

Read More

ಯೂತ್ ಕ್ರೈಂ ಕತೆಗಳು: ವಿನತೆ ಶರ್ಮ ಅಂಕಣ

ಎಷ್ಟೋ ಬಾರಿ ಪೊಲೀಸರು ಈ ಮಕ್ಕಳಿಗೆ ಎಚ್ಚರಿಕೆ ಕೊಟ್ಟು ಕಳಿಸುತ್ತಾರೆ. ಕೆಲವೊಮ್ಮೆ ದೊಡ್ಡ ಮಕ್ಕಳು ಯೂತ್ ಜಸ್ಟಿಸ್ ಮುಖಾಮುಖಿ ಸಭೆಗಳಲ್ಲಿ ಸಲಹೆ, ಬುದ್ಧಿವಾದಗಳನ್ನು ಪಡೆದು ಹೋಗುತ್ತಾರೆ. ಕೆಲವರಿಗೆ ಅಪರಾಧ ಮಾಡುವುದು ತಮಾಷೆಯಾದರೆ ಇನ್ನೂ ಕೆಲವು ಮಕ್ಕಳಿಗೆ ಅದು ಉದ್ದೇಶಪೂರ್ವಕವಾದ ನಡವಳಿಕೆ ಆಗಿರುತ್ತದೆ ಎಂದು ಸಮಾಜ ಕಾರ್ಯಕರ್ತರು, ಆಪ್ತಸಮಾಲೋಚನಾ ತಜ್ಞರು ಹೇಳುತ್ತಾರೆ. ಚಿಂತಿಸುವ ವಿಷಯವೆಂದರೆ ಅವರಲ್ಲಿ ಅನೇಕರು ಪದೇಪದೇ ಅದೇ ರೀತಿಯ ಅಪರಾಧಗಳನ್ನು ಮಾಡುತ್ತಾ ಇರುತ್ತಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಸ್ನೇಹದ ಕಡಲಲ್ಲಿ ಭಾವ ನಾವೆಯ ಪಯಣ: ರಾಮ್‌ಪ್ರಕಾಶ್‌ ರೈ ಸರಣಿ

ಆತ ಗುಹೆಯೊಳಗೆ ಬೀಳುತ್ತಿರಬೇಕಾದರೆ, ಬಾಲ್ಯದಲ್ಲಿ ನದಿಯ ನೀರಿಗೆ ಹಾರಿ, ಆನಂತರ ಈಜಲು ಅಸಾಧ್ಯವೆನಿಸಿ ಕಡೆಗೆ ಕುಟ್ಟನ್ ಬಂದು ಮೇಲೆತ್ತಿ ಕರೆದುಕೊಂಡು ಹೋಗುವ ದೃಶ್ಯವ ಹೊಲಿಯಲಾಗಿದೆ. ಹೀಗೆ ದೃಶ್ಯವೊಂದರ ಹಿಂದೆ ಅವಿತಿರುವ ಸನ್ನಿವೇಶ, ಭಾವವ ಬಣ್ಣಿಸುವ ಈ ಪ್ರಯೋಗ ಚಿತ್ರದ ಮೆಚ್ಚಿನ ಅಂಶಗಳಲ್ಲೊಂದು. ನೀರಿನ ಚಲನೆಗೆ ಅಡ್ಡಲಾಗಿ ಮಲಗುವುದು, ತನ್ನ ವಾಹನದ ತುಂಬಾ ಚೆಲ್ಲಿದ ಪದಾರ್ಥಗಳು, ಬಾಗಿಲಿನ ಅಂಚಿನಲ್ಲಿ ಅಂಟಿದ ಉಗುಳು ಕಲೆಯನ್ನು ಆಸ್ಥೆಯಿಂದ ತೆಗೆದು ಸ್ವಚ್ಛಗೊಳಿಸುವ ರಥದ ಕಡೆಗಿನ ಚಾಲಕನ ಪ್ರೇಮ ಹೀಗೆ ಬದುಕಿನ ಮೌಲ್ಯಗಳ ಬಗ್ಗೆ ಕಥೆಯು ಮೌನವಾಗಿಯೇ ಮಾತನಾಡುತ್ತದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಮಲಯಾಳಂನ ‘ಮಂಜುಮ್ಮೆಲ್ ಬಾಯ್ಸ್ ‘ಸಿನಿಮಾದ ವಿಶ್ಲೇಷಣೆ

Read More

ಸಂಗೀತ ವಿಶಾರದರ ನೆಲೆವೀಡು…: ಎಚ್. ಗೋಪಾಲಕೃಷ್ಣ ಸರಣಿ

ಬೆಂಗಳೂರಿನಲ್ಲಿ ಹಿಂದೂಸ್ತಾನಿ ಸಂಗೀತದ ಬಗ್ಗೆ ಅಷ್ಟು ಒಲವು ಇಲ್ಲದ್ದಿದ್ದ ಕಾಲದಲ್ಲಿ ಅದರ ನೆಲೆಗೆ ಒಂದು ಸಾಂಘಟಿಕ ಶಕ್ತಿ ಬೇಕಿತ್ತು. ಅಂತಹ ಶಕ್ತಿ ಒದಗಲು ದತ್ತಾತ್ರೇಯ ಗರುಡರು ಒಂದು ಪ್ರೇರಕ ವ್ಯಕ್ತಿ. ಬೆಂಗಳೂರಿನಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ನೆಲೆನಿಲ್ಲಲು, ಶ್ರೀ ರಾಮರಾವ್ ನಾಯಕ್ ಮತ್ತು ಶ್ರೀ ಶೇಷಾದ್ರಿ ಗವಾಯಿ ಅವರೊಡನೆ ದತ್ತಾತ್ರೇಯ ಗರುಡರು ಶ್ರಮಿಸಿದರು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂವತ್ನಾಲ್ಕನೆಯ ಕಂತು ನಿಮ್ಮ ಓದಿಗೆ

Read More

ಹೂವೆಂಬ ವಿಸ್ಮಯ: ಚಂದ್ರಮತಿ ಸೋಂದಾ ಸರಣಿ

ಅದು ಸಂಜೆಯಲ್ಲಿ ಬಿರಿಯುವ ಹೂವು. ಬೆಳಗ್ಗೆವರೆಗೆ ಬಿಟ್ಟರೆ ಪೂರ್ತಿಯಾಗಿ ಅರಳುತ್ತದೆ. ಅರಳಿದ ಮೇಲೆ ಕಟ್ಟಿದರೆ ಹೂವಿನ ಎಸಳು ಉದುರುತ್ತದೆ. ಹಾಗಾಗಿ, ರಾತ್ರಿ ಹೊತ್ತಿನಲ್ಲಿ ದೀಪದ ಬೆಳಕಿನಲ್ಲಿ ಕಟ್ಟಬೇಕಿತ್ತು. ಹೀಗೆ ಕಟ್ಟಿದ ಮಾಲೆಯನ್ನು ಮಾರನೆಯ ಬೆಳಗ್ಗೆ ಮುಡಿಯಬೇಕು/ದೇವರಿಗೆ ಅರ್ಪಿಸಬೇಕು ಇಲ್ಲವೆ ಬಿಸಿಲಿನಲ್ಲಿ ಬತ್ತದ ಹುಲ್ಲಿನ ಮೇಲೆ ಒಣಗಿಸಿ ಅದನ್ನು ಕಾಪಿಡಬೇಕು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ