Advertisement

Month: January 2025

ಕದಿರಪ್ಪನ ಪರಿಷೆ: ಸುಮಾ ಸತೀಶ್ ಸರಣಿ

ಸ್ಯಾನೆ ವಿಸೇಸವಾದ್ದು ಅಂದ್ರೆ ಆಟುದ್ ಸಾಮಾನಿನ ಬುಟ್ಟಿಗ್ಳು. ಕಾರು ಬೈಕು ಅಲ್ಲ ಬುಡಿ. ಆ ಬುಟ್ಟಿಗ್ಳಾಗೆ ಬುಡಿಗೆಗಳು ಇರ್ತಿದ್ವು. ಎಲ್ಡು-ಮೂರು ಬೆಟ್ಟಿನ ಗಾತ್ರದ ಮಣ್ಣಿನ‌‌ ಮಡಿಕೆ ಕುಡಿಕೆಗಳು, ಒಲೆ, ಬಟ್ಟಲು, ಮುಚ್ಚಳ, ಸೌಟು, ಹಂಚು ಇಂತಾ ಅಡ್ಗೆ ಮನೆ ಸಾಮಾನು. ಹುಡುಗೀರೆಲ್ಲಾ ಅಲ್ಲೇ ಸೇರ್ಕಂಡು ಒಬ್ಬಳು ಬಟ್ಟಲು ತಕಂಡ್ರೆ, ಇನ್ನೊಬ್ಬಳು ಒಲೆ ತಕಣಾದು. ಐದು ಪೈಸೆ, ಹತ್ತು ಪೈಸೆ, ಜಾಸ್ತಿ ಅಂದ್ರೆ ನಾಕಾಣೆ ಇರ್ತಿದ್ವು. ನಮ್ಗೋ ತಲಾಕೈವತ್ತು ಪೈಸೇ ಸಿಕ್ತಿದ್ರೆ ಹೆಚ್ಚು.‌
ಸುಮಾ ಸತೀಶ್ “ರಂಗಿನ ರಾಟೆ” ಸರಣಿ

Read More

ನಾವೆಂದೂ ಮರೆಯಲಾಗದ ಹಾಸ್ಟೆಲ್ ಕಲಿಸಿದ ಪಾಠ…: ಬಸವನಗೌಡ ಹೆಬ್ಬಳಗೆರೆ ಸರಣಿ

ಶನಿವಾರ ಶಾಲೆ ಬಿಟ್ಟಾಗಿನಿಂದ ಹಿಡಿದು ಸಂಜೆ 5;30 ವರೆಗೂ ನಾವು ವಿಶ್ರಾಂತಿ ತೆಗೆದುಕೊಳ್ಳದೆ ಕ್ಲೀನ್ ಮಾಡಿದರೆ ಮಾತ್ರ ಎಲ್ಲಾ ತೊಟ್ಟಿಗಳು ಕ್ಲೀನ್ ಮಾಡೋಕೆ ಸಾಧ್ಯ ಆಗ್ತಾ ಇತ್ತು. ಆ ನಂತರ ಸ್ನಾನ ಮಾಡಿ ನಮಗೆ ಸಿಕ್ಕ ಮೆಸ್ಸಿನಲ್ಲಿ ರಾತ್ರಿ ಊಟ ಮಾಡುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ತಾ ಇದ್ವಿ!! ‘ಭೂತಯ್ಯನ ಮಗ ಅಯ್ಯ’ ಫಿಲಮ್ಮಿನಲ್ಲಿ ಬರೋ ಸೀನಿನ ತರಹ ಕೆಲವರು ಸಾಕಷ್ಟು ಬಡಿಸಿಕೊಂಡು ತಿನ್ತಾ ಇದ್ರು. ನಮಗೆ ತುಂಬಾ ಖುಷಿ ಆಗ್ತಾ ಇತ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಇಪ್ಪತ್ತೊಂದನೆಯ ಕಂತು ನಿಮ್ಮ ಓದಿಗೆ

Read More

ವೀಣಾ ನಿರಂಜನ ಬರೆದ ಈ ದಿನದ ಕವಿತೆ

“ಮೊದಮೊದಲು
ಹಿತವೆಂದುಕೊಂಡವಳಿಗೆ
ಕಂಡೂ ಕಂಡೂ
ಹಗಲು ಬಾವಿಗೆ ಬಿದ್ದ ಅನುಭವ
ಪರಚಿಕೊಂಡಲೆಲ್ಲ
ಹೆಪ್ಪುಗಟ್ಟಿದ ರಕ್ತದ ಕಲೆ
ಮೈ ತುಂಬ ಗಾಯ”- ವೀಣಾ ನಿರಂಜನ ಬರೆದ ಈ ದಿನದ ಕವಿತೆ

Read More

ಕ್ಯಾಲಿಫೋರ್ನಿಯಾ ಮತ್ತು ಭೂಕಂಪ: ಗಿರಿಧರ್‌ ಗುಂಜಗೋಡು ಬರಹ

ನನ್ನ ಹೆದರಿಕೆ ಏನೆಂದರೆ ನಾನು ಟಾಯ್ಲೆಟ್ಟಿನಲ್ಲಿದ್ದಾಗಲೋ ಇಲ್ಲಾ ಸ್ನಾನ ಮಾಡಬೇಕಾದರೋ ಭೂಕಂಪವಾದರೆ ಏನು ಮಾಡೋದು ಅಂತ. ಆ ಅವಸ್ಥೆಯಲ್ಲಿ ಹೊರಗೆ ಓಡುವುದು ಎಷ್ಟು ಮುಜುಗರದ ಸನ್ನಿವೇಶ ಅಂತ ಯೋಚಿಸಿ. ನಾನು ಗೆಳೆಯನೊಟ್ಟಿಗೆ ಮಾತನಾಡುತ್ತಾ ಇದೇ ವಿಷಯ ಹೇಳಿದೆ.
ಕ್ಯಾಲಿಫೋರ್ನಿಯಾದಲ್ಲಾದ ಭೂಕಂಪದ ಅನುಭವಗಳ ಕುರಿತು ಗಿರಿಧರ್‌ ಗುಂಜಗೋಡು ಬರಹ

Read More

ಬರಲು ಹೇಳಿ ಭೇಟಿಯಾಗದೆ ಹೋದರು!: ರಂಜಾನ್ ದರ್ಗಾ ಸರಣಿ

ಅವರು ಏನೇ ಆದರೂ ನನ್ನ ಜೊತೆಗಿನ ಸಂಪರ್ಕವನ್ನು ಎಂದೂ ಕಳೆದುಕೊಳ್ಳಲಿಲ್ಲ. ಸುಬ್ಬಯ್ಯಶೆಟ್ಟಿ ಅವರು ಮೊದಲು ಮಾಡಿ ಆ ಕಾಲದ ಎಲ್ಲ ಹಿರಿಯ ಕಿರಿಯ ಗೆಳೆಯರು ಇಂದಿಗೂ ಸಂಪರ್ಕದಲ್ಲಿದ್ದಾರೆ. ಈ ಕಾರಣದಿಂದಲೇ ಮೊಹಿದ್ದೀನ್ ಅವರು ನಿಧನರಾಗುವ ಮೂರು ದಿನಗಳ ಮುಂಚೆ ಫೋನ್ ಮಾಡಿದ್ದು. ನಾವು ಸಮಯ ಸಿಕ್ಕಾಗಲೆಲ್ಲ ಭೇಟಿಯಾಗುತ್ತಲೇ ಇದ್ದೆವು. ನಡೆದಾಡಲಿಕ್ಕಾಗದೆ ಬಹಳ ನೋವು ಅನುಭವಿಸಿದರು. ಅವರಿಗೆ ತಮ್ಮ ಅನಾರೋಗ್ಯದ ಬಗ್ಗೆ ಬಹಳ ಬೇಸರವಾಗಿತ್ತು. ಏಕೆಂದರೆ ಸದಾ ಚಟುವಟಿಕೆಯಿಂದ ಇರಬೇಕೆನ್ನುವ ಸೇವಾ ಮನೋಭಾವದ ಗಂಭೀರ ವ್ಯಕ್ತಿ ಅವರಾಗಿದ್ದರು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ