Advertisement

Month: January 2025

ಪರ್ವತಗಳು ಬರಹಗಾರರಿಗೆ ಉಪಕಾರಿಯಾಗಿರುತ್ತವೆ..: ಖಂಡಿಗೆ ಮಹಾಲಿಂಗ ಭಟ್ ಬರಹ

‘ಯಾವನು ಬೆಟ್ಟಗಳಿಗೆ ಹೋಗುವನೋ, ಅವನು ತನ್ನ ತಾಯಿಯಲ್ಲಿಗೆ ಹೋಗುವನು’ ಎಂಬುದಾಗಿ ಕಿಪ್ಲಿಂಗ್ ಬರೆದಿರುವನು ಮತ್ತು ಅವನು ಇದರಿಂದ ಹೆಚ್ಚಿನ ಸತ್ಯವನ್ನು ಬರೆದುದು ಅಪರೂಪ. ಯಾಕೆಂದರೆ ಬೆಟ್ಟಗಳಲ್ಲಿ ಜೀವಿಸುವುದು ತನ್ನ ತಾಯಿಯ ಎದೆಯಲ್ಲಿ ಹುದುಗಿಕೊಂಡು ಮಲಗಿದಷ್ಟು ಹಿತಕರವೆನಿಸುತ್ತದೆ. ಪ್ರತಿ ಬಾರಿ ನಾನು ಬೇರೆಡೆಗೆ ಹೋಗಿಪುನಃ ಹಿಂದಿರುಗುವಾಗ ಮನಸ್ಸಿಗೆ ತುಂಬಾ ಹಿತಕರ ಹಾಗೂ ಅಪ್ಯಾಯಕರವೆನಿಸುತ್ತದೆ.
ರಸ್ಕಿನ್‌ ಬಾಂಡ್‌ ಅವರ “ರೇನ್‌ ಇನ್‌ ದ ಮೌಂಟೇನ್ಸ್‌” ಕೃತಿಯ ಒಂದು ಬರಹವನ್ನು ಡಾ. ಖಂಡಿಗೆ ಮಹಾಲಿಂಗ ಭಟ್ ಕನ್ನಡಕ್ಕೆ ಅನುವಾದಿಸಿದ್ದು, ನಿಮ್ಮ ಓದಿಗೆ ಇಲ್ಲಿಗೆ

Read More

ಶಾಲೆ ಬಿಡಿಸಿದ ಲವ್ ಲೆಟರ್…!!: ಬಸವನಗೌಡ ಹೆಬ್ಬಳಗೆರೆ ಸರಣಿ

ಒಂಬತ್ತನೇ ಕ್ಲಾಸಲ್ಲಿ ನಾನು ಸಾಕಷ್ಟು ಓದುತ್ತಿದ್ದೆ. ಈ ಓದಿನ ಫಲ ನನಗೆ ಫಲಿತಾಂಶದಲ್ಲಿ ಸಿಕ್ಕಿತ್ತು. ಮೂರೂ ಸೆಕ್ಷನ್‌ಗಳಿಗೂ ಸೇರಿ ಕೊಡುತ್ತಿದ್ದ ರ್ಯಾಂಕಿನಲ್ಲಿ ನನಗೆ ಎರಡನೇ ರ್ಯಾಂಕ್ ಲಭಿಸಿತ್ತು. ಕನ್ನಡ ಮೀಡಿಯಂನ ಶಿವಶಂಕರ್ ಪ್ರಥಮ ರ್ಯಾಂಕ್ ಪಡೆದಿದ್ದ. ನನಗೆ ಎರಡು ಅಂಕಗಳಲ್ಲಿ‌ ಪ್ರಥಮ ರ್ಯಾಂಕ್ ಮಿಸ್ಸಾಗಿತ್ತು. ಇದರ ಬಗ್ಗೆ ಅಷ್ಟು ಫೀಲ್ ಆಗಿರಲಿಲ್ಲ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಇಪ್ಪತ್ತೆರಡನೆಯ ಕಂತು ನಿಮ್ಮ ಓದಿಗೆ

Read More

ಭಕ್ತವತ್ಸಲ ಸಿದ್ಧಗಂಗಾ ಶ್ರೀಗಳು: ರಂಜಾನ್ ದರ್ಗಾ ಸರಣಿ

ಎಲ್ಲ ಜಾತಿ ಜನಾಂಗಗಳ ಮಕ್ಕಳ ಶೈಕ್ಷಣಿಕ ಏಳ್ಗೆಯೆ ಅವರ ಬಹುದೊಡ್ಡ ಗುರಿಯಾಗಿತ್ತು. ಪ್ರತಿ ವರ್ಷ ಹತ್ತುಸಾವಿರ ಮಕ್ಕಳನ್ನು ಸಾಕುತ್ತ, ಅವರಿಗೆ ಯಾವುದೇ ರೀತಿಯ ಕೊರತೆಯಾಗದಂತೆ ನೋಡಿಕೊಳ್ಳುತ್ತ, ಶೈಕ್ಷಣಿಕವಾಗಿ ಅವರನ್ನು ಉನ್ನತ ಸ್ಥಾನಕ್ಕೇರಿಸುವುದು ಸಾಮಾನ್ಯ ಮಾತಲ್ಲ. ಅವರ ಮಠದ ಎಲ್ಲ ವಿಭಾಗಗಳಲ್ಲಿ ನಿಷ್ಠೆಯಿಂದ ಎಲೆ ಮರೆಯ ಕಾಯಿಯಂತೆ ಕಾರ್ಯನಿರ್ವಹಿಸುವ ಪ್ರತಿಯೊಬ್ಬರೂ ಗೌರವಕ್ಕೆ ಅರ್ಹರಾಗಿದ್ದಾರೆ. ಅವರ ಮಠದ ಆವರಣವು ಪುಟ್ಟ ಭಾರತವೇ ಆಗಿದೆ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ಕಾರ್ತಿಕ್ ಕೃಷ್ಣ ಬರೆದ ಈ ದಿನದ ಕವಿತೆ

“ಇನ್ನೂ ಕೊಂಚ ಸುರಿಯಲಿ ಬಿಡು,
ಮಣ್ಣಿನ ಕೆಂಪು ಹರಡಲಿ ಬಿಡು,
ಇನ್ನೇನು ಬಾಡುವ ದಾಸವಾಳಕೆ
ಸಿಹಿಮುತ್ತಿನ ವಿದಾಯವ ಹೇಳಲು ಬಿಡು!”-ಕಾರ್ತಿಕ್ ಕೃಷ್ಣ ಬರೆದ ಈ ದಿನದ ಕವಿತೆ

Read More

ಚಕ್ರವ್ಯೂಹದೊಳಗಿನ ಮಾಯಾಲೋಕ…: ಗೊರೂರು ಶಿವೇಶ್‌ ಬರಹ

ಕಾದಂಬರಿಯ ಕೊನೆಯಲ್ಲಿ ಆ ಕಡತ ಮುಸುಕುಧಾರಿಗಳ ಕೈಗೆಸಿಕ್ಕು ಅದರ ಮಹತ್ವ ತಿಳಿಯದ ಅವರು ನದಿನೀರಿಗೆ ಎಸೆದು ಅದು ಬಿಡಿಬಿಡಿಯಾಗಿ ಬಿದ್ದು ನೀರುಪಾಲಾಗುತ್ತದೆ. ಇದ್ದ ಒಂದು ಪ್ರತಿಯೂ ಮಾಯವಾದರೂ ಎಲ್ಲಿಯಾದರೂ ಮತ್ತೊಂದು ಪ್ರತಿಯನ್ನು ಹುಡುಕಿಯೆ ತೀರುತ್ತೇನೆ ಮತ್ತು ಅದರ ಸಹಾಯದಿಂದ ರತ್ನಮಾಲಾ ವಜ್ರವನ್ನು ಪಡೆದೆ ತೀರಬೇಕೆಂದು, ಮುಂದೆ ಅದನ್ನು ಹಂಚಿಕೊಳ್ಳಬಹುದೆಂದು ರಾಜಪ್ಪ ತಿಳಿಸಿ, ಅದಕ್ಕೆ ಮೂವರು ಒಪ್ಪಿ ಜುಗಾರಿಕ್ರಾಸ್‍ನ ಬಸ್ ಹತ್ತುವುದರೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ.
ನೆನ್ನೆ ಪೂರ್ಣಚಂದ್ರ ತೇಜಸ್ವಿಯವರ ಜನ್ಮದಿನ, ಅದರ ನಿಮಿತ್ತ ತೇಜಸ್ವಿಯವರ “ಜುಗಾರಿ ಕ್ರಾಸ್” ಕೃತಿಯ ಕುರಿತು ಗೊರೂರು ಶಿವೇಶ್‌ ಬರಹ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ