ದೀಪಾವಳಿ ನೋಪಿ ಮತ್ತು ಹಬ್ಬದ ಹೂರಣ: ಸುಮಾ ಸತೀಶ್ ಸರಣಿ
ದೀಪಾವಳಿ ಟೇಮ್ನಾಗೆ ಉಚ್ಚೆಳ್ಳು ಗಿಡಗಳಲ್ಲಿ ಅಚ್ಚ ಅರಿಶಿನ ಬಣ್ಣ ಹುಯ್ದಂಗೆ ಹುವ್ವ ತುಂಬಕಂತಿತ್ತು. ಅವು ದೀಪಾವಳಿ ಹಬ್ಬದಾಗೆ ಶ್ರೇಷ್ಠವಂತೆ. ಅವುನ್ನ ತಂದು ಹೊಸಿಲಿಗೆ ಇಟ್ಟು ದೀಪ ಮುಟ್ಟಿಸ್ತಿದ್ರು. ಎಲ್ಲಾ ಹೊಸಿಲಿಗೂ ದೀಪ ಮುಟ್ಟಿಸ್ಬೇಕು. ತುಳಸಿ ಗಿಡದ ಹತ್ರ, ದೀಪದ ಸಾಲು ಇಡ್ತಿದ್ರು. ಉಚ್ಚೆಳ್ಳು ಗಿಡ ಸಿಗ್ದೇ ಇದ್ದೋರು ತಂಗಡಿ ಗಿಡದ ಹುವ್ವ ತಂದು ಇಡ್ತಿದ್ರು. ಅದೂ ಹಳದೀ ಬಣ್ವೇಯಾ. ಸಣ್ಣ ಸಣ್ಣ ಹುವ್ವ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಹಳ್ಳಿ ಹಬ್ಬಗಳ ಸಂಭ್ರಮಗಳ ವಿವರಗಳು ಇಲ್ಲಿದೆ