Advertisement

Month: January 2025

ಇದು ಎಲೆಗಳುದುರೋ ಕಾಲ…: ಚೈತ್ರಾ ಶಿವಯೋಗಿಮಠ ಸರಣಿ

ತೀರಾ ಸಣ್ಣ ವಯಸ್ಸಿನಲ್ಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅತ್ಯಂತ ಕೆಟ್ಟ ಬಾಲ್ಯ, ತಂದೆ-ತಾಯಿ ಪ್ರೀತಿ ಸಿಗದೇ ಅನಾಥ ಪ್ರಜ್ಞೆ ಹೊತ್ತು ಬೆಳೆದ ಮೇರಿ, ಮೂಕಿಯಾದಳು. ಮನುಷ್ಯರೊಂದಿಗೆ ಮಾತು ಮರೆತು ಪ್ರಕೃತಿಯೊಂದಿಗೆ ಜೀವಿಸಿದಳು. ಕಾಡಿನಲ್ಲಿ ಮೈಲಿಗಟ್ಟಲೆ ಗುರಿಯಿರದೆ ಸುತ್ತಾಡುವುದು ಈ ಕವಿಯ ಮೆಚ್ಚಿನ ಕೆಲಸವಾಗಿತ್ತು. ಇದನ್ನ ಹವ್ಯಾಸ ಅನ್ನಲಾರೆ, ದಿನವೂ ಕಾಡಿನೊಳಗೆ ಅಡ್ಡಾಡಿ ಬರುವುದು ಉಸಿರಾಟದಷ್ಟೇ ಅವಶ್ಯಕವಾಗಿತ್ತು ಈಕೆಗೆ.”
ಚೈತ್ರಾ ಶಿವಯೋಗಿಮಠ ಬರೆಯುವ “ಲೋಕ ಸ್ತ್ರೀ-ಕಾವ್ಯ ಲಹರಿ” ಸರಣಿ

Read More

ಮಡಿಕೇರಿ ಮೇಲ್ ಮಂಜು: ಸುಮಾವೀಣಾ ಸರಣಿ

ಮಳೆಗಾಲದಲ್ಲಿ ದಟ್ಟ ಮಂಜು ಆವರಿಸಿಬಿಟ್ಟರೆ ಐದಾರು ಮೀಟರುಗಳು ಸ್ಪಷ್ಟವಾಗಿ ಕಂಡರೆ ಹೆಚ್ಚು. ಉಳಿದಂತೆ ಮಂಜನ್ನೆ ಸೀಳಿಕೊಂಡು ಹೋಗಬೇಕಾಗಿರುತ್ತಿತ್ತು ಆಗ ಒಂಥರಾ ಥ್ರಿಲ್ ಆಗಿರುತ್ತಿತ್ತು. ವಾಹನ ಅಪಘಾತಗಳು ಸಂಭವಿಸುತ್ತಿದ್ದವು. ಮಳೆ ಜೋರಾಗಿ ಬಂದರೆ ಮಂಜು ಎಲ್ಲಿ ಹೋಗುತ್ತಿತ್ತೋ? ಬಹುಶಃ ಮಳೆಯ ರಭಸಕ್ಕೆ ಎಲ್ಲಿಯಾದರೂ ಅಡಗುತ್ತಿತ್ತೋ ತಿಳಿಯದು ರಣ ಮಳೆ ಚಚ್ಚಿ ಹೋದನಂತೆ ಯಾವುದೋ ಬಿಲದಿಂದ ಮೆಲ್ಲನೆ ಆಚೆ ಬಂದು ತಾಯಿ ಮಗುವನ್ನು ತಬ್ಬುವಂತೆ ಇಡೀ ಮಡಿಕೇರಿ ನಗರವನ್ನು ತಬ್ಬಿಬಿಡುತ್ತಿತ್ತು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಇಪ್ಪತ್ತೇಳನೆಯ ಕಂತು ನಿಮ್ಮ ಓದಿಗೆ

Read More

ಶ್ರುತಿ ಬಿ.ಆರ್. ಗೆ ಲಭಿಸಿದ ಕೇಂದ್ರ ಸಾಹಿತ್ಯ ಅಕಾಡೆಮಿ ‘ಯುವ ಪುರಸ್ಕಾರ’

ಚಿಕ್ಕಂದಿನಿಂದ ಅಮ್ಮ ತರೀಕೆರೆಯ ಸಾರ್ವಜನಿಕ ಗ್ರಂಥಾಲಯದಿಂದ ತಂದು ಕೊಡುತ್ತಿದ್ದ ಮಕ್ಕಳ ಪುಸ್ತಕಗಳನ್ನು, ಮನೆಗೆ ತರಿಸುತ್ತಿದ್ದ ಚಂಪಕ, ಬಾಲಮಂಗಳ ಮಾಸಿಕಗಳು, ಪ್ರಜಾವಾಣಿ ಮತ್ತು ಮಯೂರದಲ್ಲಿ ಬರುತ್ತಿದ್ದ ಮಕ್ಕಳ ಕತೆಗಳು, ಪುಟ್ಟಿ ರಾಮನ್ ಮುಂತಾದ ಕಾರ್ಟೂನ್‌ಗಳನ್ನು ನಾನು ನನ್ನ ಅಕ್ಕ ಪೈಪೋಟಿಯಲ್ಲಿ ಓದುತ್ತಿದ್ದೆವು, ಅದೇ ಪೈಪೋಟಿ ಮುಂದುವರೆದು ಸುಧಾದಲ್ಲಿ ಬರುತ್ತಿದ್ದ ಧಾರಾವಾಹಿಗಳು ಮತ್ತು ಹೊಸ ಪುಸ್ತಕಗಳನ್ನು ಮೊದಲು ಓದಲು ಜಗಳವಾಡುತ್ತಿದ್ದೆವು.

Read More

ರಾಗಿಮುದ್ದೆಗೆ ಬಾದಾಮಿ ಹಾಲು ಎಕ್ಸ್‌ಚೇಂಜ್‌ ಆಫರ್!: ಬಸವನಗೌಡ ಹೆಬ್ಬಳಗೆರೆ ಸರಣಿ

ಇವರು ಎಂಟರಿಂದ ಪಿಯೂಸಿ, ಡೈರಿ ಡಿಪ್ಲೊಮೋ ಹುಡುಗರ ವಾರ್ಡನ್ ಆಗಿದ್ದರು. ಇವರು ವಾಲಿಬಾಲನ್ನು ಕಿರುಬೆರಳಲ್ಲಿ ತಿರುಗಿಸುತ್ತಿದ್ದರು. ಕಳ್ಳತನ ಮಾಡಿದ ಕಳ್ಳರನ್ನು ಕಂಡುಹಿಡಿಯೋದ್ರಲ್ಲಿ ಇವರು ಎಕ್ಸ್ ಪರ್ಟ್. ಹಾಸ್ಟೆಲ್ಲಿನಲ್ಲಿ ಯಾರೇ ಕಳ್ಳತನ ಮಾಡಲಿ ಪರ್ಫೆಕ್ಟ್ ಆಗಿ ಇವರೇ ಅಂತಾ ಕಂಡುಹಿಡಿಯುತ್ತಿದ್ದರು. ಒಂದೊಮ್ಮೆ ಕಳ್ಳತನ ಮಾಡಿ ಅವರ ಕೈಗೆ ಸಿಕ್ಕಿ ಬಿದ್ರೆ ಮುಗೀತು ಚಟ್ನಿ ಅರೆದಂತೆ ರುಬ್ಬಿಬಿಡ್ತಾ ಇದ್ರು! ಒಂದು ರೂಮಲ್ಲಿ ಕೂಡಿ ಹಾಕಿಕೊಂಡು ಹೊಡಿತಾ ಇದ್ರೆ ಆ ಶಬ್ದ ನಮ್ಮನ್ನು ಸ್ಥಂಭೀಭೂತರನ್ನಾಗಿಸುತ್ತಿತ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಬೆಂಗಳೂರು ವಸತಿ ಪುರಾಣ-1: ರಂಜಾನ್‌ ದರ್ಗಾ ಸರಣಿ

ಮೊದಲ ದಿನವಾದ ಕಾರಣ ಲೈಟ್ ಹಚ್ಚಿಕೊಂಡೇ ಮಲಗಿದೆ. ಬೇಗ ನಿದ್ರೆ ಬರಲಿಲ್ಲ. ಆ ಮೇಲೆ ಮಧ್ಯರಾತ್ರಿ ಎಚ್ಚರವಾಯಿತು. ಕಣ್ಣು ತೆರೆದಾಗ ಗಾಢಾಂಧಕಾರ ಆವರಿಸಿದ್ದು ಗಾಬರಿ ಹುಟ್ಟಿಸಿತು. ಕರೆಂಟ್ ಹೋಗಿರಬಹುದು ಎಂದು ಭಾವಿಸಿ ಹಾಗೆ ಮಲಗಿದೆ. ಬೆಳಿಗ್ಗೆ ಬಹಳ ಹೊತ್ತಿನವರೆಗೆ ಎಚ್ಚರಾಗಲಿಲ್ಲ. ಕೊನೆಗೆ ಎಚ್ಚರವಾದಾಗ ಸೊಳ್ಳೆಪರದೆ ಮೇಲೆಲ್ಲ ಸೊಳ್ಳೆಗಳು ಸುತ್ತಿಕೊಂಡಿದ್ದರಿಂದ ಕತ್ತಲು ಆವರಿಸಿದ್ದು ಗೊತ್ತಾಯಿತು!
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ