Advertisement

Month: January 2025

ಡಾಗ್ ಡೆಂಟಿಸ್ಟ್ಸ್!…: ಪೂರ್ಣೇಶ್‌ ಮತ್ತಾವರ ಸರಣಿ

ಏಕೆಂದರೆ, ನಾವು ಆರಂಭದಲ್ಲಿ ಅದರ ಕಣ್ಣು, ಕಿಡ್ನಿ, ಹೃದಯ,ಶ್ವಾಸಕೋಶ ಹೀಗೆ ದೇಹದ ಎಲ್ಲಾ ಭಾಗಗಳನ್ನು ಪಾರ್ಟ್ ಬೈ ಪಾರ್ಟ್ ಡಿಸೆಕ್ಷನ್ ಮಾಡಿ, ಅವುಗಳನ್ನು ಫಾರ್ಮಲಿನ್ ದ್ರಾವಣ ಹಾಕಿ ಗಾಜಿನ ಜಾರಿನಲ್ಲಿ ಪ್ಯಾಕ್ ಮಾಡಿ, ಮಣಿಪಾಲದಲ್ಲಿ ಮನುಷ್ಯರ ದೇಹದ ಭಾಗಗಳನ್ನು ಪ್ರದರ್ಶನಕ್ಕಿಟ್ಟಂತೆ ಲ್ಯಾಬ್‌ನಲ್ಲಿ ಪ್ರದರ್ಶನಕ್ಕಿಡಬೇಕೆಂದು ಆಸೆಪಟ್ಟಿದ್ದೆವು. ನೋಡಿದರೆ, ನಮ್ಮ ಪುಣ್ಯಕ್ಕೋ ಅಥವಾ ನಾಯಿಯ ಪುಣ್ಯಕ್ಕೋ ಅದರ ಬೋಟಿ ಖಲೀಜಾಗಳೊಂದೂ ಇರದೆ ಅದರ ಮುಖದ ಸ್ವಲ್ಪ ಭಾಗ ಬಿಟ್ಟರೆ ಉಳಿದ ಭಾಗವೆಲ್ಲಾ ಉಪ್ಪು ಮೀನು ಒಣಗಿದಂತೆ ಒಣಗಿದ ಸ್ಥಿತಿಯಲ್ಲಿತ್ತು!
ಪೂರ್ಣೇಶ್‌ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿ

Read More

ಪರಿಸರ ರಕ್ಷಣೆಯ ಕಠಿಣ ವಜ್ರ ನಮೀಬಿಯಾ: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ

ನಿಸರ್ಗವನ್ನು ಆಧಾರವಾಗಿಟ್ಟುಕೊಂಡ ಜೀವನಶೈಲಿಯನ್ನು ಈಗಲೂ ಉಳಿಸಿಕೊಂಡಿರುವ ಅಲ್ಲಿನ ಹಲವು ಸಮುದಾಯಗಳು ಬದುಕನ್ನು ನಡೆಸುವುದರ ಜೊತೆಗೆ ಪ್ರಕೃತಿಯನ್ನೂ ಉಳಿಸಿ, ಬೆಳೆಸುತ್ತಿವೆ. ಇದರಿಂದಾಗಿ ನಮೀಬಿಯಾದ ಪ್ರವಾಸೋದ್ಯಮವೂ ಸಹ ಅಭಿವೃದ್ಧಿ ಕಂಡಿದೆ. ಪ್ರವಾಸೋದ್ಯಮಕ್ಕೆ ದೊರಕಿರುವ ಉತ್ತೇಜನದಿಂದಾಗಿ ಈ ಬುಡಕಟ್ಟು ಸಮುದಾಯಗಳು ಸಶಕ್ತಗೊಳ್ಳುತ್ತಿವೆ. ನಮೀಬಿಯಾದ ಬುಡಕಟ್ಟು ಸಮುದಾಯಗಳು ಅಲ್ಲಿನ ನಿಸರ್ಗವನ್ನು ಸಂರಕ್ಷಿಸಲು ನೀಡಿರುವ ಕೊಡುಗೆಯನ್ನು ವಿಶ್ವ ವನ್ಯಜೀವಿ ನಿಧಿ ಎಂಬ ಅಂತಾರಾಷ್ಟ್ರೀಯ ಸಂಘಟನೆಯು ಗುರುತಿಸಿದೆ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ

Read More

ಅಂಕಿಗಳ ಲೋಕದಲ್ಲಿ: ಸುಮಾವೀಣಾ ಸರಣಿ

‘420’ ಕೂಡ ಒಳ್ಳೆಯ ಸಂಖ್ಯೆ. ನಮ್ಮ ಇಂಡಿಯನ್ ಪಿನೆಲ್ ಕೋಡ್‌ನಲ್ಲಿ ಚೀಟಿಂಗ್ ಫೋರ್ಜರಿ ಕೇಸುಗಳು ದಾಖಲಾಗುವುದು ‘420’ ಸೆಕ್ಷನ್ನಿನ ಅಡಿಯಲ್ಲಿ. 1860 ಅಕ್ಟೋಬರ್‌ 6 ಇಂಡಿಯನ್ ಪಿನಲ್ ಕೋಡ್ ಬ್ರಿಟಿಷರಿಂದ ರಚಿಸಲ್ಪಟ್ಟದ್ದು. ಇದರಲ್ಲಿ ಎಲ್ಲಾ ರೀತಿಯ ಪ್ರಕರಣಗಳು ಬರುತ್ತವೆ. ಮೋಸ ಮಾಡಿದಾಗ ಹಣದ ವಿಚಾರದಲ್ಲಿ, ಆಸ್ತಿಗೆ ಸಂಬಂಧಿಸಿದಂತೆ ಮೋಸ ಮಾಡಲು ಪ್ರಚೋದನೆ ನೀಡಿದ ಪ್ರಕರಣಗಳಲ್ಲಿ ಸಿಲುಕಿದಾಗ ಆ ವ್ಯಕ್ತಿಗೆ ‘420’ ಕೇಸು ದಾಖಲಾಗುತ್ತದೆ. ಇದರಲ್ಲಿ 7 ವರ್ಷಗಳವರೆಗೂ ಶಿಕ್ಷೆ ಆಗುವ ಸಾಧ್ಯತೆ ಇರುತ್ತದೆ. ಹೀಗಾಗಿ ‘420’ ನಂಬರನ್ನು ಬಯ್ಯುತ್ತಾರೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಐದನೆಯ ಬರಹ

Read More

‘ಗಣಿತೀಯ ಗೀತರಚನೆಕಾರ’: ಎಸ್. ಜಯಶ್ರೀನಿವಾಸ ರಾವ್ ಸರಣಿ

“ನಾನು ಆಲಿಸುವೆ. ನಾನು ಆಲಿಸುವೆ, ನಾನು ವೀಕ್ಷಿಸುವೆ. ಸೃಜನಶೀಲತೆಗೆ ಯಾವುದೇ ನಿಯಮಗಳು ತಿಳಿದಿಲ್ಲ. ಯಾರೋ ಹೇಳಿದ ಯಾವುದೋ ಒಂದು ಮಾತಿನಿಂದ ಅಥವಾ ನೀವು ನೋಡಿದ ಯಾವುದೋ ಒಂದು ಮುಖದಿಂದ ಕಾದಂಬರಿಯ ಕಲ್ಪನೆಯನ್ನು ನೀವು ಪಡೆಯಬಹುದು. ಯಹೂದಿ ಧಾರ್ಮಿಕ ಪಂಡಿತನೊಬ್ಬ ನನಗೆ ಹೇಳಿದ ಒಮ್ಮೆ, ದೇವರು ಮೋಶೆಯ ಜತೆ ಆ ಪೊದೆಯಲ್ಲಿ ಮಾತನಾಡಿದಾಗ ಗುಡುಗಿನ ಧ್ವನಿಯಲ್ಲಿ ಮಾತನಾಡಿರಲಿಲ್ಲ, ಬಲು ಕ್ಷೀಣವಾದ ಧ್ವನಿಯಲ್ಲಿ ಮಾತನಾಡಿದ್ದ.”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ಅಬ್ದುಲ್ ರಶೀದ್ ಬರೆದ ಈ ಭಾನುವಾರದ ಕತೆ

‘ನೀನು ಏನು ಬೇಕಾದರೂ ಮಾಡು, ಆದರೆ ನಿನ್ನ ಅವೆರೆಡನ್ನು ಮಾತ್ರ ಸಾರ್ವಜನಿಕವಾಗಿ ತೋರಿಸಬೇಡ ಎಂದು ಎಷ್ಟೇ ಬೇಡಿಕೊಂಡರೂ ಸಾಕುಂತಲೆ ರೊಚ್ಚಿಗೆದ್ದಾಗಲೆಲ್ಲಾ ಬೇಕಂತಲೇ ಅವುಗಳನ್ನು ದೊಡ್ಡದಾಗಿ ತೋರಿಸಿ ನನ್ನನ್ನು ಬೆಂಕಿಯ ಬಾಣಲೆಯಲ್ಲಿ ಹುರಿಯುತ್ತಿದ್ದಳು. ಅವಳಿಗೆ ನಿಜವಾಗಿಯೂ ಸಿಟ್ಟು ಬಂದಿತ್ತು. ಆಕೆಗೆ ನಾನು ಅಂದರೆ ಬಹಳ ದೊಡ್ಡ ಎಡವಟ್ಟುಗಳ ಒಂದು ದೊಡ್ಡ ಮೊತ್ತ. ಒಂದು ಎಡವಟ್ಟಿನ ನಂತರ ಇನ್ನೊಂದು ಅದರ ನಂತರ ಮತ್ತೊಂದು ಮಗದೊಂದು ನೂರಾ ಒಂದು….
ಅಬ್ದುಲ್ ರಶೀದ್ ಬರೆದ ಈ ಭಾನುವಾರದ ಕಥೆ “ಒಂಟಿ ಪಿಶಾಚಿ” ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ