Advertisement

Month: January 2025

“ನಿಯುಕ್ತಿ ಪುರಾಣ”…: ದೀಪಾ ಫಡ್ಕೆ ಬರಹ

`ನಿಯುಕ್ತಿ ಪುರಾಣ’ದ ಕೃತಿಕಾರ ಮೈಸೂರು ಒಡೆಯರ ಚರಿತ್ರೆಯ ಕೆಲವು ಅಂಗಗಳನ್ನು ಅಥವಾ ಮುಖ್ಯ ಅಂಶಗಳನ್ನು ಇಟ್ಟುಕೊಂಡು ಅದಕ್ಕೆ ಕಲ್ಪನೆಯಿಂದ ರಕ್ತಮಾಂಸವನ್ನು ತುಂಬಿದ್ದಾರೆ. ಹದಿನೈದು, ಹದಿನಾರು ಮತ್ತು ಹದಿನೇಳನೇ ಶತಮಾನದ ಮಹಿಷೂರಿನ ನಾಲ್ವಡಿ ಚಾಮರಾಜ ಒಡೆಯರು, ಐಮಡಿ ಚಾಮರಾಜ ಒಡೆಯರು ಮತ್ತು ರಾಜ ಒಡೆಯರ ಬದುಕನ್ನು ಬೋಳೊಡೆಯ, ಬೆಟ್ಟದೊಡೆಯ ಮತ್ತು ಮುನ್ನೊಡೆಯ ಎನ್ನುವ ಆಡು ಹೆಸರುಗಳನ್ನು ನೀಡಿ ಅವರ ಮೂಲಕ ಪುರಾಣವನ್ನು ಪೌರಾಣಿಕ, ಕಾಲ್ಪನಿಕ, ಜಾನಪದ ಮತ್ತು ಐತಿಹಾಸಿಕ ನೆಲೆಗಳಲ್ಲಿ ಪೋಣಿಸಿ ಕಥನವಾಗಿಸಿದ್ದಾರೆ.
ನಾಗರಾಜ ವಸ್ತಾರೆ ಕಾದಂಬರಿ “ನಿಯುಕ್ತಿ ಪುರಾಣ”ದ ಕುರಿತು ದೀಪಾ ಫಡ್ಕೆ ಬರಹ

Read More

ಗುಂಡುರಾವ್ ದೇಸಾಯಿ ಬರೆದ ಈ ಭಾನುವಾರದ ಕತೆ

ಸಂಜೆ ಅಪ್ಪ ಬಾಳೆಹಣ್ಣು ತಂದಿದ್ದನ್ನು ನೋಡಿದ್ದ. ಕೂಡಲೆ ರಾತ್ರಿ ಎದ್ದು ಡಜನ್ ಬಾಳೆ ಹಣ್ಣನ್ನು ತಿಂದು ಮಲಗಿದ. ಬೆಳಿಗ್ಗೆ ಹಣ್ಣು ಇಲ್ಲದನ್ನು ನೋಡಿ ಅಮ್ಮಗ ನೋಡಿ ಗಾಭರಿಯಾಯಿತು. ಬಾಳೆ ಹಣ್ಣು ತಿಂದವರಾರು? ಸಮುನ ಮೇಲೆ ಅನುಮಾನ ಬಂದು “ಸತ್ಯ ಹೇಳು ತಿಂದವನು ನೀನು ತಾನೆ?” ಎಂದು ತರಾಟೆ ತೆಗೆದುಕೊಂಡಳು. ಸಮು ನಡೆದ ವಿಷಯವನ್ನೆಲ್ಲ ಹೇಳಿ ಬೆಳಿಗ್ಗೆ ಮಲವಿಸರ್ಜನೆ ಮಾಡುವಾಗ ಸಿಕ್ಕ ಬೀಜಗಳನ್ನು ಖುಷಿಯಿಂದ ತೋರಿಸಿ “ಅಮ್ಮಾ, ನೋಡು ನನ್ನ ಹೊಟ್ಟೆಯಲ್ಲಿ ಹುಣಸೆ ಮರ ಬೆಳೆಯಲು ಸಾಧ್ಯನ ಇಲ್ಲ?” ಎಂದು ಗೆಲುವಿನಿಂದ ತೋರಿಸಿದ.
ಗುಂಡುರಾವ್‌ ದೇಸಾಯಿ ಬರೆದ ಮಕ್ಕಳ ಕತೆ “ಸಮು ಮತ್ತು ಹುಣಸೆ ಬೀಜ”

Read More

ಗೋ ಮಾಂಡೋ…. ಗೋ…!!: ಕಾರ್ತಿಕ್‌ ಕೃಷ್ಣ ಸರಣಿ

ಮೊದಲ ಪ್ರಯತ್ನ…. ಕೋಲನ್ನು ಹಿಡಿದು ಅಷ್ಟು ದೂರದಿಂದ ಓಡುತ್ತಾ ಬಂದ ಡೂಪ್ಲ್ಯಾಂಟೀಸ್‌ನನ್ನು ಎರಡನೇ ಸ್ಥಾನದಲ್ಲಿದ್ದ ಅಮೆರಿಕಾದ ಕೆಂಡ್ರಿಕ್ಸ್ ಹುರಿದುಂಬಿಸುತ್ತಿದ್ದ… ಪ್ರೋತ್ಸಾಹಿಸುತ್ತಿದ್ದ… ಎಲ್ಲರದ್ದೂ ಒಂದೇ ಚೀತ್ಕಾರ… “ಗೋ ಮಾಂಡೋ… ಗೋ..” ಮಾಂಡೋ… ಕೋಲನ್ನು ಬಾಕ್ಸ್‌ಗೆ ನೆಟ್ಟು ಗಾಳಿಯಲ್ಲಿ ಗಿರಕಿ ಹೊಡೆದು, ಅಡ್ಡ ಕೋಲನ್ನು ದಾಟಿ, ಇನ್ನೇನು ಕೈಯನ್ನು ಮೇಲೆತ್ತಬೇಕು.. ಮಾಂಡೋನೊಡನೆ ಅಡ್ಡ ಕೋಲೂ ಕೆಳಗುರುಳಿತ್ತು… ನಿಶ್ಯಬ್ದ… ಲಯಬದ್ಧವಾಗಿ ಚೀರುತ್ತಿದ್ದವರೆಲ್ಲಾ ‘ಓ….’ ಎಂದು ನಿಟ್ಟುಸಿರುಬಿಟ್ಟಿದ್ದರು.
ಕಾರ್ತಿಕ್‌ ಕೃಷ್ಣ ಬರೆಯುವ “ಒಲಂಪಿಕ್ಸ್‌ ಅಂಗಣ” ಸರಣಿ

Read More

ಮತ್ತೆ ಮಹಿಳಾ ದಿನಾಚರಣೆ ಬಂದಂತೆ…: ವಿನತೆ ಶರ್ಮಾ ಅಂಕಣ

ಇದೆ ಮೊದಲ ಬಾರಿ ಬಿಳಿಯರಲ್ಲದ ಒಬ್ಬ ಮಹಿಳೆ ಅಮೆರಿಕೆಯ ಅಧ್ಯಕ್ಷ ಚುನಾವಣೆಯನ್ನು ಎದುರಿಸುತ್ತಿರುವುದು ಬಹಳ ವಿಶೇಷ. ಈ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಎದುರಿಸುತ್ತಿರುವ ಎದುರಾಳಿ ಸಾಮಾನ್ಯರೇನಲ್ಲ. ಅವರು ಏನನ್ನು ಬೇಕಾದರೂ ಮಾಡುವ, ನ್ಯಾಯನೀತಿಗಳನ್ನು ನಗೆಪಾಟಲು ಮಾಡುವ ಸಾಮರ್ಥ್ಯವಿರುವ ಗಂಡು. ಈ ಗಂಡಿನ ಚಾಣಾಕ್ಷತೆಯನ್ನು ಕಮಲಾ ಹ್ಯಾರಿಸ್ ಹೇಗೆ ಸಂಭಾಳಿಸುತ್ತಾರೆ, ನಿಭಾಯಿಸುತ್ತಾರೆ, ಎದುರಿಸುತ್ತಾರೆ ಎನ್ನುವುದು ಅತ್ಯಂತ ಕುತೂಹಲಕಾರಿಯಾಗಿದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಕಿಶೋರ್‌ ಕುಮಾರ್‌ ಎಲ್ಲಿ ಹೋದ್ರು?: ಎಚ್. ಗೋಪಾಲಕೃಷ್ಣ ಸರಣಿ

ಆಗತಾನೇ ಅಡಿಗರ ಕವನಗಳನ್ನು ಓದಿ ಅರ್ಥ ಮಾಡಿಕೊಳ್ಳುವ ಪ್ರಯತ್ನ ಶುರು ಮಾಡಿದ್ದೆ. ಅವರ ಮತ್ತು ಇತರ ಕವಿಗಳ ಹಲವು ಪದ್ಯಗಳ ಆರಂಭಿಕ ಸಾಲು ನೆನಪಿನಲ್ಲಿ ಇತ್ತು. ಕಟ್ಟುವೆವು ನಾವು ಹೊಸ ನಾಡೊಂದನು…., ನಾನು ಮಾಯವಾದಿಯಾಗಿ ಬಂದೆ, ಇದು ನಮ್ಮ ಮನೆಯ ಕಥೆ, ಕಾಲವ ನಾನು ನಿಂತೆ, ಮರಳಿನಿಂದ ಎಣ್ಣೆ ಹಿಂಡುವ ಗಾಣ ಮೊದಲಾದ ಸಾಲುಗಳು ತಲೆಯಲ್ಲಿ ಆಳವಾಗಿ ಹುದುಗಿತ್ತು…… ಇವು ಅಲ್ಪ ಸಲ್ಪ ಬದಲಾವಣೆ ಒಂದಿಗೆ ಪೇಪರಿನ ಮೇಲೆ ಮೂಡಿದವು..
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ