Advertisement

Month: January 2025

ಅಣ್ಣನಿಗೆ ಗೊತ್ತಿಲ್ಲದ ದೊಡ್ಡಣ್ಣ ಸಿಕ್ಕಿದರು!: ಗುರುಪ್ರಸಾದ ಕುರ್ತಕೋಟಿ ಸರಣಿ

ನಾನು ದೊಡ್ಡಣ್ಣ ಅವರನ್ನು ಗುರುತಿಸಿದ ಕೊಡಲೇ ಅವರಿಗೆ ನಾನು ಕನ್ನಡಿಗ ಅಂತ ಗೊತ್ತಾಗಿ ಹೋಯ್ತು.. ಅವರು ನನ್ನ ಕೈ ಹಿಡಿದುಕೊಂಡು ನೀವು ಕನ್ನಡದವರ? ಬನ್ನಿ ಬನ್ನಿ ಅಂತ ಅಲ್ಲಿಯೇ ಹತ್ತಿರದಲ್ಲಿದ್ದ ಬೆಂಚ್ ಮೇಲೆ ಕೂತು ನನ್ನನ್ನೂ ಜೊತೆಯಲ್ಲಿ ಕೂಡಿಸಿಕೊಂಡರು. ಇದೆಲ್ಲವನ್ನೂ ನೋಡುತ್ತಿದ್ದ ನನ್ನ ಅಣ್ಣ ಇದ್ಯಾವುದರ ಪರಿವೆಯೇ ಇಲ್ಲದಂತೆ ನಿಂತಿದ್ದ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ತಾರನೆಯ ಬರಹ

Read More

ಐಫೆಲ್‌ ಟವರ್‌ಗಿಂತ ತಿರುಪತಿಯೇ ವಾಸಿ!: ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

1887 ಜನವರಿ, 28ರಂದು ಅಡಿಪಾಯ ಅಗೆಯಲು ಪ್ರಾರಂಭಿಸಿ 1889 ಮಾರ್ಚ್ 31ರಂದು ಗೋಪುರವನ್ನು ಕಟ್ಟಿ ಮುಗಿಸಲಾಯಿತು. ಇಪ್ಪತ್ತು ವರ್ಷಗಳಲ್ಲಿ ಗೋಪುರವನ್ನು ಕೆಡವಲು ಮೊದಲಿಗೆ ತೀರ್ಮಾನಿಸಲಾಗಿತ್ತು. ಜನರು ಮೊದಲಿಗೆ ಗೋಪುರ ತುಂಬಾ ಕೆಟ್ಟದಾಗಿ ಕಾಣಿಸುತ್ತಿದೆ, ಪ್ಯಾರಿಸ್ ನಗರದ ಅಂದವನ್ನು ಕೆಡಿಸಿಬಿಟ್ಟಿದೆ ಎಂದು ದೂರಿದರು. ಆದರೆ ಅದು ಮುಂದಿನ ದಿನಗಳಲ್ಲಿ ಪ್ಯಾರಿಸ್‌ಗೆ ದೊಡ್ಡ ಆಸ್ತಿಯಾಗಿ ಮಾರ್ಪಟ್ಟಿತು. ಮುಂದಿನ ದಿನಗಳಲ್ಲಿ ಗೋಪುರದ ಮೇಲೆ ಸಂವಹನ, ಗುರುತ್ವಾಕರ್ಷಣೆ, ವಿದ್ಯುಚ್ಛಕ್ತಿ ಮತ್ತು ಪವನಶಾಸ್ತ್ರ ಪ್ರಯೋಗಾಲಯವನ್ನು ಅದರ ಮೇಲೆ ಸ್ಥಾಪನೆ ಮಾಡಲಾಯಿತು.
ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ

Read More

ಅಪ್ಪ ಅಂಬೋ ಆಲದಮರ: ಸುಮಾ ಸತೀಶ್ ಸರಣಿ

ಅಪ್ಪ ಅವ್ರ ಕಾಲದ ಗಂಡಸ್ರಿಗಿಂತ ವಸಿ ಮುಂದ್ವರೆದ ಯೋಚ್ನೆ ಮಾಡೋರು. ಎಲ್ರೂ ಓದ್ಬೇಕೂನ್ನೋರು. ತಾತಂಗೆ, ನಮ್ಮತ್ತೆದೀರ್ಗೆ ಲೈಬ್ರರೀಯಿಂದ ಕತೆ ಪುಸ್ತಕ ತಂದ್ಕೊಡೋರು. ತಂಗಿದೀರು ಕತೆ ಬರಿತೀವಿ ಅಂದ್ರೆ ಪುಸ್ತಕ ಪೆನ್ನು ತಂದ್ಕೊಟ್ಟು ಬೆನ್ನು ತಟ್ಟೋರು. ಸಂಗೀತ ಕಲಿಸಾಕೆ ಹಾರ್ಮೋನಿಯಂ ಮೇಷ್ಟ್ರು ಇಟ್ಟಿದ್ರು. ಕೊನೆ ತಂಗೀಗೆ ಮೊದ್ಲನೇ ಸಲ ಹೆರಿಗೇಲಿ ಮಗ ಹೋಗಿಬಿಟ್ತಂತೆ. ಮಂಕಾಗಿ ಬಿಟ್ಟಾಗ ಅಪ್ಪ ಕತೆಪುಸ್ತಕ ತಂದ್ಕೊಟ್ಟು ಓದೋಕೆ ಯೋಳತಿದ್ರಂತೆ. ನಾಗರ ಪಂಚಮಿ ಬಂದ್ರೆ ಎಲ್ಲಾ ಅಕ್ಕತಂಗೀರೂ ಖುಷೀಲಿಂದ್ಲೆ ಬೆನ್ನು ತೊಳ್ಯೋರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮ ತಂದೆಯವರ ಕುರಿತ ಬರಹ ಇಲ್ಲಿದೆ

Read More

ಹಾಸ್ಯದ ಹೊಂಬಿಸಿಲು ಹಳಿಸುತ್ತಿದೆಯೇ?: ಡಾ. ರಾಜೇಂದ್ರಕುಮಾರ್‌ ಮುದ್ನಾಳ್ ಬರಹ

ಮಾತು ‘ಮನೆ’ ಕಟ್ಟಬೇಕು, ಮಾತು ಮೌನವಾಗಬೇಕು. ಮಾತು ‘ಮಮತೆ’ಯಾಗಬೇಕು ಮಾತು ‘ಹಾಸ್ಯದ ಮನ್ವಂತರ ‘ಸೃಷ್ಟಿಸಬೇಕು. ಡಿವಿಜಿ ಹೇಳುವಂತೆ ‘ನಗು ನಗುವ ಕಣ್ಣುಗಳಿಗೆ ಹೊಗೆಯ ನೂದಲು ಬೇಡ ‘ಎಂಬ ಮಾತು ನೆನಪಿಸಿಕೊಳ್ಳಬೇಕು. ಹಾಸ್ಯ ‘ವಿಕಾಸ’ ವಾಗಬೇಕೇ ವಿನಹ ಕಸದ ಬುಟ್ಟಿಯಾಗಬಾರದಲ್ಲವೇ? ನಗುವಿನ ಕನಸುಗಳ ಮನೆಯಲ್ಲಿ ಕಲ್ಲು ಬೀಳದೆ ಕಲ್ಲು ಕೂಡ ಕರಗುವಂತ ನಗುವನ್ನು ಸೃಷ್ಟಿಸುವಂತಹ ನಗೆ ಹಬ್ಬ ನಮ್ಮದಾಗಬೇಕು.
ಹಾಸ್ಯ ಕಾರ್ಯಕ್ರಮಗಳ ಗುಣಮಟ್ಟದ ಕುರಿತು ಡಾ. ರಾಜೇಂದ್ರಕುಮಾರ್‌ ಮುದ್ನಾಳ್ ಬರಹ

Read More

ಡಾ. ಸದಾಶಿವ ದೊಡಮನಿ ಬರೆದ ಈ ದಿನದ ಕವಿತೆ

“ಬಹುಶಃ ಇದಕ್ಕೆ
ಮೈ, ಮನಕ್ಕೆಲ್ಲ ಕಜ್ಜಿಯೂ ಹತ್ತಿದಂತಿದೆ
ದುಖಾನ್, ಮಾರ್ಕೇಟ್, ಮನೆ, ನೆರೆಹೊರೆ,
ಅಂಗಳ, ಅಡವಿ ಎಲ್ಲೇ ಬಿದ್ದಿರಲಿ, ಓಡಾಡುತ್ತಿರಲಿ
ಪರಚಿಕೊಳ್ಳುತ್ತಲೇ ಇರುತ್ತದೆ
‘ಹಚಿ’ ಎಂದರೆ ಹತ್ತಿರ, ಹತ್ತಿರವೇ ಬರುತ್ತದೆ
ಎಲ್ಲಿಲ್ಲದ ಅತೀ ವಿನಯ ತೋರುತ್ತದೆ
ಎದೆಯಲ್ಲಿ ಜಂತಿ ಎಣೆಸುವ ಕುಟಿಲ ತಂತ್ರವನ್ನೇ ನೇಯುತ್ತಿರುತ್ತದೆ”-ಡಾ. ಸದಾಶಿವ ದೊಡಮನಿ ಬರೆದ ಈ ದಿನದ ಕವಿತೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ