Advertisement

Month: January 2025

ಕನ್ನಡ ಭಾಷೆಗೆ ಗೆಜ್ಜೆಯ ದಾರಿ… ಭಾವನೃತ್ಯದ ಸುಂದರ ಪರಿ: ಎಲ್.ಜಿ.ಮೀರಾ ಅಂಕಣ

ಭಾವಗೀತೆಯು ಕನ್ನಡ ನವೋದಯ ಸಾಹಿತ್ಯದ(1870-1940) ಸಂದರ್ಭದಲ್ಲಿ ಹುಟ್ಟಿತಲ್ಲವೇ. ಆ ಕಲಾಪ್ರಕಾರವು ಅನೇಕ ಕವಿಗಳ ಸಾಹಿತ್ಯವನ್ನು ಗೀತೆಗಳ ಮೂಲಕ, ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರವಲ್ಲ, ಸಾಹಿತ್ಯಕ್ಷೇತ್ರದ ಆಚೆಗಿನ ದೊಡ್ಡ, ಅದರಲ್ಲೂ ಅನಕ್ಷರಸ್ಥ ಜನಸಮುದಾಯಕ್ಕೂ ತಲುಪಿಸುವ ಕೆಲಸ ಮಾಡಿತು. ನಮ್ಮ ಸಂಸ್ಕೃತಿಯು ಸಾಹಿತ್ಯಪ್ರಸರಣದಲ್ಲಿ ಭಾವಗೀತೆಯನ್ನು ದುಡಿಸಿಕೊಂಡಂತೆ ಭಾವನೃತ್ಯವನ್ನು ಸಹ ದುಡಿಸಿಕೊಳ್ಳಬಹುದು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ಎಂ.ಎಸ್.‌ ರಾಮಯ್ಯ ಕುರಿತು ಮತ್ತಷ್ಟು…: ಎಚ್. ಗೋಪಾಲಕೃಷ್ಣ ಸರಣಿ

ಇನ್ನೊಂದು ಪ್ರಚಲಿತ ಇದ್ದ ಗಾಳಿಮಾತು ಎಂದರೆ ಅವರು ಕಟ್ಟಡ ನಿರ್ಮಾಣಕ್ಕೆ ಸಿಮೆಂಟ್ ಬೇಕು ಅಂದರೆ ಸಿಮೆಂಟ್ ಕಾರ್ಖಾನೆಯನ್ನು ಶುರುಮಾಡುತ್ತಾರೆ, ಕಬ್ಬಿಣ ಬೇಕು ಅಂದರೆ ಕಬ್ಬಿಣ ತಯಾರಿಕೆ ಫ್ಯಾಕ್ಟರಿ ಶುರುಮಾಡ್ತಾರೆ ಎನ್ನುವಂತಹ ರೆಕ್ಕೆ ಪುಕ್ಕ ಹುಟ್ಟಿಸಿಕೊಂಡ ಸುದ್ದಿಗಳು. ಬಿಲ್ಡಿಂಗ್ ಕಟ್ಟಲು ಇಟ್ಟಿಗೆ ಬೇಕು ತಾನೇ ಇವರದ್ದು ಇಟ್ಟಿಗೆ ಉದ್ಯಮ ಇತ್ತು ಮತ್ತು ಇದರಿಂದ ಈ ಸುದ್ದಿ ಹುಟ್ಟಿತೋ ತಿಳಿಯದು. ಇದಕ್ಕೆ ಪರ್ಯಾಯವಾಗಿ ಒಂದು ಜೋಕು ಹುಟ್ಟಿತ್ತು….
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ತೈದನೆಯ ಕಂತು ನಿಮ್ಮ ಓದಿಗೆ

Read More

ಮೂಳೆ ಮಾಂಸದ ತಡಿಕೆ: ಸುಧಾ ಆಡುಕಳ ಅಂಕಣ

ಇವಳ ಜತೆಯಲ್ಲಿ ನಡೆಯುವ ಗೆಳತಿಯರು ಮೈ ಕೈ ತಾಗಿಸಿಕೊಳ್ಳದೇ ದೂರದೂರವೇ ನಡೆಯುವಾಗ ನೀಲಿಗೆ ಅಳುವೇ ಬಂದಂತಾಗಿತ್ತು. “ನಾ ಹೇಳದಿದ್ರೆ ನಿಮಗೆಲ್ಲ ನಾ ಮುಟ್ಟು ಅಂತ ಗೊತ್ತಾಗ್ತಾನೇ ಇರಲಿಲ್ಲ. ದಿನಾ ಶಾಲೇಲಿ ಅದೆಷ್ಟು ಹುಡುಗಿರು ಮುಟ್ಟಾಗಿ ಬರ್ತಾರೋ ಗೊತ್ತಿದ್ಯಾ?” ಎಂದು ಅವರನ್ನು ತಿದ್ದಲು ನೋಡಿದಳು. ಅದಕ್ಕವರು ಜಗ್ಗದೇ, “ಗೊತ್ತಾಗದಿದ್ರೆ ದೋಷ ಇಲ್ಲಾಂತ ನಮ್ಮಜ್ಜಿ ಹೇಳಿದಾರೆ. ಗೊತ್ತಾಗಿಯೂ ಮೈಲಿಗೆಯಾದ್ರೆ ಅದು ನಮ್ಮ ತಪ್ಪು.” ಎಂದು ಬೇರೆಯದೇ ವಾದ ಹೂಡಿದರು. ಬಸ್ ಹತ್ತಿದಾಗಲೂ ತನ್ನ ಸೀಟಿನಲ್ಲಿ ಪರಚಯದವರ‍್ಯಾರೂ ಕುಳಿತುಕೊಳ್ಳದಿದ್ದಾಗ ನೀಲಿ ಈ ಹುಡುಗಿಯರೆಲ್ಲ ಇಡಿಯ ಶಾಲೆಗೆ ಈ ವಿಷಯವನ್ನು ಡಂಗೂರ ಸಾರದಿದ್ದರೆ ಸಾಕೆಂದುಕೊಂಡಳು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ

Read More

ಭೂಮಿಯ ಮೇಲಿನ ಸುಂದರ ಸಮೃದ್ಧ ದೇಶ: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

ಈಗ ನಾನೊಬ್ಬನೆ ಹೊರಗಿದ್ದು ನಮ್ಮ ಗುಂಪಿನ ಎಲ್ಲರೂ ಒಳಗಿದ್ದರು. ನಮ್ಮ ಗೈಡ್ ಎಲ್ಲರೂ ಹೋಗುವುದನ್ನು ದೃಢಪಡಿಸಿಕೊಂಡು ಹಿಂದೆಬರುತ್ತಿದ್ದನು. ನನ್ನ ಸಮಸ್ಯೆಯನ್ನು ನೋಡಿದ ಗೈಡ್, `ಕೆಳಗಡೆ ಬಗ್ಗಿಕೊಂಡು ಬಂದುಬಿಡಿ ಸರ್’ ಎಂದ. ಒಂದೆರಡು ಕ್ಷಣ ಸುತ್ತಲೂ ನೋಡಿ ಕೊನೆಗೆ ನೆಲದಲ್ಲಿ ಕುಳಿತುಕೊಂಡು ಮಗುವಿನಂತೆ ಕಾಲುಗಳನ್ನು ಬಿಟ್ಟು ದೇಖಿಕೊಂಡು ಒಳಕ್ಕೆ ಹೋಗಿಬಿಟ್ಟೆ. ಹಿಂದೆ ಇದ್ದ ಇಬ್ಬರು ಯುರೋಪಿಯನ್ ಮಹಿಳೆಯರು ಕಣ್ಣುಗಳನ್ನು ಸಣ್ಣದಾಗಿಸಿಕೊಂಡು ವಿಚಿತ್ರ ಪ್ರಾಣಿಯನ್ನು ನೋಡುವಂತೆ ನನ್ನ ಕಡೆಗೆ ನೋಡಿದರು. ಅಲ್ಲೆಲ್ಲ ಕ್ಯಾಮರಾಗಳಿದ್ದರೂ ಅವು ನನ್ನನ್ನು ಕ್ಷಮಿಸಿಬಿಟ್ಟಿದ್ದವು ಎನಿಸುತ್ತದೆ.
ಸ್ವಿಟ್ಜರ್ಲೆಂಡ್ ದೇಶದ ಪ್ರವಾಸ ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಬರಹ

Read More

ಕೂರಾಪುರಾಣ ೮: ಸ್ವಪ್ರೇಮ ಮತ್ತು ನಾಯಿಪ್ರೇಮ ಎಂಬ ಪರಿಶುದ್ಧ ಪ್ರೇಮಗಳು

ಎಲ್ಲರಿಗು ಪರಮಶ್ರೇಷ್ಟರಾಗುವುದು ಸಾಧ್ಯವಿಲ್ಲ ಆದರೆ ಶ್ರೇಷ್ಟರಾಗುವುದು ಖಂಡಿತ ಸಾಧ್ಯವಿದೆ ಎಂದು ನನ್ನ ನಂಬಿಕೆ. ನಿಮಗೆ ನಾಯಿಯ ಬಗ್ಗೆ ಭಯ ಅಥವಾ ಅನಾದರ ಅಥವಾ ಮತ್ತೇನೋ ಇದ್ದರೂ ನಾಯಿಯೊಂದನ್ನು ಹತ್ತಿರದಿಂದ ನೋಡಲು ಶುರು ಮಾಡಿದಾಗ ಅದು ಖಂಡಿತ ದೂರವಾಗಿ ಶುದ್ಧವಾದ ಅಂತಃಕರಣವೊಂದು ಹುಟ್ಟುತ್ತದೆ. ಇದಕ್ಕೆ ನಾನೇ ಉದಾಹರಣೆ. ನಾನೊಬ್ಬಳು ನಾಯಿಪ್ರೇಮಿಯಾಗುತ್ತೇನೆ, ಆಗಬಲ್ಲೆ ಎಂದು ನಾನು ಯಾವತ್ತು ಯೋಚಿಸಿರಲಿಲ್ಲ.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ಎಂಟನೆಯ ಕಂತು

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ