Advertisement

Month: January 2025

ನಮ್ಮನು ಪ್ರಭಾವಿಸಿದ ಮೇಷ್ಟ್ರುಗಳಿವರು…: ಬಸವನಗೌಡ ಹೆಬ್ಬಳಗೆರೆ ಸರಣಿ

ಒಂದು ಮಗು ದಿನದ 24 ಗಂಟೆಯಲ್ಲಿ‌ ಶಾಲೆಯಲ್ಲಿ ಬರೀ 8 ಗಂಟೆ ಇರುತ್ತಾನೆ. ಆದರೆ ಇನ್ನುಳಿದ 16 ಗಂಟೆ ಮನೇಲಿ ಇರುತ್ತಾನೆ. ಸಮಾಜದಲ್ಲಿರುವ ಉಳಿದವರೂ ಕೂಡ ಮಕ್ಕಳ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ‘ಸಂಗದಂತೆ ಬುದ್ಧಿ ಊಟದಂತೆ ಲದ್ಧಿ’ ಎಂಬಂತೆ ಸಹವಾಸವೂ ಕೂಡ ಮುಖ್ಯ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಬಾಳ ನೌಕೆಯ ತಲ್ಲಣಗಳಿಗೆ ಬೆಳಕಿನ ದೀಪ: ಅನುಸೂಯ ಯತೀಶ್ ಬರಹ

ಕವಿ ಇಲ್ಲಿನ ಕವಿತೆಗಳನ್ನು ದೀರ್ಘವಾಗಿ ಬೆಳೆಸುತ್ತಾ ಹೋಗಿದ್ದಾರೆ ಎನ್ನುವುದಕ್ಕಿಂತ ಕವಿಯ ಧ್ಯಾನಸ್ಥ ಸ್ಥಿತಿ ಕವಿಯ ಪ್ರಜ್ಞಾಪೂರ್ವಕತೆಯನ್ನು ಮೀರಿ ಕವಿತೆಗಳನ್ನು ವಿಸ್ತಾರಗೊಳಿಸಿದೆ. ಸುಮಾರು ಮೂರು ಪುಟಗಳವರೆಗೂ ಚಾಚಿಕೊಂಡಿರುವ ಕವಿತೆಗಳ ಭಾವದೊನಲು ಎಲ್ಲೂ ಏಕತಾನತೆಗೆ ಎಡತಾಕುವುದಿಲ್ಲ. ತಾಜಾತನದ ರೂಪಕಗಳು, ಪ್ರತಿಮೆಗಳು ಕವಿತೆಗಳಿಗೆ ಗಟ್ಟಿತನ ತುಂಬಿ ಆಪ್ತತೆ ಕಾಯ್ದುಕೊಂಡಿವೆ. ಓದಿನ ಪ್ರೀತಿ ಗುಕ್ಕಿಗೂ ಬೇರೆ ಬೇರೆಯದೆ ಅರ್ಥ ಧ್ವನಿಸುವ ಕವಿತೆಗಳು ಚಿರಾಯುವಾಗಲು ಪ್ರಯತ್ನಿಸುತ್ತವೆ.
ಜಿ.ಆರ್. ರೇವಣಸಿದ್ದಪ್ಪನವರ ‘ಬಾಳನೌಕೆಗೆ ಬೆಳಕಿನ ದೀಪ’ ಕವನ ಸಂಕಲನದ ಕುರಿತು ಅನುಸೂಯ ಯತೀಶ್‌ ಬರಹ

Read More

ಬದುಕಲು ಕಲಿತೆವು: ರಂಜಾನ್‌ ದರ್ಗಾ ಸರಣಿ

ಕಿಚ್ಚಿನಲ್ಲಿ ಕೋಲ ಬೈಚಿಟ್ಟಾಗ ಎರಡೂ ಕೋಲುಗಳು ಕಿಚ್ಚಿನಿಂದಾಗಿ ನಿಗಿನಿಗಿ ಕೆಂಡಗಳಾಗುತ್ತವೆ. ಅವು ನಿಗಿನಿಗಿ ಕೆಂಡವಾದ ನಂತರ ಒಂದೇ ತೆರನಾದಂತೆ. ಒಂದು ದೀಪದಿಂದ ಇನ್ನೊಂದು ದೀಪವನ್ನು ಹಚ್ಚಿಕೊಂಡಾಗ ಆ ಎರಡೂ ದೀಪಗಳು ಒಂದೇ ರೀತಿಯ ಬೆಳಕು ಕೊಡುತ್ತವೆ. ಹೀಗೆ ಬಸವಣ್ಣನವರು ಗುರು-ಶಿಷ್ಯ ಸಂಬಂಧದ ಕುರಿತು ಹೇಳಿದ್ದಾರೆ. ಕೆಂಡಗಳ ಶಾಖ, ದೀಪಗಳ ಬೆಳಕು ಒಂದೇ ರೀತಿಯವು ಆಗುತ್ತವೆ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ರೇಣುಕಾ ಹೆಳವರ ಕತೆ

ಅಷ್ಟೊಂದು ಪ್ರೀತಿಸಿ ನನಗೋಸ್ಕರ ಸಾಯಲೂ ಕೂಡ ಮುಂದಾಗಿದ್ದ ಮಹೇಶ್ ಇವನೇನಾ ಎಂದು ಗಂಗಾ ದಂಗುಬಡಿದು ಹೋದಳು. ಗಂಗಾ ಹಾಸ್ಟೆಲ್‌ನಲ್ಲಿ ಓದಿದ ಹುಡುಗಿ, ಈ ಜಗತ್ತಿನ ಎಲ್ಲ ಆಯಾಮಗಳ ಅರಿವು ಕೂಡ ಅವಳಿಗಿತ್ತು. ಆದರೂ ಅವನ ಮಾತಿನ ಬಾಣ ಅವಳ ಎದೆಯಲ್ಲಿ ಹೊಕ್ಕು ರಕ್ತಕಾರುವಂತೆ ಚುಚ್ಚುತ್ತಿತ್ತು. “ಮಹೇಶ ನಿಜಕ್ಕೂ ನನ್ನ ಪ್ರೀತಿಸಿದ್ನಾ..? ಅಥವಾ ನನ್ನ ರೂಪ ಪಡಿಯೋಕೆ ನಾಟ್ಕಾ ಆಡಿದ್ನಾ?
ನಾನು ಮೆಚ್ಚಿದ ನನ್ನ ಕತೆಯ ಸರಣಿಯಲ್ಲಿ ರೇಣುಕಾ ಹೆಳವರ ಕತೆ “ಗಿಳಿಯು ಪಂಜರದೊಳಿಲ್ಲ”

Read More

ಇರುವುದೆಲ್ಲವ ಹೇಳಿಬಿಡು…: ಸುಶೀಲಾ ಡೋಣೂರ ಕಾದಂಬರಿಯ ಪುಟಗಳು

‘ಈ ಮಾತು ಚರ್ಚೆಗೆ ಬರದೆ ಹೋಗಿದ್ರ ನಾನು ಈ ಸುಳ್ಳು ಹೇಳಬಹುದಿತ್ತು ಪೂಣ, ಈಗ ಎಲ್ಲಾನೂ ಒಪ್ಗೊಂಡ ಮ್ಯಾಲ ಮತ್ತ ಅದೇ ಸುಳ್ಳನ್ನ ಆರಂಭದಿಂದ ಹೇಳು ಅಂದ್ರ ಹೇಳಾಕ ಆಗೂದಿಲ್ಲ. ಏನು ಶಿಕ್ಷೆ ಕೊಡ್ತೀಯೊ ಕೊಡು. ನಾ ನಿನ್ನ ಪ್ರೀತಿಸ್ತೀನಿ ಅನ್ನೂದು ಖರೆ, ಅದೇ ಅಂತಿಮ. ನೀ ಸಿಕ್ರೂ ಸರಿ, ಸಿಗಲಿಲ್ಲ ಅಂದ್ರೂ ಸರಿ. ಜೀವನಪೂರ್ತಿ ನಿನ್ನ ನೆನಪಿನ್ಯಾಗ ಸಾಗಿಸುವಷ್ಟು ಸುಂದರ ಕ್ಷಣಗಳನ್ನ ಕಳದೀನಿ ನಿನ್ನ ಜೋಡಿ, ಅವೇ ಸಾಕು’.
ಪತ್ರಕರ್ತೆ ಸುಶೀಲಾ ಡೋಣೂರ ಹೊಸ ಕಾದಂಬರಿ “ಪೀಜಿ”ಯ ಒಂದು ಅಧ್ಯಾಯ ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ