Advertisement

Month: January 2025

ಕೋಟಿಗೊಬ್ಬರು “ಎಂ.ಎಸ್.ರಾಮಯ್ಯ”‌: ಎಚ್. ಗೋಪಾಲಕೃಷ್ಣ ಸರಣಿ

ಮತ್ತಿಕೆರೆ ಎನ್ನುವ ಬೆಂಗಳೂರಿನ ಹೊರ ಮೂಲೆಯಲ್ಲಿದ್ದ ಒಂದು ಪುಟ್ಟ ಹಳ್ಳಿ ಇವತ್ತು ಜಗತ್ತಿನ ಒಂದು ಪ್ರಮುಖ ಸ್ಥಳವಾಗಿ ಮಾರ್ಪಾಟು ಆಗಿರುವಲ್ಲಿ ಎಂ ಎಸ್ ರಾಮಯ್ಯ ಅವರ ಕಾರ್ಯಕ್ಷೇತ್ರ ಎದ್ದು ಕಾಣುತ್ತದೆ. ಮತ್ತಿ ಕೆರೆ ಸಂಪಂಗಪ್ಪ ರಾಮಯ್ಯ ಹೀಗೆ ಜಗತ್ತಿನ ಭೂಪಟದಲ್ಲಿ ಬೆಂಗಳೂರು ಮತ್ತು ಮತ್ತಿ ಕೆರೆಗೆ ಒಂದು ವಿಶಿಷ್ಠ ಸ್ಥಾನ ದೊರಕಿಸಿ ಕೊಟ್ಟಿದ್ದಾರೆ. ಬಹುಶಃ ಜಗತ್ತಿನಲ್ಲಿ ಇಂತಹ ಉನ್ನತ ಮಟ್ಟಕ್ಕೆ ಏರಿದ ವ್ಯಕ್ತಿ ಅಪರೂಪದಲ್ಲಿ ಅಪರೂಪವೇ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ನಾಲ್ಕನೆಯ ಕಂತು ನಿಮ್ಮ ಓದಿಗೆ

Read More

ಸಾಂಸ್ಕೃತಿಕ ಸಂಘರ್ಷಗಳ ಕುಲುಮೆಯ ‘ರಕ್ತ ವಿಲಾಪ’: ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಬರಹ

ಸತ್ಯ ಎಲ್ಲರಿಗೂ ಕಹಿಯಾಗಿರುವುದು. ಆದರೆ ಅದರ ಸತ್ವ ಅರಿತವನು ಸಂಶೋಧನೆಗೆ ನಿಷ್ಠೆ ತೋರಿಸುತ್ತಾನೆ. ಅರಿಯದವನು ಶತ್ರುವಾಗುತ್ತಾನೆ. ಇದೇ ಪರಿಸ್ಥಿತಿ ಯುವಕನದ್ದು ಹಾಗೂ ಸಮಾಜದ್ದು ಎಂದು ಘಂಟಿಯವರು ಹಾಗೂ ವಿಸಾಜಿಯವರು ಘಂಟಾಘೋಷವಾಗಿ ಪಾತ್ರಗಳ ಮೂಲಕ ಮಾತಾಡಿಸುತ್ತಾರೆ.
ವಿಕ್ರಮ ವಿಸಾಜಿ ರಚಿತ, ಶಂಕ್ರಯ್ಯ ಆರ್ ಗಂಟಿ ನಿರ್ದೇಶನದ ‘ರಕ್ತ ವಿಲಾಪ’ ನಾಟಕದ ಕುರಿತು ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್ ಬರಹ

Read More

ಕಾಡುವ ಪ್ರಶ್ನೆಗಳ ಕಾಡಿನಲ್ಲಿ ನೀಲಿ: ಸುಧಾ ಆಡುಕಳ ಅಂಕಣ

ಸೀತಜ್ಜಿ, ಗೌರಜ್ಜಿ, ಅಮ್ಮಣ್ಣೆಜ್ಜಿ ಇವರ ಕತೆಗಳೂ ಇದಕ್ಕಿಂತ ಬೇರೆಯೇನಿರಲಿಲ್ಲ. ಅವರೆಲ್ಲರೂ ತಮ್ಮ ಮದುವೆಯ ಕತೆಯನ್ನು ಯಾವುದೇ ವಿಷಾದಗಳಿಲ್ಲದೇ ಹೇಳಿಕೊಳ್ಳುತ್ತಿದ್ದರು. ಆದರೆ ಇವರ ನಂತರದ ತರುವಾಯದವರಾದ ಕೆಂಪಿ, ಗಣಪಿ, ನಾಗವೇಣಿಯರು ತಮ್ಮ ಮದುವೆಯ ಕತೆಯನ್ನು ಇಷ್ಟು ತಣ್ಣಗೆ ಹೇಳುತ್ತಿರಲಿಲ್ಲ. ಅವರ ಮಾತುಗಳಲ್ಲಿ ಕಹಿ, ಸಿಟ್ಟು, ಹತಾಶೆ ಎಲ್ಲವೂ ಮಡುಗಟ್ಟಿದ್ದವು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಹದಿನೆಂಟನೆಯ ಕಂತು ನಿಮ್ಮ ಓದಿಗೆ

Read More

ಲೂವ ಗ್ಯಾಲರಿಯೊಳಗಿನ ಕಲಾಲೋಕ…: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ಮೊದಲ ನೋಟಕ್ಕೆ ಅತ್ಯಂತ ಮೃದುವಾದ ಮೆತ್ತನೆ ಹಾಸಿಗೆ ಮೇಲೆ ಮಲಗಿರುವ ಬೆತ್ತಲೆ ಮಹಿಳೆಯಂತೆ ಕಾಣಿಸುತ್ತದೆ. ಆದರೆ ಅದು ನಿಜವಾಗಿ ಪುರುಷನ ಆಕೃತಿ, ಇನ್ನಷ್ಟು ತೀವ್ರವಾಗಿ ಕಣ್ಣಾಡಿಸಿದಾಗ ವಾಸ್ತವವಾಗಿ ಅದು ಗಂಡು ಮತ್ತು ಹೆಣ್ಣಿನ ಲೈಂಗಿಕ ಅಂಗಗಳನ್ನು ಹೊಂದಿರುವ ಹರ್ಮಾಫ್ರೋಡಿಟಿಸ್ ದೇವ/ದೇವತೆಯ ಆಕೃತಿಯಾಗಿದೆ (ಹೆಲೆನಿಸ್ಟಿಕ್ ಕಂಚಿನ ರೋಮನ್ ನಕಲು).
ಪ್ಯಾರಿಸ್‌ನಲ್ಲಿ ಓಡಾಡಿದ ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನದ ಮೂರನೆಯ ಭಾಗ ನಿಮ್ಮ ಓದಿಗೆ

Read More

ಬೇರು – ಬಿಳಲು: ಸುಮಾ ಸತೀಶ್ ಸರಣಿ

ಹೊಸ್ದಾಗಿ ಮದ್ವೆ ಆಗಿದ್ದ ಅಳಿಯ ಅತ್ತೆ ಮನೇಗೆ ಬಂದ್ನಂತೆ. ಅತ್ತೆ ಕಡುಬು ಮಾಡಿದ್ರು. ತೆಳ್ಳಗೆ, ಸಣ್ಣವು. ಹೊಸ ಅಳಿಯನಿಗೇಂತ ಕಷ್ಟ ಪಟ್ಟು ಸಣ್ಣ ಸಣ್ಣಕೆ ಮಾಡಿದ್ರು. ಅಳಿಯನ ತಟ್ಟೇಗೆ ಬಡಿಸಿದ್ರು. ಅವ್ನು ಒನೊಂದು ಸತೀಗೆ ಒಂದು ಗುಳುಂ ಮಾಡ್ತಿದ್ದ. ಅಳಿಯನ ಅಪ್ಪ ಥೋ ನಮ್ ಮರ್ವಾದೆ ತೆಗೀತಾವ್ನೆ ಅಂತ ಮೆಲ್ಲಕೆ ಮೂಗ್ಸನ್ನೆ ಮಾಡೀರು. ಒಂದು ಮುರಿದು ಎರ್ಡು ಭಾಗ ಮಾಡಿ ತಿನ್ನಾಕೆ ಸೈಗು (ಸನ್ನೆ) ಮಾಡಿದ್ರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಚಿಕ್ಮಾಲೂರಿನ ಅಜ್ಜ-ಅಜ್ಜಿಯರ ಕುರಿತ ಬರಹ ಇಲ್ಲಿದೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ