Advertisement

Month: January 2025

ಯಾವ ಭಾಷೆಯಲ್ಲೂ “ಎಲ್ಲವೂ” ಇರುವುದಿಲ್ಲ: ಡಾ. ಎಚ್.ಎಸ್.‌ ಸತ್ಯನಾರಾಯಣ ಬರಹ

“ನೀನು ಇಂಗ್ಲಿಷನ್ನು ಕನ್ನಡ ಭಾಷೆಯ ಅಕ್ಷರ ಸಂಯೋಜನೆ ಜೊತೆ ಹೋಲಿಸಿ ಬರೆಯಬೇಡ. ನೀನು ಇಂಗ್ಲಿಷನ್ನು ಚೆನ್ನಾಗಿ ಕಲಿಯಬೇಕಾಗಿರುವುದು ನಿನ್ನ ಅಗತ್ಯಕ್ಕಾಗೇ ಹೊರತು ಇಂಗ್ಲಿಷಿನವರ ಅಗತ್ಯಕ್ಕಾಗಿ ಅಲ್ಲ. ನಿನಗೆ ಅದರಲ್ಲಿರುವ ಪ್ರಪಂಚದ ಜ್ಞಾನವೆಲ್ಲಾ ಬೇಕಾದರೆ ಈ ಸಬೂಬುಗಳನ್ನೆಲ್ಲಾ ಬಿಟ್ಟು ಕಷ್ಟಪಟ್ಟು ಕಲಿ‌ ಅದು ಬಿಟ್ಟು ಕನ್ನಡದಲ್ಲೇ ಎಲ್ಲಾ ಇದೆ ಎಂದು ತಿಳಿದು ಕೂಪಮಂಡೂಕ ಆಗಬೇಡ.”
ಡಾ. ಎಚ್.ಎಸ್.‌ ಸತ್ಯನಾರಾಯಣ ಅವರ “ತೇಜಸ್ವಿ ಪ್ರಸಂಗಗಳು” ಕೃತಿಯ ಕೆಲವು ಪ್ರಸಂಗಗಳು ನಿಮ್ಮ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸದಾಶಿವ್ ಸೊರಟೂರು ಕತೆ

ರಾತ್ರಿಯಾದರೂ ದೊಡ್ಡಪ್ಪ ಊರು ಮುಟ್ಟಿದ ಬಗ್ಗೆ ಫೋನ್ ಬರಲಿಲ್ಲ. ಆಯಾಸದಲ್ಲಿ ಮರೆತು ಹೋಗಿರಬೇಕೆಂದು ಸಮಾಧಾನಿಸಿಕೊಂಡೆ. ರಾತ್ರಿ ಎಷ್ಟೊ ಹೊತ್ತಿನವರೆಗೂ ನಿದ್ದೆ ನನ್ನ ಬಳಿ ಸುಳಿಯಲಿಲ್ಲ. ಇಂಥ ವಿಷಯಗಳಲ್ಲಿ ನಿದ್ದೆಯೆಂದೂ ಕೂಡ ಜೊತೆಗಾರನಾಗಿರುವುದಿಲ್ಲ. ಕಣ್ಣಿಗೆ ನಿದ್ದೆ ಹತ್ತಿಕೊಳ್ಳುವ ಹೊತ್ತಿಗೆ ಮುಂಜಾವು ಬಂದಿತ್ತು. ಇನ್ನೂ ಅರೆ ಮಂಪರು. ಗಾಢ ನಿದ್ದೆಯೇನ್ನಲ್ಲ. ಮೊಬೈಲ್ ರಿಂಗಣಸಿತು. ಹರೀಶ ಕಾಲ್ ಮಾಡ್ತಿದ್ದಾನೆ. ಏನು ಇಷ್ಟೊತ್ತಲ್ಲಿ ಫೋನ್? ಯಾಕೊ ಸಣ್ಣಗೆ ಭಯವಾಯಿತು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸದಾಶಿವ್ ಸೊರಟೂರು ಕತೆ “ಮುಗಿಲ ದುಃಖ”

Read More

ಕಾರ್ತಿಕ್‌ ಕೃಷ್ಣ ಬರೆಯುವ “ಒಲಂಪಿಕ್ಸ್‌ ಅಂಗಣ” ಸರಣಿ ಇಂದಿನಿಂದ

ಭವ್ಯವಾದ ಉತ್ಸವದಲ್ಲಿ ಪಾಲ್ಗೊಳ್ಳುವುದೇ ಹಲವಾರು ಕ್ರೀಡಾಪಟುಗಳ ಕನಸು. ಅದನ್ನು ಸಾಕಾರಗೊಳಿಸಲು ಹಗಲಿರುಳು ಶ್ರಮಿಸುವ ಎಷ್ಟೋ ಅಥ್ಲೀಟ್‌ಗಳಲ್ಲಿ ಗುರಿಮುಟ್ಟುವುದು ಬೆರಳೆಣಿಕೆಯ ಮಂದಿಯಷ್ಟೇ! ಉಳಿದವರು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದೆ ತಮ್ಮ ಸೌಭಾಗ್ಯವೆಂದು ಮುಂದಿನ ನಾಲ್ಕು ವರುಷಗಳನ್ನು ಇನ್ನಷ್ಟು ತಯಾರಿಯೊಂದಿಗೆ ಕಳೆಯುತ್ತಾರೆ. ಸೋತವರು ಒಂದೆಡೆಯಾದರೆ, ಕೂದಲೆಳೆಯ ಅಂತರದಲ್ಲಿ ಪದಕ ವಂಚಿತರಾದವರು ಇನ್ನೊಂದೆಡೆ. ಇಲ್ಲಿ ದಾಖಲೆಗಳು ಸೃಷ್ಟಿಯಾಗುತ್ತವೆ, ದಾಖಲೆಗಳು ಧೂಳಿಪಟವಾಗುತ್ತವೆ. ಕಾರ್ತಿಕ್‌ ಕೃಷ್ಣ ಹೊಸ ಸರಣಿ “ಒಲಂಪಿಕ್ಸ್‌ ಅಂಗಣ” ಪ್ರತಿ ಶನಿವಾರಗಳಂದು ನಿಮ್ಮ ಕೆಂಡಸಂಪಿಗೆಯಲ್ಲಿ

Read More

ಅಮೆರಿಕಾದ ವೈದ್ಯಕೀಯ ಸೇವೆ: ಎಂ.ವಿ. ಶಶಿಭೂಷಣ ರಾಜು ಅಂಕಣ

ಅಮೇರಿಕನ್ನರು ಹೆಚ್ಚು ಔಷಧಗಳನ್ನು ತೆಗೆದುಕೊಂಡರೂ, ಅವರು ಅದಕ್ಕೆ ಹೆಚ್ಚು ಬೆಲೆ ಪಾವತಿಸುತ್ತಾರೆ. ಅಮೇರಿಕಾದಲ್ಲಿ ಔಷಧಿಗಳ ಬೆಲೆಗಳು ಫ್ರಾನ್ಸ್‌ಗಿಂತ 50 ರಿಂದ 60 ಪ್ರತಿಶತದಷ್ಟು ಹೆಚ್ಚು ಮತ್ತು ಇಂಗ್ಲೆಡ್‌ಗಿಂತ ಅಥವಾ ಆಸ್ಟ್ರೇಲಿಯಾಕ್ಕಿಂತ ಎರಡು ಪಟ್ಟು ಹೆಚ್ಚು. ಏಕೆಂದರೆ ಅನೇಕ ದೇಶಗಳಲ್ಲಿ, ಸರ್ಕಾರಗಳು ಮೂಲಭೂತವಾಗಿ ಔಷಧಿಗಳ ಬೆಲೆಗಳನ್ನು ನಿಯಂತ್ರಿಸುತ್ತವೆ ಮತ್ತು ಜನ ಪಾವತಿ ಮಾಡುವ ಮೊತ್ತಕ್ಕೆ ಮಿತಿಗಳನ್ನು ನಿಗದಿಪಡಿಸುತ್ತವೆ.
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ

Read More

ಆಟದ ಸುತ್ತ ಒಂದು ಸುತ್ತು: ಚಂದ್ರಮತಿ ಸೋಂದಾ ಸರಣಿ

ಮಳೆಗಾಲ ಮುಗಿದ ಮೇಲೆ ಊರಿನ ಬೀದಿ ಶಾಲೆಯ ಅಂಗಳ, ದೇವಸ್ಥಾನದ ಮುಂದಿನ ಬಯಲು ಎಲ್ಲವೂ ನಮ್ಮ ಆಟಕ್ಕೆ ಸೂಕ್ತ ಎಂದು ಭಾವಿಸಿ ಆಡುತ್ತಿದ್ದೆವು. ಮುಟ್ಟಾಟ ಅಥವಾ ಹಿಡಿಯೋ ಆಟಕ್ಕೆ ಬಹಳ ಪ್ರಾಧಾನ್ಯವಿತ್ತು. ಅಟ್ಟಿಸಿಕೊಂಡು ಹೋಗಿ ಹಿಡಿಯುವುದು ಒಂಥರಾ ಖುಶಿ ಕೊಡುತ್ತಿತ್ತು. ಇದರ ಇನ್ನೊಂದ ರೂಪವೇ ʻಕೂತು ಹಿಡಿತಿಯೋ ನಿಂತು ಹಿಡಿತಿಯೋʼ ಎನ್ನುವುದು. ಕೇಳಿದಾಗ ನಿಂತು ಎಂದರೆ ನಿಂತಾಗ, ಇಲ್ಲವೆ ಕುಳಿತು ಎಂದರೆ ಕುಳಿತಾಗ ಅವರನ್ನು ಮುಟ್ಟಬೇಕು, ಆಗ ಅವರು ಆಟದಿಂದ ಹೊರಕ್ಕೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ