Advertisement

Month: January 2025

ನೀಲಿ ನೋಡಿದ ಕಾಡು: ಸುಧಾ ಆಡುಕಳ ಅಂಕಣ

ಒಮ್ಮೆ ಅವನೂ, ನೀಲಿಯ ತಂದೆಯೂ ಅಂಟುವಾಳದ ಕಾಯಿಗಳನ್ನು ಹುಡುಕುತ್ತ ಕಾಡಿನಲ್ಲಿ ಬಹುದೂರದವರೆಗೆ ಸಾಗಿದರಂತೆ. ಚೀಲಗಟ್ಟಲೆ ಕಾಯಿಗಳನ್ನು ಕೊಯ್ದು ಮೂಟೆಗಟ್ಟಿ ದಣಿವಾರಿಸಿಕೊಳ್ಳಲೆಂದು ಮರವೊಂದರ ಬೇರಿನ ಮೇಲೆ ಕುಳಿತು ಕವಳ ತಿನ್ನತೊಡಗಿದರಂತೆ. ಸುಮಾರು ಹೊತ್ತಿಗೆ ನೋಡಿದರೆ ಅವರು ಕುಳಿತಿದ್ದ ಬೇರು ನಿಧಾನಕ್ಕೆ ಚಲಿಸಲು ಪ್ರಾರಂಭವಾಯಿತಂತೆ. ಅರೆ! ಇದೇನಿದು? ಎಂದು ಎದ್ದು ದೂರ ನಿಂತರೆ ಮರದ ಬೇರೆಂದು ಅವರು ಕುಳಿತದ್ದು ಮಾದೊಡ್ಡ ಹೆಬ್ಬಾವಿನ ಮೇಲಂತೆ!
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಎಂಟನೆಯ ಕಂತು ನಿಮ್ಮ ಓದಿಗೆ

Read More

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ ಓದುಗರ ಮನಸನ್ನ ಉಲ್ಲಾಸಗೊಳಿಸುತ್ತದೆ. ಮೊದಲ ಪುಟದ ಓದು ಆರಂಭಿಸುತ್ತಿದ್ದಂತೆ ಹಳದಿ ಬಣ್ಣದ ಅಂಬರಿ ಹೂವಿನ ಪರಿಮಳದಲ್ಲಿ ಮನಸ್ಸು ಅರಳಿ ಕಥಾನಾಯಕನಾದ ಶಾಮ ನಮ್ಮನ್ನು ನಮಗರಿವಿಲ್ಲದೆ ಆವರಿಸಿಕೊಂಡು ಬಿಡುತ್ತಾನೆ ಅಷ್ಟು ಆಪ್ತತೆ ಈ ಕಾದಂಬರಿಯಲ್ಲಿದೆ.
ಮಂಡಲಗಿರಿ ಪ್ರಸನ್ನ ಬರೆದ “ಹಳ್ಳಿ ಹಾದಿಯ ಹೂವು” ಎಂಬ ಮಕ್ಕಳ ಕಾದಂಬರಿಯ ಕುರಿತು ಡಾ. ತಿಮ್ಮಯ್ಯ ಶೆಟ್ಟಿ ಇಲ್ಲೂರು ಬರಹ

Read More

ಎನ್. ಆರ್. ತಿಪ್ಪೇಸ್ವಾಮಿ ಚಿಕ್ಕಹಳ್ಳಿ ತೆಗೆದ ಈ ದಿನದ ಫೋಟೋ

ಈ ದಿನದ ಫೋಟೋ ತೆಗೆದವರು ಎನ್. ಆರ್. ತಿಪ್ಪೇಸ್ವಾಮಿ ಚಿಕ್ಕಹಳ್ಳಿ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ವಾಸವಾಗಿದ್ದಾರೆ. ತಾ.ಪಂ ಕಚೇರಿ, ಹಿರಿಯೂರು ಇಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಹಂಪಿಯ ಕನ್ನಡ ವಿ.ವಿ.ಯಲ್ಲಿ ಪಿ.ಹೆಚ್ ಡಿ ಸಂಶೋಧನಾ ಅಧ್ಯಯನ ಮಾಡುತ್ತಿದ್ದಾರೆ. ಹಲವು ಪತ್ರಿಕೆಗಳಲ್ಲಿ ಇವರ ಕತೆಗಳು ಪ್ರಕಟವಾಗಿವೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಫೋಟೋ ಕೂಡ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.

ನಮ್ಮ ಈ ಮೇಲ್‌ ವಿಳಾಸ: ks.kendasampige@gmail.com

Read More

ಇದು ರಾಜಕೀಯ ಕಾಲ: ಚೈತ್ರಾ ಶಿವಯೋಗಿಮಠ ಸರಣಿ

ಶಿಂಬೋರ್ಸ್ಕಾರ ಜನಪ್ರಿಯತೆ ಮತ್ತು ಯಶಸ್ಸಿಗೆ ಕಾರಣವೇನು ಗೊತ್ತೇ? ವಿಶಿಷ್ಟ ಕಾವ್ಯ ಶೈಲಿ, ವಿಭಿನ್ನತೆ. ಯಾವುದೇ ಒಂದು ಕಾವ್ಯ ಶೈಲಿಗೆ ಜೋತು ಬೀಳದೆ, ತನ್ನದೇ ಆದ ನುಡಿಗಟ್ಟನ್ನು ಮತ್ತು ತನ್ನದೇ ಆದ ಭಾಷೆಯನ್ನು ಠಂಕಿಸಿದರು. ದೊಡ್ಡ ಐತಿಹಾಸಿಕ ಘಟನೆಗಳು, ಮಾನವ ಅಸ್ತಿತ್ವದ ಜೈವಿಕ ಸ್ಥಿತಿಗತಿ, ಕವಿಯ ಸಾಮಾಜಿಕ ಪಾತ್ರ ಮತ್ತು ತಾತ್ವಿಕ ವ್ಯವಸ್ಥೆಗಳು, ಸಿದ್ಧಾಂತಗಳಿಂದ ದೂರವೇ ಉಳಿಯಿತು ಅವರ ಕಾವ್ಯ.
ಚೈತ್ರಾ ಶಿವಯೋಗಿಮಠ ಬರೆಯುವ “ಲೋಕ ಸ್ತ್ರೀ-ಕಾವ್ಯ ಲಹರಿ” ಸರಣಿ

Read More

ಸ್ಯಾನಿಟರಿ ಇಂಜಿನಿಯರ್ಸ್..: ಪೂರ್ಣೇಶ್ ಮತ್ತಾವರ ಪ್ರಬಂಧ

ಹೀಗೆ ನೀರು ಹೊತ್ತುಕೊಂಡು ಹೋದರೂ ಯಾವಾಗಲೂ ಉದ್ದನೆಯ ಸಾಲು, ನೂಕು ನುಗ್ಗಲು! ಸರಿ, ಈ ಎಲ್ಲಾ ಕಿರಿಕಿರಿ, ಪಡಿಪಾಟಲುಗಳನ್ನು ಅನುಭವಿಸುತ್ತಲೇ ಹತ್ತಾರು ನಿಮಿಷ ಕಾದು ಒಳ ಹೋದರೂ, ಹೋದವರು ಬಾಗಿಲು ಹಾಕಿ, ಬಾಗಿಲಿನ ಚಿಲಕ ಸರಿ ಇಲ್ಲವೆಂದು ಬಕೆಟನ್ನೇ ಬಾಗಿಲಿಗೆ ಅಡ್ಡವಾಗಿ ಇಟ್ಟು, ಕುಕ್ಕರುಗಾಲು ಹಾಕಿ ಕೂತು ಒಂದು ಕೈಲಿ ಬಕೆಟ್, ಮತ್ತೊಂದು ಕೈಲಿ ಸಹಿಸಲಾರದ ವಾಸನೆಗೆ ಮೂಗು ಮುಚ್ಚಿ ಶೌಚ ನಡೆಸಬೇಕೆನ್ನುವಷ್ಟರಲ್ಲೇ ದಡಬಡ ಬಾಗಿಲು ಬಡಿತ, ಸ್ವಲ್ಪ ತಡವಾದರೂ ಬಾಗಿಲನ್ನೇ ಮುರಿಯುವ ಬೆದರಿಕೆ, ಇತ್ಯಾದಿ, ಇತ್ಯಾದಿ..
ಪೂರ್ಣೇಶ್‌ ಮತ್ತಾವರ ಬರೆದ ಪ್ರಬಂಧ ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ