Advertisement

Month: January 2025

ಬಿ.ವಿ.ರಾಮಪ್ರಸಾದ್ ಬರೆದ ಈ ದಿನದ ಕವಿತೆ

“ಮುಚ್ಚಿರುವ ಆ ಲಗ್ಗೇಜು
ನನಗೆ ನೆನಪುಗಳ ಕಟ್ಟಿಟ್ಟ ಪೆಟ್ಟಿಗೆ.
ಇಷ್ಟೂ ವರ್ಷಗಳ ಪ್ರತಿ ಮಾತು ತೊದಲು,
ಹೆಜ್ಜೆ ಮುಗ್ಗರಿಕೆ, ಮುತ್ತು ಅಪ್ಪುಗೆ,
ಕೊನೆಯಿರದ ಪ್ರಶ್ನೆಗಳ ಸುರಿಮಾಲೆ,
ಮುಚ್ಚಿರುವ ನಡೆದು ಬಂದ ಹಾದಿ.”- ಬಿ.ವಿ.ರಾಮಪ್ರಸಾದ್ ಬರೆದ ಈ ದಿನದ ಕವಿತೆ

Read More

ಕತ್ತಿಯಲಗಿನ ಮೇಲಿನ ನಡಿಗೆ ಒಂಟಿ ನಡಿಗೆ: ಲಲಿತಾ ಪವಾರ ಕಾದಂಬರಿಯ ಪುಟಗಳು

ಕಮಲಮ್ಮನವರಿಗೆ ಕಸಿವಿಸಿಯಾಯಿತು. ತನ್ನ ಮಗಳ ಸೌಂದರ್ಯದ ಬಗ್ಗೆ ಇಡೀ ಕಾಲೇಜು, ನಮ್ ಏರಿಯಾದವರು ಮಾತನಾಡುತ್ತಾರೆಂದರೆ ನಮ್ಮ ಮನೆಯ ಮೇಲೆ ಅವರ ಕಣ್ಣು ಬಿದ್ದಿದೆ ಎಂದೇ ಅರ್ಥ. ನಾನಂತು ಕೆಲಸಕ್ಕೆ ಹೋಗಿ ಬಿಡುತ್ತೇನೆ, ಇವನು ಹೊರಗೆ ಹೊರಟರೆ ಮನೆಯಲ್ಲಿ ಕಾವ್ಯ ಒಬ್ಬಳೇ ಉಳಿದು ಬಿಡುತ್ತಾಳೆ. ಇಂದು ಸಂಜೆ ಮಹಡಿ ಮೇಲಿದ್ದಾಗ ಎದುರುಗಡೆ ಮನೆಯ ಹುಡುಗ ಇಣುಕಿಣುಕಿ ತನ್ನ ಮನೆಯನ್ನು ದೃಷ್ಟಿಸುತ್ತಿದ್ದುದು ಕಂಡು ಬಂದಿತ್ತು.
ಲಲಿತಾ ಪವಾರ ಹೊಸ ಕಾದಂಬರಿ “ಒಂಟಿ ನಡಿಗೆ”ಯ ಕೆಲವು ಪುಟಗಳು ನಿಮ್ಮ ಓದಿಗೆ

Read More

ಅಮೆರಿಕಾದ ಹುಡುಗ ರೈತನೇ!: ಗುರುಪ್ರಸಾದ ಕುರ್ತಕೋಟಿ ಸರಣಿ

ಹೋದಹೋದಂತೆ ತಾವು ಮಾಡುತ್ತಿದ್ದ ಕೆಲಸವನ್ನೂ ಬಿಟ್ಟು, ಇದನ್ನೇ ಮಾಡಲು ತೊಡಗಿ ಸಿಕ್ಕಾಪಟ್ಟೆ ದುಡ್ಡು ಮಾಡಿದರಂತೆ. ಇದ್ದ ಒಬ್ಬನೇ ಮಗನಿಗೂ ಕೂಡ ಬೇರೆ ಕಡೆ ಯಾಕೆ ಕೆಲಸ ಮಾಡ್ತೀಯಾ ನನ್ನ ಕೃಷಿ ಕೆಲಸವನ್ನೇ ಮಾಡು ಅಂತ ಅವನನ್ನೂ ತಮ್ಮ ಜೊತೆಗೆ ಸೇರಿಸಿಕೊಂಡರು. ಮಗ ಮದುವೆಯ ವಯಸ್ಸಿಗೆ ಬಂದಾಗ ಭಾರತದಲ್ಲೇ ಒಂದು ಹುಡುಗಿಯನ್ನೂ ಹುಡುಕಿದರಂತೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ತೆರಡನೆಯ ಬರಹ

Read More

ನಿಜವಾದ ಸೋದರಮಾವ: ಕೆ. ಸತ್ಯನಾರಾಯಣ ಕೃತಿಯ ಬರಹ

ಬೆಂಗಳೂರಿನಿಂದ ಗೌಹಾತಿಗೆ ಹೊರಟಿದ್ದ ರೈಲಿನಲ್ಲಿ ಒಬ್ಬ ಕನ್ನಡಿಗ ಪ್ರಯಾಣಿಕರ ಪರಿಚಯವಾಯಿತು. ಸದ್ಯದಲ್ಲೇ ಅವರು ನಿವೃತ್ತರಾಗಲಿದ್ದರು. ಬೆಂಗಳೂರಿಗೆ ಬಂದು ಬಂಧು-ಮಿತ್ರರ ಜೊತೆ ಬದುಕುತ್ತಾರೆ ಎಂಬುದು ನನ್ನ ನಿರೀಕ್ಷೆ. ಆದರೆ ಅವರು ಬೆಂಗಳೂರಿನಲ್ಲಿದ್ದ ಆಸ್ತಿಯನ್ನೆಲ್ಲ ಮಾರಿ, ಗೌಹಾತಿಯಲ್ಲೇ ಖಾಯಂ ಆಗಿ ನೆಲೆಸಲು ಹೊರಟಿದ್ದರು. ಈಗ ನಾವು ಅಲ್ಲಿ ಜೀವನ ಲಯಕ್ಕೆ ಹೊಂದುಕೊಂಡುಬಿಟ್ಟಿದ್ದೇವೆ. ನಮ್ಮ ತಂದೆ-ತಾಯಿ ಇಬ್ಬರೂ ಖಾಯಿಲೆ ಬಿದ್ದಾಗ ನಮಗಾಗಿ ಬಂದವರು ನೆಂಟರಿಷ್ಟರಲ್ಲ, ನಮ್ಮ ಕಾಲೊನಿಯ ಅಸ್ಸಾಮಿ ಬಂಧುಗಳು. ಅವರಿಗೆ ಕೃತಜ್ಞತೆ ಸಲ್ಲಿಸುವುದೆಂದರೆ, ಅವರೊಡನೆಯೇ ಮುಂದೆ ಬದುಕುವುದು ಎಂದುಬಿಟ್ಟರು.
ಕತೆಗಾರ ಕೆ. ಸತ್ಯನಾರಾಯಣ ಅವರ “ನನ್ನ ಪುಸ್ತಕಗಳ ಆತ್ಮಚರಿತ್ರೆ” ಕೃತಿಯ ಒಂದು ಬರಹ ನಿಮ್ಮ ಓದಿಗೆ

Read More

ಸುಮಾ ಸತೀಶ್‌ ಹೊಸ ಸರಣಿ “ರಂಗಿನ ರಾಟೆ” ಆರಂಭ…

ಹಳ್ಳಿಯೂರ ಬದುಕು ಹಗಲು-ರಾತ್ರಿಯ ಪರಿವಿಲ್ಲದೆ ಕತೆ ನೇಯುವ ಕಥಾಕಣಜ. ಸುಮಾ ಸತೀಶ್ ಇಂಥ ಕಣಜದ ಹತ್ತು ಹಲವು ಕತೆಗಳನ್ನು‌ “ರಂಗಿನ ರಾಟೆ” ಸರಣಿಯಲ್ಲಿ ಪ್ರತೀ ಬುಧವಾರ ಕೆಂಡಸಂಪಿಗೆಯ ಓದುಗರ ಮುಂದೆ ಇಡಲಿದ್ದಾರೆ. ಈ ಹೊಸ ಸರಣಿಯ ಮೊದಲ ಕಂತು ಇಲ್ಲಿದೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ